For Quick Alerts
  ALLOW NOTIFICATIONS  
  For Daily Alerts

  'ಅವತಾರ್ ಪುರುಷ' ಬಳಿಕ ಸಿಂಪಲ್ ಸುನಿ ಮುಂದಿನ ಸಿನಿಮಾಗಳು

  |

  ಕನ್ನಡ ಪ್ರತಿಭಾನ್ವಿತ ನಿರ್ದೇಶಕ ಸಿಂಪಲ್ ಸುನಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಸುನಿ ಬರ್ತಡೇಗೆ ಕನ್ನಡ ಸ್ಟಾರ್ ನಟ-ನಟಿಯರು, ತಂತ್ರಜ್ಞರು ವಿಶ್ ಮಾಡಿದ್ದಾರೆ. ರಕ್ಷಿತ್ ಶೆಟ್ಟಿ, ಸಂತೋಷ್ ಆನಂದ್‌ರಾಮ್, ಶುಭ್ರ ಅಯ್ಯಪ್ಪ, ಧನಂಜಯ್, ನಿರ್ದೇಶಕ ರಘುರಾಮ್, ಎಪಿ ಅರ್ಜುನ್ ಸೇರಿದಂತೆ ಹಲವರು ಶುಭ ಕೋರಿದ್ದಾರೆ.

  ಸದ್ಯ ಶರಣ್ ಜೊತೆ ಅವತಾರ್ ಪುರುಷ ಸಿನಿಮಾ ಮಾಡುತ್ತಿರುವ ಸುನಿ ಹುಟ್ಟುಹಬ್ಬದಂದು ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನ ನಿರ್ಮಾಣದಲ್ಲಿ ಹೊಸ ಚಿತ್ರ ಮಾಡುವುದಾಗಿ ಪ್ರಕಟಿಸಿದ್ದಾರೆ.

  ಗಣೇಶ್ ಜೊತೆ ಸಖತ್

  ಅವತಾರ್ ಪುರುಷ ಸಿನಿಮಾ ನಂತರ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಸಖತ್ ಸಿನಿಮಾ ಮಾಡಲಿದ್ದಾರೆ.

  ಹುಟ್ಟುಹಬ್ಬದ ದಿನ 'ರಾಬಿನ್ ಹುಡ್' ಸಿನಿಮಾ ಅನೌನ್ಸ್ ಮಾಡಿದ ಸಿಂಪಲ್ ಸುನಿಹುಟ್ಟುಹಬ್ಬದ ದಿನ 'ರಾಬಿನ್ ಹುಡ್' ಸಿನಿಮಾ ಅನೌನ್ಸ್ ಮಾಡಿದ ಸಿಂಪಲ್ ಸುನಿ

  ದಿ ಸ್ಟೋರಿ ಆಫ್ ರಾಯಗಢ್

  ಸಖತ್ ಸಿನಿಮಾ ಆದ್ಮೇಲೆ ಗಣೇಶ್ ಅವರು ಜೊತೆ ಸುನಿ ಮತ್ತೊಂದು ಸಿನಿಮಾ ಮಾಡಲಿದ್ದಾರೆ. 'ದಿ ಸ್ಟೋರಿ ಆಫ್ ರಾಯಗಢ್' ಸಿನಿಮಾ ಸಹ ಘೋಷಣೆ ಮಾಡಿದ್ದು, ಈ ಚಿತ್ರ 2020ರಲ್ಲಿ ಸೆಟ್ಟೇರಲಿದೆ ಎನ್ನಲಾಗಿದೆ.

  Director Simple Sunis Upcoming Movies List

  ರಾಬಿನ್‌ಹುಡ್

  ಪುಷ್ಕರ್ ಮಲ್ಲಿಕಾರ್ಜುನ ನಿರ್ಮಾಣ ಸಂಸ್ಥೆಯಲ್ಲಿ 'ರಾಬಿನ್‌ಹುಡ್' ಸಿನಿಮಾ ಘೋಷಣೆಯಾಗಿದ್ದು, ಸದ್ಯಕ್ಕೆ ಹೀರೋ ಯಾರು ಎಂದು ಬಹಿರಂಗವಾಗಿಲ್ಲ.

  'ಆ ದಿನಗಳು' ಚೇತನ್ ಹೊಸ ಸಿನಿಮಾಗೆ ಸಿಂಪಲ್ ಸುನಿ ನಿರ್ದೇಶನ'ಆ ದಿನಗಳು' ಚೇತನ್ ಹೊಸ ಸಿನಿಮಾಗೆ ಸಿಂಪಲ್ ಸುನಿ ನಿರ್ದೇಶನ

  ಚೇತನ್ ಜೊತೆ ಒಂದು ಸಿನಿಮಾ

  ಜೇಮ್ಸ್ ಚಿತ್ರದ ಶೂಟಿಂಗ್ ಗಾಗಿ ಹೊಸಪೇಟೆಗೆ ಪುನೀತ್ ರಾಜಕುಮಾರ್ | Filmibeat Kannada

  'ಆ ದಿನಗಳು' ಚೇತನ್ ಕುಮಾರ್ ಜೊತೆ ಸುನಿ ಒಂದು ಸಿನಿಮಾ ಮಾಡ್ತಿದ್ದಾರೆ. ವರ್ಷಗಳ ಹಿಂದೆಯೆ ಮಾತುಕತೆ ಆಗಿತ್ತು, ಅದರಂತೆ ಸಿನಿಮಾ ಘೋಷಣೆಯಾಗಿದೆ. ಈ ಪ್ರಾಜೆಕ್ಟ್ ಮುಂದಿನ ವರ್ಷ ಆರಂಭವಾಗಲಿದೆ.

  English summary
  Director Simple Suni Upcoming Movies List: Avatar Purusha. Robinhood, The Story of Rayagada, Sakath movie is Official.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X