»   » ಕನ್ನಡದ 3 ಯುವ ನಟರಿಗೆ ಮನಸೋತ ನಿರ್ದೇಶಕ ಶಶಾಂಕ್

ಕನ್ನಡದ 3 ಯುವ ನಟರಿಗೆ ಮನಸೋತ ನಿರ್ದೇಶಕ ಶಶಾಂಕ್

Posted By:
Subscribe to Filmibeat Kannada

'ಮುಂಗಾರು ಮಳೆ-2' ಚಿತ್ರದ ನಂತರ ನಿರ್ದೇಶಕ ಶಶಾಂಕ್ ಸಿಕ್ಕಾಪಟ್ಟೆ ಪ್ಲಾನ್ ಮಾಡಿಕೊಂಡಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೊತೆ ಸಿನಿಮಾ ಮಾಡುವ ಬಗ್ಗೆ ಬಹಿರಂಗಪಡಿಸಿದ್ದ ಶಶಾಂಕ್ ಈಗ ಮತ್ತೊಂದು ವಿಶೇಷವಾದ ಸುದ್ದಿ ನೀಡಿದ್ದಾರೆ.

ನಿರ್ದೇಶಕರಾಗಿ ಯಶಸ್ಸು ಕಂಡಿರುವ ಶಶಾಂಕ್ ಅವರು ಈಗ ಮತ್ತೊಂದು ಹಂತಕ್ಕೆ ಹೋಗಿ ನಿರ್ಮಾಪಕರಾಗುತ್ತಿದ್ದಾರೆ. ಅದು ಒಂದೇ ಸಲ ಮೂರು ಸಿನಿಮಾಗಳನ್ನ ನಿರ್ಮಾಣ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ.

ಈ ಮೂರು ಚಿತ್ರಗಳಿಗೆ ನಾಯಕರನ್ನ ಕೂಡ ಅಂತಿಮ ಮಾಡಿಕೊಂಡಿರುವ ಶಶಾಂಕ್, ಆದಷ್ಟೂ ಬೇಗ ಈ ಚಿತ್ರಗಳಿಗೆ ಚಾಲನೆ ನೀಡಲಿದ್ದಾರೆ. ಹಾಗಿದ್ರೆ, ಶಶಾಂಕ್ ಅವರ ನಿರ್ಮಾಣದಲ್ಲಿ ಮೂಡಿ ಬರಲಿರುವ ಆ ಮೂರು ಚಿತ್ರಗಳು ಯಾವುದು? ಮತ್ತು ಈ ಚಿತ್ರಕ್ಕೆ ಆಯ್ಕೆ ಆಗಿರುವ 3 ನಾಯಕರು ಯಾರು? ಎಂದು ಮುಂದೆ ಓದಿ.....

ಮೊದಲ ಚಿತ್ರಕ್ಕೆ ಅಜಯ್ ರಾವ್ ನಾಯಕ

ಶಶಾಂಕ್ ನಿರ್ಮಾಣದಲ್ಲಿ ಬರಲಿರುವ ಮೊದಲ ಚಿತ್ರಕ್ಕೆ ಕೃಷ್ಣ ಖ್ಯಾತಿಯ ಅಜಯ್ ರಾವ್ ನಾಯಕ. ಈ ಚಿತ್ರವನ್ನ ಶಶಾಂಕ್ ಅವರ ಬಳಿ ಸಹಾಯಕ ನಿರ್ದೇಶಕರಾಗಿದ್ದ ರಘು ಕೋವಿ ಅವರು ಆಕ್ಷನ್ ಕಟ್ ಹೇಳಲಿದ್ದಾರೆ. ಈ ಚಿತ್ರಕ್ಕೆ 'ತಾಯಿಗೆ ತಕ್ಕ ಮಗ' ಎಂದು ಹೆಸರಿಡಲಾಗಿದೆ. ಅಕ್ಟೋಬರ್ ನಲ್ಲಿ ಆರಂಭವಾಗುವ ಸಾಧ್ಯತೆ ಇದೆ.

ಶಶಾಂಕ್ ನಿರ್ದೇಶನದಲ್ಲಿ ರಾಜರತ್ನ ಪುನೀತ್ ರಾಜ್ ಕುಮಾರ್ ಸಿನಿಮಾ

ಎರಡನೇ ಚಿತ್ರದಲ್ಲಿ ರಿಷಿ

ಶಶಾಂಕ್ ಅವರ ನಿರ್ಮಾಣ ಸಂಸ್ಥೆಯಲ್ಲಿ ತಯಾರಾಗಲಿರುವ ಎರಡನೇ ಚಿತ್ರಕ್ಕೆ 'ಆಪರೇಷನ್ ಅಲಮೇಲಮ್ಮ' ಖ್ಯಾತಿಯ ರಿಷಿ ನಾಯಕನಾಗಿ ಅಭಿನಯಿಸಲಿದ್ದಾರೆ. ಈ ಚಿತ್ರವನ್ನ ಹೊಸ ನಿರ್ದೇಶಕರಿಗಾಗಿ ಹುಡುಕಾಟ ನಡೆಯುತ್ತಿದೆ.

ಶಶಾಂಕ್ 3ನೇ ಚಿತ್ರಕ್ಕೆ 'ಕ್ರೇಜಿಬಾಯ್'

ಸ್ಟಾರ್ ನಿರ್ದೇಶಕನ ಮೂರನೇ ಚಿತ್ರಕ್ಕೆ ದಿಲೀಪ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ದಿಲೀಪ್ 'ಕ್ರೇಜಿಬಾಯ್' ಚಿತ್ರದ ಮೂಲಕ ನಾಯಕನಾಗಿ ಎಂಟ್ರಿ ಕೊಟ್ಟಿದ್ದರು.

ಪುನೀತ್ ಜೊತೆ ಸಿನಿಮಾ

ಈ ಮೂರು ಚಿತ್ರಗಳನ್ನ ನಿರ್ಮಾಣ ಮಾಡುತ್ತಿರುವ ಶಶಾಂಕ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಚಿತ್ರವನ್ನ ನಿರ್ದೇಶನ ಮಾಡಲಿದ್ದಾರೆ. ಈ ಮೂಲಕ ಇಷ್ಟು ದಿನ ನಿರ್ದೇಶಕರಾಗಿದ್ದ, ಶಶಾಂಕ್ ಈಗ ನಿರ್ಮಾಪಕರಾಗಿಯೂ ಯಶಸ್ಸು ಕಾಣಲು ಸಿದ್ದವಾಗಿದ್ದು, ಮತ್ತಷ್ಟು ಒಳ್ಳೆಯ ಸಿನಿಮಾಗಳನ್ನ ನೀಡುವ ತಯಾರಿಯಲ್ಲಿದ್ದಾರೆ.

ಪುನೀತ್ 'ಮನೆ'ಯಿಂದ ಹೊರಬಿತ್ತು 'ಬಿಗ್' ಸಿನಿಮಾ ಸುದ್ದಿ

English summary
Director Shashank will Produce three Movie in his banner. Shashank already has three projects under his belt that will involve actors Krishna Ajai Rao, Rishi and Dileep, separately.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada