For Quick Alerts
  ALLOW NOTIFICATIONS  
  For Daily Alerts

  ಎಫ್‌ಟಿಐಐ ನೂತನ ಅಧ್ಯಕ್ಷರಾಗಿ ಖ್ಯಾತ ನಿರ್ಮಾಪಕ ಶೇಖರ್ ಕಪೂರ್ ನೇಮಕ

  |

  ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಫ್‌ಟಿಐಐ) ಸೊಸೈಟಿಯ ನೂತನ ಅಧ್ಯಕ್ಷರನ್ನಾಗಿ ಖ್ಯಾತ ನಿರ್ಮಾಪಕ ಶೇಖರ್ ಕಪೂರ್ ಅವರನ್ನು ನೇಮಕ ಮಾಡಲಾಗಿದೆ.

  ಕೇಂದ್ರ ಸರ್ಕಾರದ ಅಧೀನದಲ್ಲಿ ನಡೆಯುತ್ತಿರುವ ಈ ಪ್ರತಿಷ್ಠಿತ ಚಲನಚಿತ್ರ ಶಾಲೆ ಪುಣೆಯಲ್ಲಿದ್ದು, ಈ ಶಾಲೆಗೆ ಶೇಖರ್ ಕಪೂರ್ ನೂತನ ಸಾರಥಿಯನ್ನಾಗಿ ನೇಮಕಗೊಳಿಸಲಾಗಿದೆ ಎಂದು ಮಂಗಳವಾರ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಪ್ರಕಟಿಸಿದ್ದಾರೆ.

  ಬಾಂಬೆ ಹೈ ಕೋರ್ಟ್‌ನಲ್ಲಿ ಕಂಗನಾ ರಣಾವತ್ ಅರ್ಜಿ ವಿಚಾರಣೆಬಾಂಬೆ ಹೈ ಕೋರ್ಟ್‌ನಲ್ಲಿ ಕಂಗನಾ ರಣಾವತ್ ಅರ್ಜಿ ವಿಚಾರಣೆ

  ''ಹೆಸರಾಂತ ಶೇಖರ್ ಕಪೂರ್ ಅವರನ್ನು ಎಫ್‌ಟಿಐಐ ಸೊಸೈಟಿಯ ಅಧ್ಯಕ್ಷರಾಗಿ ಮತ್ತು ಎಫ್‌ಟಿಐಐನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಲು ಸಂತೋಷವಾಗಿದೆ'' ಎಂದು ಪ್ರಕಾಶ್ ಜಾವಡೇಕರ್ ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ.

  ಎಫ್‌ಟಿಐಐ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶೇಖರ್ ಕಪೂರ್ ಅವರಿಗೆ ನಟಿ ಕಂಗನಾ ರಣಾವತ್ ಶುಭಕೋರಿದ್ದಾರೆ. ''ಅದ್ಭುತ ಸುದ್ದಿ, ಅಭಿನಂದನೆಗಳು ಸರ್, ಇನ್ನೂ ಇಂತಹ ಜವಾಬ್ದಾರಿಯುತ ಸ್ಥಾನಗಳಲ್ಲಿ ನಿಮ್ಮನ್ನು ನೋಡಲು ಆಶಿಸುತ್ತೇವೆ. ನಿಮ್ಮ ಮಾರ್ಗದರ್ಶನ ನಮಗೆ ಬೇಕು'' ಎಂದು ಟ್ವೀಟ್ ಮಾಡಿದ್ದಾರೆ.

  Director Shekhar Kapur has been appointed as the new President of FTII
  ಅವತ್ತು ಪುಟಗೋಸಿ ಅಕೋಕೆ ಹಿಂದೆ, ಮುಂದೆ ನೋಡಲಿಲ್ಲ SPB |Om Sai Prakash | Filmibeat Kannada

  ಶೇಖರ್ ಕಪೂರ್ ಅವರು 2023ರ ಮಾರ್ಚ್ 3 ರವರೆಗೆ ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. 'ಮಸೂಮ್', 'ಮಿಸ್ಟರ್ ಇಂಡಿಯಾ', 'ಬ್ಯಾಂಡಿಟ್ ಕ್ವೀನ್', ಆಸ್ಕರ್ ನಾಮನಿರ್ದೇಶಿತ 'ಎಲಿಜಬೆತ್' ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿದ್ದಾರೆ.

  English summary
  Director Shekhar Kapur has been appointed as the new President of FTII Society and Chairman of FTII Governing Council.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X