ಉಪೇಂದ್ರಗೆ 'ಹೀಗೆ ಮಾಡಬೇಡಿ' ಎಂದ '2.0' ನಿರ್ದೇಶಕ ಶಂಕರ್.!

ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅಭಿನಯಿಸಿರುವ '2.0' ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗಿದೆ. ಈ ವಿಶೇಷವಾಗಿ ಚೆನ್ನೈನಲ್ಲಿ ಆಲ್ ಇಂಡಿಯಾ ಮಿಡೀಯಾ ಸುದ್ದಿಗೋಷ್ಠಿ ಮಾಡಲಾಯಿತು.

ಈ ವೇದಿಕೆಯಲ್ಲಿ ರಜನಿಕಾಂತ್, ಅಕ್ಷಯ್ ಕುಮಾರ್, ನಟಿ ಆಮಿ ಜಾಕ್ಸನ್, ನಿರ್ದೇಶಕ ಶಂಕರ್, ಎಲ್ಲರೂ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ನಿರ್ದೇಶಕ ಶಂಕರ್, ಕನ್ನಡದ ನಟ, ನಿರ್ದೇಶಕ ಉಪೇಂದ್ರ ಅವರಿಗೆ ಒಂದು ಸಲಹೆ ನೀಡಿದ್ದಾರೆ.

ಉಪೇಂದ್ರ ಅವರ 'ಎ', 'ಉಪೇಂದ್ರ' ಅಂತಹ ಸಿನಿಮಾಗಳನ್ನ ನೋಡಿ ಸ್ಫೂರ್ತಿಯಾಗಿಸಿಕೊಂಡಿದ್ದ ಶಂಕರ್, 'ಉಪ್ಪಿಗೆ ಹೀಗೆ ಮಾಡಬೇಡಿ' ಎಂದಿದ್ದಾರೆ. ಅಷ್ಟಕ್ಕೂ, '2.0' ಟ್ರೈಲರ್ ಕಾರ್ಯಕ್ರಮದಲ್ಲಿ ಉಪ್ಪಿ ವಿಷ್ಯ ಯಾಕೆ ಬಂತು.? ಉಪೇಂದ್ರ ಬಗ್ಗೆ ಶಂಕರ್ ಯಾಕೆ ಮಾತಾಡಿದ್ರು.? ಎಂದು ತಿಳಿಯಲು ಮುಂದೆ ಓದಿ....

ಶಂಕರ್ ಗೆ ಪ್ರಶ್ನೆ ಮಾಡಿದ ಉಪ್ಪಿ

ಶಂಕರ್ ಗೆ ಪ್ರಶ್ನೆ ಮಾಡಿದ ಉಪ್ಪಿ

ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಕನ್ನಡ ನಟ ಉಪೇಂದ್ರ ಅವರು ವಿಡಿಯೋ ಬೈಟ್ ಮೂಲಕ ಮಾತನಾಡಿದರು. ಚಿತ್ರಕ್ಕೆ ಶುಭ ಹಾರೈಸಿದ ಉಪೇಂದ್ರ ಅವರು ಶಂಕರ್ ಗೆ ಒಂದು ಪ್ರಶ್ನೆ ಕೇಳಿದರು. 'ನಾನೊಬ್ಬ ನಟ ಮತ್ತು ನಿರ್ದೇಶಕ. ನೀವೊಬ್ಬ ನಿರ್ದೇಶಕರಾಗಿ ನನಗೆ ಯಾವ ಒಂದು ಸಲಹೆ ಕೊಡ್ತೀರಾ'.? ಎಂದು ಕೇಳಿದ್ರು.

