For Quick Alerts
  ALLOW NOTIFICATIONS  
  For Daily Alerts

  ಡಬ್ಬಿಂಗ್ ಪರ ಮಾತಾಡುವವರನ್ನಾ ದಬ್ರೀ ಆಚೆಗೆ

  By ಶಶಾಂಕ್ ತಾಲ್ಯ, ನಿರ್ದೇಶಕರು
  |

  ಡಬ್ಬಿಂಗ್.. ದಬ್ಬಿಂಗ್..ದಬ್ಬಿಂಗ್. ಇದುವರೆಗೂ ಡಬ್ಬಿಂಗ್ ವಿರುದ್ದ ನಾನೆಲ್ಲೂ ಮಾತನಾಡದೇ ಇರುವುದಕ್ಕೆ ಕಾರಣ, ನಾವಿನ್ನೂ ಚಿಕ್ಕವರು. ಹಿರಿಯರು ಮಾತನಾಡಲಿ, ನಾವು ಅವರನ್ನು ಬೆಂಬಲಿಸೋಣ ಎನ್ನುವುದೇ ಹೊರತು ಮತ್ತೇನು ಅಲ್ಲ.

  ಆದರೆ, ಮೊನ್ನೆ ನಡೆದ ಡಬ್ಬಿಂಗ್ ವಿರುದ್ದದ ಸಭೆಯಲ್ಲಿ ಕನ್ನಡದ ಸ್ಟಾರ್ ನಿರ್ದೇಶಕರು ಯಾರೂ ಹಾಜರಿರಲಿಲ್ಲ ಎಂದು ನನ್ನ ಹೆಸರನ್ನು ಉಲ್ಲೇಖಿಸಿ 'ಇವರೆಲ್ಲರೂ ಡಬ್ಬಿಂಗ್ ಪರವೇ" ಎಂದು ಖಾಸಗಿ ಚಾನೆಲೊಂದು ಗುಲ್ಲೆಬ್ಬಿಸಿದೆ. ಅದಕ್ಕೆ ಉತ್ತರವಾಗಿ ನಾನೀಗ ಮಾತನಾಡುತ್ತಿದ್ದೇನೆ, ಬರೆಯುತ್ತಿದ್ದೇನೆ. (ಡಬ್ಬಿಂಗ್ ಬೇಕೋ ಬೇಡವೋ : ಸಂವಾದದಲ್ಲಿ ಪಾಲ್ಗೊಳ್ಳಿ)

  ಡಬ್ಬಿಂಗ್ ಸಂಸ್ಕೃತಿ ಎಂಬುದು ಕೇವಲ ಕನ್ನಡಕಷ್ಟೇ ಅಲ್ಲ, ಜಗತ್ತಿನ ಯಾವುದೇ ಭಾಷೆಗಾದರೂ ಮಾರಕ ಎನ್ನುವುದನ್ನು ಡಬ್ಬಿಂಗ್ ಬೇಕು ಅನ್ನುವವರು ಮೊದಲು ತಿಳಿದು ಕೊಳ್ಳಲಿ. ಅದಕ್ಕೆ ಹಲವಾರು ನಿದರ್ಶನಗಳು ನಮ್ಮ ಕಣ್ಮುಂದೆ ಇದೆ. ಕರ್ನಾಟಕಕ್ಕೆ ಡಬ್ಬಿಂಗ್ ಭೂತ ಕಾಲಿಟ್ಟರೇ ಏನೆಲ್ಲಾ ಅನಾಹುತಗಳು ಆಗಬಹುದು ಎಂಬುದರ ಬಗ್ಗೆ ಈಗಾಗಲೇ ಎಲ್ಲಾ ವಾಹಿನಿಗಳು ಮತ್ತು ಪತ್ರಿಕೆಗಳಲ್ಲಿ ಸವಿವರವಾದ ವರದಿ ಪ್ರಕಟವಾಗಿದೆ.

  ಇನ್ನು, ಡಬ್ಬಿಂಗ್ ಪರವಾಗಿ ಮಾತನಾಡುತ್ತಿರುವವರು ಬಗ್ಗೆ ನಾನು ಹೇಳುವುದಿಷ್ಟೇ. ಕನ್ನಡ ಭಾಷೆಯ ಮೇಲಿನ ಕಾಳಜಿಯಿಂದ ಡಬ್ಬಿಂಗ್ ಬೇಕು ಎನ್ನುತ್ತಿರುವವರು ನಿಜಕ್ಕೂ ಯಾವುದಾದರ ಮೇಲೂ ಕಾಳಜಿ ಇಲ್ಲದಿವರು, ಸ್ವಂತ ತಂದೆ ತಾಯಿಯ ಮೇಲೆ.

  ಅವರ ವಾದ ಏನಿದ್ದರೂ ಪುಗ್ಸಟ್ಟೆ ಪ್ರಚಾರಗಿಟ್ಟಿಸುವುದು. 'ಹೊತ್ತಿ ಉರಿಯುವ ಮನೆಯಲ್ಲಿ ಅಡುಗೆ ಮಾಡಬಯಸುವವ' ಎನ್ನುವ ಮಾತಿನಂತೆ ಡಬ್ಬಿಂಗ್ ಬೇಕು ಎನ್ನುವವರ ಕೀಳು ಮನಸ್ಸುಗಳ ಮಾತಿಗೆ ನಾವು ಬೆಲೆ ಕೊಡದಿದ್ದರೆ ಅವರು ತಾನಾಗೇ ಬಾಯಿ ಮುಚ್ಚುತ್ತಾರೆ. (ರಾಜ್ ಫ್ಯಾಮಿಲಿಗೆ ಇಂಡಸ್ಟ್ರಿ ಆಳುವ ದುರುದ್ದೇಶವಿಲ್ಲ)

  ಕನ್ನಡದ ವಾಹಿನಿಗಳಿಗೆ ಮತ್ತು ಪತ್ರಿಕೆಗಳಿಗೆ ನಿಜವಾಗಿಯೂ ಕನ್ನಡದ ಕುರಿತಾಗಿ ಕಾಳಜಿ ಇದ್ದರೆ ಅಂಥಹ ಸ್ವಾರ್ಥಿಗಳನ್ನು ತಮ್ಮ ವರದಿ ಮತ್ತು ಬರಹಗಳಿಂದ ದೂರವಿಡಲಿ.

  ಕೊನೆಯದಾಗಿ, ನನ್ನ ಗುರುಗಳಾದ ಹಂಸಲೇಖರವರ ವಾದವೇ ನನ್ನ ವಾದ. ಹಾಗಾಗಿ ನಾನು ಕೇವಲ ಡಬ್ಬಿಂಗ್ ವಿರೋಧಿ ಮಾತ್ರ ಅಲ್ಲ ರಿಮೇಕ್ ವಿರೋಧಿ ಕೂಡಾ..

  ಸಿರಿಗನ್ನಡಂಗೆಲ್ಗೆ, ಡಬ್ಬಿಂಗ್ ಪರ ಮಾತಾಡುವವರನ್ನಾ ದಬ್ರೀ ಆಚೆಗೆ...

  English summary
  Director Shashank Taalya stand on Dubbing culture in Kannada. He said I am against Dunning and I am following whaterver my Guru Hamsalekha stand on this. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X