For Quick Alerts
  ALLOW NOTIFICATIONS  
  For Daily Alerts

  ಆರ್‌ಸಿಬಿ ಟ್ವಿಟರ್‌ನ ಹ್ಯಾಕ್ ಮಾಡಿದ್ದಾರೆ, ನಮ್ ಮೇಲೆ ಕಣ್ಣು ಬಿದ್ದಿದೆ ಎಂದ ಸಿಂಪಲ್ ಸುನಿ

  |

  ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ತಂಡವೆಂದರೆ ಕರ್ನಾಟಕದವರಿಗೆ ಬಲು ಪ್ರೀತಿ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸಿನಿಮಾ ಸೆಲೆಬ್ರಿಟಿ ಅಭಿಮಾನಿಗಳೂ ಸಹ ಇದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕನ್ನಡ ಚಲನಚಿತ್ರರಂಗದಲ್ಲಿರುವ ಸೆಲೆಬ್ರಿಟಿ ಅಭಿಮಾನಿಗಳು ಎಂದಾಕ್ಷಣ ಬಹತೇಕರ ತಲೆಗೆ ಮೊದಲು ಬರುವ ಹೆಸರೇ ನಿರ್ದೇಶಕ ಸಿಂಪಲ್ ಸುನಿ.

  ತಮ್ಮ ಸಿನಿಮಾದಲ್ಲಿ ಮಾತ್ರವಲ್ಲದೇ ಸಾಮಾಜಿಕ ಜಾಲತಾಣದಲ್ಲಿಯೂ ಸಹ ಒಳ್ಳೆಯ ಬರಹವನ್ನು ಬರೆದುಕೊಂಡು ತನ್ನ ಫಾಲೋವರ್ಸ್‌ಗೆ ಮನರಂಜನೆ ನೀಡುವ ಸಿಂಪಲ್ ಸುನಿ ಇಂಡಿಯನ್ ಪ್ರೀಮಿಯರ್ ಲೀಗ್ ಸಮಯದಲ್ಲಿ ಅತಿಹೆಚ್ಚಾಗಿ ಟೂರ್ನಿ ಕುರಿತು ಪೋಸ್ಟ್ ಹಂಚಿಕೊಳ್ಳುತ್ತಾರೆ. ಅದರಲ್ಲಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯಗಳ ಕುರಿತಾಗಿ ಓರ್ವ ಅಭಿಮಾನಿಯಾಗಿ ಸಿಂಪಲ್ ಸುನಿ ಹಂಚಿಕೊಳ್ಳುವ ಪೋಸ್ಟ್‌ಗಳು ಜನಪ್ರಿಯ.

  ಇನ್ನು ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟ್ವಿಟರ್ ಖಾತೆಯನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತಮ್ಮ ಖಾತೆಯನ್ನು ತಮಗೆ ಮರಳಿ ಸಿಗುವಂತೆ ಮಾಡಿ ಎಂದು ಟ್ವಿಟರ್ ಬಳಿ ಮನವಿ ಮಾಡಿದೆ. ಈ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಒಳಗಾಗಿದ್ದು ಸಿಂಪಲ್ ಸುನಿ ಸಹ ಈ ಕುರಿತು ಪ್ರತಿಕ್ರಿಯಿಸಿದ್ದಾರೆ.

  "ಆರ್‌ಸಿಬಿ ಟ್ವಿಟರ್ ಪೇಜ್ ಹ್ಯಾಕ್ ಮಾಡಿದ್ದಾರೆ, ಟೂರ್ನಿ ಮುಂಚೇನೆ ನಮ್ ಮೇಲೆ ಕಣ್ ಹಾಕ್ತಿದ್ದಾರೆ ಅಂದ್ರೆ...ಈ ಸಲ" ಎಂದು ಬರೆದುಕೊಂಡಿರುವ ಸಿಂಪಲ್ ಸುನಿ ಈ ಸಲನೂ ಕಪ್ ನಮ್ದೆ ಎಂಬ ಅರ್ಥದಲ್ಲಿ ಟ್ವೀಟ್ ಮಾಡಿದ್ದಾರೆ. ಹೀಗೆ ಹ್ಯಾಕ್ ಬಗ್ಗೆ ಟ್ವೀಟ್ ಮಾಡಿಯೂ ಮನರಂಜನೆ ನೀಡಿದ್ದಾರೆ ಸಿಂಪಲ್ ಸುನಿ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿದ್ದ ಕಿಡಿಗೇಡಿಗಳು ಬೋರ್ಡ್ ಆಪ್ ಯಾಚ್ ಕ್ಲಬ್ ಎಂಬ ಹೆಸರಿಗೆ ಬದಲಿಸಿದ್ದರು. ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಮ್ಮ ಖಾತೆಯನ್ನು ಮರಳಿ ಪಡೆಯಯವಲ್ಲಿ ಯಶಸ್ವಿಯಾಗಿದ್ದಾರೆ.

  English summary
  Director Simple Suni reacted about Royal Challengers Bangalore twitter hack. Read on
  Saturday, January 21, 2023, 16:27
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X