'ಹೀಗೆ ಮಾಡಬೇಡಿ' ಎಂದ ಶಂಕರ್

'ಹೀಗೆ ಮಾಡಬೇಡಿ' ಎಂದ ಶಂಕರ್

ಉಪೇಂದ್ರ ಅವರು ಕೇಳಿದ್ದು ಪ್ರಶ್ನೆಯನ್ನುವುದಕ್ಕಿಂತ ಸಲಹೆ. ಹಾಗಾಗಿ, ಅವರ ಮಾತಿಗೆ ಗೌರವಿಸಿದ ಶಂಕರ್, ''ನೀವು ನಿಮಗೆ ಅನುಕೂಲಕರವಾದ ನಿರ್ದೇಶಕ, ಅನುಕೂಲಕರವಾದ ನಿರ್ಮಾಪಕ, ಅನುಕೂಲಕರವಾದ ಸ್ಕ್ರಿಪ್ಟ್, ಅನುಕೂಲಕರವಾದ ತಂತ್ರಜ್ಞರಿಗಾಗಿ ಸಿನಿಮಾ ಮಾಡಬೇಡಿ. ಒಂದೊಳ್ಳೆ ವಿಷಯವನ್ನ ಆಯ್ಕೆ ಮಾಡಿಕೊಂಡು, ಅದಕ್ಕೆ ಸರಿಯಾದ ನಿರ್ಮಾಪಕ, ನಿರ್ದೇಶಕ, ತಂತ್ರಜ್ಞರನ್ನ ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಿ' ಎಂದು ಹೇಳಲು ಬಯಸುತ್ತೇನೆ' ಎಂದರು.

'ಎ' ಸಿನಿಮಾ ನನಗೆ ಸ್ಫೂರ್ತಿ

'ಎ' ಸಿನಿಮಾ ನನಗೆ ಸ್ಫೂರ್ತಿ

ಇನ್ನು ಉಪೇಂದ್ರ ನಿರ್ದೇಶನ ಹಾಗೂ ನಟಿಸಿದ್ದ ಎ ಸಿನಿಮಾದ ಬಗ್ಗೆ ಮಾತನಾಡಿದ ಶಂಕರ್ 'ನಾನು ಅವರ ಸಿನಿಮಾಗಳನ್ನ ನೋಡಿ ಇಷ್ಟಪಟ್ಟಿದ್ದೀನಿ, ಎ, ಉಪೇಂದ್ರ ಚಿತ್ರಗಳು ನನಗೆ ಹಲವು ಬಾರಿ ಸ್ಫೂರ್ತಿಯಾಗಿದೆ. ನನ್ನ ಹಲವು ಚಿತ್ರಗಳ ಚರ್ಚೆಯಲ್ಲಿ 'ಎ' ಚಿತ್ರದ ಸ್ಕ್ರಿಪ್ಟ್ ಬಗ್ಗೆ ಮಾತನಾಡಿದ್ದೀನಿ' ಎಂದು ಶ್ಲಾಘಿಸಿದ್ದಾರೆ.

ರಜನಿಯನ್ನ ಮೆಚ್ಚಿಕೊಂಡ ಉಪ್ಪಿ

ರಜನಿಯನ್ನ ಮೆಚ್ಚಿಕೊಂಡ ಉಪ್ಪಿ

ಇನ್ನು '2.0' ಚಿತ್ರಕ್ಕಾಗಿ ತಾವು ಕೂಡ ಕಾಯುತ್ತಿರುವುದಾಗಿ ಉಪೇಂದ್ರ ಹೇಳಿಕೊಂಡಿದ್ದರು. ರಜನಿಕಾಂತ್ ಮತ್ತು ಶಂಕರ್ ಅವರ ಬಗ್ಗೆ ಖುಷಿ ವ್ಯಕ್ತಪಡಿಸಿದ ಉಪೇಂದ್ರ, ನಮ್ಮ ಕನ್ನಡದಲ್ಲೂ ನೀವು ಸಿನಿಮಾ ಮಾಡಿ ಎಂದು ಮನವಿ ಮಾಡಿಕೊಂಡರು.

More from Filmibeat

English summary
Tamil director shankar appreciate to kannada actor upendra for his direction and acting.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X