»   » 'ಗುಳ್ಟು' ಚಿತ್ರ ನೋಡಿ ಫುಲ್ ಮಾರ್ಕ್ಸ್ ಕೊಟ್ಟ 'ಸ್ಟಾರ್ ಡೈರೆಕ್ಟರ್'.!

'ಗುಳ್ಟು' ಚಿತ್ರ ನೋಡಿ ಫುಲ್ ಮಾರ್ಕ್ಸ್ ಕೊಟ್ಟ 'ಸ್ಟಾರ್ ಡೈರೆಕ್ಟರ್'.!

Posted By:
Subscribe to Filmibeat Kannada
'ಗುಳ್ಟು' ಚಿತ್ರ ನೋಡಿ ಫುಲ್ ಮಾರ್ಕ್ಸ್ ಕೊಟ್ಟ 'ಸ್ಟಾರ್ ಡೈರೆಕ್ಟರ್'.! | Filmibeat Kannada

'ಗುಳ್ಟು' ಚಿತ್ರವನ್ನ ನೋಡಿದ ಪ್ರೇಕ್ಷಕರು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಸಿನಿಮಾದ ಬಗ್ಗೆ, ಚಿತ್ರದ ಕಲಾವಿದರ ಬಗ್ಗೆ ಹಾಗೂ ನಿರ್ದೇಶಕರ ಕೆಲಸಕ್ಕೆ ಶಬ್ಬಾಶ್ ಎನ್ನುತ್ತಿದ್ದಾರೆ. ಆರಂಭದಲ್ಲಿ ಹೊಸಬರ ಸಿನಿಮಾ ಎಂಬ ಕಾರಣಕ್ಕೆ ಸೈಡ್ ಲೈನ್ ಆಗಿದ್ದ ಸಿನಿಮಾ ದಿನಗಳು ಕಳೆಯುತ್ತಿದ್ದಂತೆ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ.

ಸಿನಿರಸಿಕರಂತೆ ಸಿನಿಮಾ ಕಲಾವಿದರು ಕೂಡ ಚಿತ್ರವನ್ನ ನೋಡಿ ಥ್ರಿಲ್ ಆಗಿದ್ದಾರೆ. ನಟ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಸಂಗೀತ ಭಟ್ ಸೇರಿದಂತೆ ಹಲವು ನಟ-ನಟಿಯರು ಹಾಗೂ ತಂತ್ರಜ್ಞರು 'ಗುಳ್ಟು' ನೋಡಿ ಇಷ್ಟಪಟ್ಟಿದ್ದಾರೆ.

ಇದೀಗ, ಕನ್ನಡದ ಮತ್ತೊಬ್ಬ ನಿರ್ದೇಶಕ 'ಗುಳ್ಟು' ನೋಡಿ ಹ್ಯಾಪಿಯಾಗಿದ್ದಾರೆ. ಹೌದು, ಸಿಂಪಲ್ ನಿರ್ದೇಶಕ ಸುನಿ 'ಗುಳ್ಟು' ಚಿತ್ರಕ್ಕೆ ಫಿದಾ ಆಗಿದ್ದಾರೆ. ಇತ್ತೀಚಿಗಷ್ಟೆ ಸಿನಿಮಾ ನೋಡಿರುವ ಸುನಿ ಆನ್ ಲೈನ್ ಕಥೆಗೆ ಮನಸೋತಿದ್ದಾರೆ.

ಜನಮನ ಗೆದ್ದ 'ಗುಳ್ಟು' ಚಿತ್ರಕ್ಕೆ ಬಂತು ಆಫರ್.!

Director Simple suni appreciate to gultoo

ಸಿನಿಮಾ ನೋಡಿ ಹೊರಬಂದ ನಂತರ ತಮ್ಮ ಟ್ವಿಟ್ಟರ್ ಅಕೌಂಟ್ ಮೂಲಕ ಚಿತ್ರದ ಅನುಭವ ಹಂಚಿಕೊಂಡಿದ್ದಾರೆ. ಚಿತ್ರದ ಕಥೆ, ನಾಯಕ, ನಾಯಕಿ ಹಾಗೂ ಹಿನ್ನೆಲೆ ಸಂಗೀತ, ನಿರ್ದೇಶಕನ ಕೈಚಳಕ ಹೀಗೆ ಎಲ್ಲದಕ್ಕೂ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

ಸಿನಿತಾರೆಯರು ಮೆಚ್ಚಿದ 'ಗುಳ್ಟು': ಎಲ್ಲರಿಗೂ ಇಷ್ಟವಾಗೋದಕ್ಕೆ ಕಾರಣವೇನು.?

ತಮ್ಮದೇ ಸ್ಟೈಲ್ ನಲ್ಲಿ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಸುನಿ ''Internet ಕಥೆ ತಾಜತನದ online ನಿರೂಪಣೆ ನವಿರು data ಸಂಭಾಷಣೆ ಅಚ್ಚುಕಟ್ಟಾದ code ಅಭಿನಯ ದೃಶ್ಯಕ್ಕೆ ತಕ್ಕ encrypted ಸಂಗೀತ & decrypted ಬೆಳಕು ವಿನ್ಯಾಸ login ಆಗಿ ಚಿತ್ರ ನೋಡಿ gultoo(logout) ಆಗಿ ಅಷ್ಟರಲ್ಲಿ ಆ ಚಿತ್ರ ಮತ್ತು ನಿರ್ದೇಶಕ ನಿಮ್ಮನ್ನು hack ಮಾಡಿರುತ್ತಾರೆ'' ಎಂದಿದ್ದಾರೆ.

Director Simple suni appreciate to gultoo

ನವೀನ್ ಶಂಕರ್ ನಾಯಕನಾಗಿ ಅಭಿನಯಿಸಿರುವ ಈ ಚಿತ್ರದಲ್ಲಿ ಸೋನು ಗೌಡ, ಅವಿನಾಶ್, ರಂಗಾಯಣ ರಘು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಜರ್ನಾಧನ್ ಚಿಕ್ಕಣ್ಣ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ.

English summary
Kannada Director Simple suni has taken his twitter account to appreciate kannada movie gultoo. The movie has released on march 30th all over karnataka and get good response from audience

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X