For Quick Alerts
  ALLOW NOTIFICATIONS  
  For Daily Alerts

  ಆರ್‌ಸಿಬಿ ತಂಡದಲ್ಲಿ ಯಾರೆಲ್ಲಾ ಇರಬೇಕು? ಇದು ಸಿಂಪಲ್ ಸುನಿ ಇಲೆವೆನ್

  |

  ಕ್ರಿಕೆಟ್ ಮೇಲೆ ಆಸಕ್ತಿ ಹೊಂದಿರುವ ಹಲವು ನಟ-ನಟಿಯ ಹಾಗೂ ನಿರ್ದೇಶಕ ಮತ್ತು ತಂತ್ರಜ್ಞರು ಸ್ಯಾಂಡಲ್‌ವುಡ್‌ನಲ್ಲಿದ್ದಾರೆ. ಈ ವಿಚಾರದಲ್ಲಿ ನಿರ್ದೇಶಕ ಸಿಂಪಲ್ ಸುನಿ ಸ್ವಲ್ಪ ಹೆಚ್ಚು ಆಕ್ಟಿವ್ ಆಗಿರ್ತಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಟ್ಟ ಅಭಿಮಾನಿಯಾಗಿರುವ ಸುನಿ, ಆರ್‌ಸಿಬಿಗೆ ಎಲ್ಲ ಸಮಯದಲ್ಲೂ ಬೆಂಬಲ ಸೂಚಿಸಿದ್ದಾರೆ. ಪಂದ್ಯದ ಬಗ್ಗೆ, ಆಟಗಾರರ ಬಗ್ಗೆ ಟ್ವಿಟ್ಟರ್‌ನಲ್ಲಿ ಚರ್ಚೆ ಮಾಡ್ತಾರೆ.

  Ragini ಹಾಗು Sanjana ಬಗ್ಗೆ ಹೊಸ ಬಾಂಬ್ ಸಿಡಿಸಿದ Prashanth Sambargi | Filmibeat Kannada

  ಇದೀಗ, 2020ನೇ ವರ್ಷದ ಐಪಿಎಲ್ ಟೂರ್ನಿ ಆರಂಭಕ್ಕೆ ಎಲ್ಲ ಸಿದ್ಧತೆ ನಡೆದಿದೆ. ಈ ಸೀಸನ್‌ನಲ್ಲಿ ಆರ್‌ಸಿಬಿ ತಂಡದ ಪರ ಯಾರು ಆಡ್ತಾರೆ, ಯಾರು ಆಡಬೇಕು ಎನ್ನುವ ಚರ್ಚೆ ಕ್ರಿಕೆಟ್‌ ಅಭಿಮಾನಿಗಳಲ್ಲಿ ಸಹಜ. ಈ ಬಗ್ಗೆ ಸುನಿ ಸಹ ಅಭಿಪ್ರಾಯ ವ್ಯಕ್ತಪಡಿಸಿದ್ದು, ತಮ್ಮ ನೆಚ್ಚಿನ ಆರ್‌ಸಿಬಿ ತಂಡವನ್ನು ಸೂಚಿಸಿದ್ದಾರೆ. ಯಾರೆಲ್ಲಾ ಸ್ಥಾನ ಪಡೆದಿದ್ದಾರೆ? ಮುಂದೆ ಓದಿ...

  ಆರಂಭಿಕರಾಗಿ ಯಾರು?

  ಆರಂಭಿಕರಾಗಿ ಯಾರು?

  ಆರ್‌ಸಿಬಿ ತಂಡದ ಆರಂಭಿಕರಾಗಿ ಕರ್ನಾಟಕದ ದೇವ್‌ದತ್ ಪಡಿಕ್ಕಲ್ ಮತ್ತು ಆಸ್ಟ್ರೇಲಿಯಾ ಆರೋನ್ ಪಿಂಚ್ ಆಡುವುದು ಉತ್ತಮ ಎಂದು ಸುನಿ ಹೇಳಿದ್ದಾರೆ. ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಹಾಗೂ ನಾಲ್ಕನೇ ಕ್ರಮಾಂಕದಲ್ಲಿ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಇರಲಿ ಎಂದಿದ್ದಾರೆ.

  ಐಪಿಎಲ್ ವೇಳಾಪಟ್ಟಿ ಬಿಡುಗಡೆಗೆ ಕೊನೆಗೂ ಮುಹೂರ್ತ ನಿಗದಿ: ಮಾಹಿತಿ ನೀಡಿದ ಗಂಗೂಲಿ

  ವಿಕೆಟ್ ಕೀಪರ್ ಯಾರು?

  ವಿಕೆಟ್ ಕೀಪರ್ ಯಾರು?

  ಆರ್‌ಸಿಬಿ ತಂಡದಲ್ಲಿ ಪಾರ್ಥಿವ್ ಪಟೇಲ್ ಇದ್ದಾರೆ. ಸುನಿ ಅವರ ಇಲೆವೆನ್‌ನಲ್ಲಿ ಪಾರ್ಥಿವ್‌ಗೆ ಸ್ಥಾನ ಇಲ್ಲ. ಅವರ ಬದಲು ಎಬಿ ಡಿವಿಲಿಯರ್ಸ್ ವಿಕೆಟ್ ಕೀಪಿಂಗ್ ಮಾಡುವ ಆಯ್ಕೆ ಸೂಚಿಸಿದ್ದಾರೆ.

  ಮೂವರು ಆಲ್‌ರೌಂಡರ್

  ಮೂವರು ಆಲ್‌ರೌಂಡರ್

  ಸುನಿಯ ಆರ್‌ಸಿಬಿ ತಂಡದಲ್ಲಿ ಮೂವರು ಆಲ್‌ರೌಂಡರ್‌ಗೆ ಸ್ಥಾನ ಸಿಕ್ಕಿದೆ. ಶಿವಮ್ ದುಬೆ, ಇಂಗ್ಲೆಂಡ್ನ ಮೋಯಿನ್ ಅಲಿ, ಹಾಗೂ ವಾಚಿಂಗ್ಟನ್ ಸುಂದರ್ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ತಂಡಕ್ಕೆ ಸಹಕಾರಿಯಾಗಬಲ್ಲರು ಎಂದು ನಂಬಿದ್ದಾರೆ.

  ಆರ್‌ಸಿಬಿ ತಂಡದಲ್ಲಿ ಪ್ರಮುಖ ಬದಲಾವಣೆ : ವೇಗಿ ಅಲಭ್ಯ, ಆಸಿಸ್ ಸ್ಪಿನ್ನರ್ ಸೇರ್ಪಡೆ

  ಪ್ರಮುಖ ಬೌಲರ್ ಯಾರು?

  ಪ್ರಮುಖ ಬೌಲರ್ ಯಾರು?

  ಇನ್ನು ಬೌಲಿಂಗ್ ವಿಭಾಗಕ್ಕೆ ಬಂದರೆ ನವದೀಪ್ ಶೈನಿ, ಉಮೇಶ್ ಯಾದವ್, ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೇನ್ ಮತ್ತು ಭಾರತದ ಸ್ಪಿನ್ನರ್ ಯಜವೇಂದ್ರ ಚಹಾಲ್ ಈ ವರ್ಷ ಆರ್‌ಸಿಬಿ ತಂಡದಲ್ಲಿ ಆಡಲಿ ಎಂದು ಸುನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  English summary
  Kannada movie Director Simple Suni predicted about royal challengers bangalore team for ipl 2020.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X