»   » ಬಾಹುಬಲಿಯನ್ನು ಕಟ್ಟಪ್ಪ ಕೊಂದ ರಹಸ್ಯ ಬಹಿರಂಗ

ಬಾಹುಬಲಿಯನ್ನು ಕಟ್ಟಪ್ಪ ಕೊಂದ ರಹಸ್ಯ ಬಹಿರಂಗ

Posted By:
Subscribe to Filmibeat Kannada

ಎಸ್.ಎಸ್ ರಾಜಮೌಳಿ ನಿರ್ದೇಶನದ ಈ ವರ್ಷದ ಬಹುನಿರೀಕ್ಷಿತ ಚಿತ್ರ 'ಬಾಹುಬಲಿ' ನೋಡಿದ ಎಲ್ಲಾ ಪ್ರೇಕ್ಷಕರಿಗೆ ಕಟ್ಟ ಕಡೆಗೆ ಮೂಡಿದ ಪ್ರಶ್ನೆ ಏನಪ್ಪಾ ಅಂದ್ರೆ 'ಬಾಹುಬಲಿ'ಯನ್ನ ಕಟ್ಟಪ್ಪ ಯಾಕೆ ಕೊಂದ.

ಹೌದು ಪ್ರೇಕ್ಷಕರ ಈ ಅದ್ಭುತ ಅನುಮಾನಕ್ಕೆ ಇದೀಗ ನಿರ್ದೇಶಕ ರಾಜಮೌಳಿ ಉತ್ತರ ನೀಡಿದ್ದಾರೆ. ಚಿತ್ರದ ಕ್ಲೈಮಾಕ್ಸ್ ನಲ್ಲಿ ಕಟ್ಟಪ್ಪ ಬಾಹುಬಲಿಯನ್ನು ಇರಿದು ಕೊಲ್ಲುವ ದೃಶ್ಯ ಇದೆ. ಅದನ್ನು ಯಾಕೆ ಚಿತ್ರದ ಕೊನೆಯ ಭಾಗದಲ್ಲಿ ತರಲಾಗಿತ್ತು ಅನ್ನೋ ವೀಕ್ಷಕರ ಪ್ರಶ್ನೆಗೆ ರಾಜಮೌಳಿ ಉತ್ತರಿಸಿದ್ದಾರೆ.[ಮೋದಿಗೂ ಕಾಡಿದ ಬಾಹುಬಲಿ' ಮಿಲಿಯನ್ ಡಾಲರ್ ಪ್ರಶ್ನೆ !]

Director SS Rajamouli finally revealed ‘why Kattappa had to Kill Baahubali’

ಇತ್ತೀಚಗೆ ಈ ವಿಚಾರವಾಗಿ ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ರಾಜಮೌಳಿ ಕಟ್ಟಪ್ಪ-ಬಾಹುಬಲಿಯ ರಹಸ್ಯ ಬಿಚ್ಚಿಟ್ಟಿದ್ದಾರೆ.

ಅಂದಹಾಗೆ ನಿಜವಾಗಲೂ ನಿರ್ದೇಶಕ ರಾಜಮೌಳಿ ಆರಂಭದಲ್ಲಿ ಬೇರೆ ರೀತಿ ಕ್ಲೈಮಾಕ್ಸ್ ತೋರಿಸಲು ನಿರ್ಧಾರ ಮಾಡಿದ್ದರು, ಆದರೆ, ಕೊನೆ ಘಳಿಗೆಯಲ್ಲಿ ಕಟ್ಟಪ್ಪ ಬಾಹುಬಲಿಯನ್ನು ಕೊಲ್ಲುವ ದೃಶ್ಯವನ್ನು ಕ್ಲೈಮಾಕ್ಸ್ ಮಾಡಿ ಇಡೀ ಪ್ರೇಕ್ಷಕ ವರ್ಗಕ್ಕೆ ಕುತೂಹಲ ಮೂಡಿಸಿದ್ದರು.

'ಬಾಹುಬಲಿ' ಚಿತ್ರದ ಭಾಗ 2, ನಿರ್ಮಾಣ ಮಾಡುವ ಸಂದರ್ಭದಲ್ಲಿ ಭಾಗ ಒಂದನ್ನು ಎಲ್ಲಿ ಕೊನೆ ಮಾಡುವುದು ಎಂದು ಚಿತ್ರತಂಡಕ್ಕೆ ಪ್ರಶ್ನೆಯೊಂದು ಎದುರಾಯಿತು. ಆ ಸಂದರ್ಭದಲ್ಲಿ ಶಿವಗಾಮಿ(ರಮ್ಯಕೃಷ್ಣ) ಅವರು ಮಾಹಿಷ್ಮತಿ(ಬಾಹುಬಲಿ) ಯನ್ನು ರಾಜ್ಯದ ಉತ್ತರಾಧಿಕಾರಿಯಾಗಿ ಘೋಷಣೆ ಮಾಡುವ ಸಂದರ್ಭದಲ್ಲಿ ಚಿತ್ರ ಕೊನೆ ಮಾಡಲು ನಿರ್ದೇಶಕ ರಾಜಮೌಳಿ ಮೊದಲು ನಿರ್ಧಾರ ಮಾಡಿದ್ದರಂತೆ ಅದಕ್ಕೆ ಚಿತ್ರತಂಡ ಕೂಡ ಒಪ್ಪಿಗೆ ನೀಡಿತ್ತಂತೆ.[ಬಾಹುಬಲಿ ವೀಕ್ಷಿಸಲು ನರೇಂದ್ರ ಮೋದಿಗೆ ಪ್ರಭಾಸ್ ಆಹ್ವಾನ]

Director SS Rajamouli finally revealed ‘why Kattappa had to Kill Baahubali’

ಆದರೆ ವಿಷ್ಯಾ ಏನಪ್ಪಾ ಅಂದ್ರೆ ಚಿತ್ರವನ್ನ ಅಲ್ಲಿಗೆ ಕೊನೆ ಮಾಡಿದರೆ ಚಿತ್ರ ಸಾಧರಣವಾಗಿ ಏನೂ ಇಲ್ಲದೇ ಸಪ್ಪೆಯಾಗಿ ಮುಗಿದು ಹೋಗುತ್ತದೆ, ಅಷ್ಟೇ ಅಲ್ಲದೇ ಪ್ರೇಕ್ಷಕನಿಗೆ ಭಾಗ 2, ನೋಡಲು ಕುತೂಹಲ ಹುಟ್ಟುವುದಿಲ್ಲ ಎಂದು ಕೊನೆಗೆ ಕಟ್ಟಪ್ಪನೇ ಬಾಹುಬಲಿಯನ್ನು ಕೊಂದಿದ್ದು, ಅಂತ ಕಟ್ಟಪ್ಪ(ಸತ್ಯರಾಜ್) ಶಿವುಡು(ಪ್ರಭಾಸ್)ಗೆ ಹೇಳುವ ದೃಶ್ಯವನ್ನು ಕ್ಲೈಮಾಕ್ಸ್ ಮಾಡಿದೆ ಎಂದು ರಾಜಮೌಳಿ ನುಡಿದಿದ್ದಾರೆ.[ಬಾಹುಬಲಿ ಚಿತ್ರದಿಂದ ಬಾಕ್ಸಾಫೀಸ್ ದಾಖಲೆಗಳ ಧೂಳಿಪಟ]

ಅಂತೂ ಇದೀಗ ಕ್ಲೈಮಾಕ್ಸ್ ಸೂಪರ್ ಹಿಟ್ ಆಗಿದೆ, ಈ ಕ್ಲೈಮಾಕ್ಸ್ ನೋಡಿದ ಬಳಿಕ ವೀಕ್ಷಕರು ಕಟ್ಟಪ್ಪನ ಪಾತ್ರವನ್ನ ನೋಡಲೆಂದೇ ಮತ್ತೆ ಮತ್ತೆ 'ಬಾಹುಬಲಿ' ಚಿತ್ರ ನೋಡುತ್ತಿದ್ದಾರಂತೆ.

ಅಲ್ಲಿಗೆ ಮತ್ತೆ ಪ್ರೇಕ್ಷಕರಿಗೆ ಕನ್ ಫ್ಯೂಶನ್ ಸ್ಟಾರ್ಟ್, ಅಂತೂ ಇಂತೂ ಕೊನೆಗೂ ಕಟ್ಟಪ್ಪ ಯಾಕೆ ಬಾಹುಬಲಿಯನ್ನ ಕೊಂದ ಅನ್ನೋ ಪ್ರಶ್ನೆಗೆ ಉತ್ತರ ಮುಂದಿನ ಭಾಗದಲ್ಲಿ ನಿರೀಕ್ಷಿಸಿ ಅನ್ನುತ್ತಾರೆ ನಿರ್ದೇಶಕ ರಾಜಮೌಳಿ.

English summary
Director SS Rajamouli finally revealed ‘why Kattappa had to Kill Baahubali’. He said that he felt there should be some kind of suspense in the end to make it more interesting.Baahubali first part was ended with a scene in which the trustworthy slave of Baahubali, Kattappa killed Baahubali.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada