For Quick Alerts
  ALLOW NOTIFICATIONS  
  For Daily Alerts

  ದೇಸಾಯಿ ಹೊಸ ಚಿತ್ರಕ್ಕೆ ಅನಂತ್, ಕೋಮಲ್ ಕಿಕ್

  By Mahesh
  |

  ಕನ್ನಡ ಚಿತ್ರರಂಗ ಕಂಡ ಸೃಜನಶೀಲ ನಿರ್ದೇಶಕರಲ್ಲಿ ಒಬ್ಬರಾದ ಸುನೀಲ್ ಕುಮಾರ್ ದೇಸಾಯಿ ಅವರು ಛಲ ಬಿಡದ ತಿವಿಕ್ರಮನಂತೆ ಮತ್ತೊಮ್ಮೆ ಡೈರೆಕ್ಟರ್ ಟೋಪಿ ಧರಿಸುತ್ತಿದ್ದಾರೆ. ಪ್ರಬುದ್ಧ ನಟ ಅನಂತ್ ನಾಗ್ ಹಾಗೂ ವೈವಿಧ್ಯ ನಟ ಕೋಮಲ್ ಕುಮಾರ್ ಅವರ ಕಾಂಬಿನೇಷನ್ ನಲ್ಲಿ ಹೊಸ ಚಿತ್ರ ನಿರ್ದೇಶಿಸುತ್ತಿರುವುದಾಗಿ ಹೇಳಿದ್ದಾರೆ.

  ಇದಕ್ಕೂ ಮುನ್ನ ದೇಸಾಯಿ ಅವರು 'ಸರಿಗಮ' ಎಂಬ ಹೆಸರಿನ ಚಿತ್ರ ನಿರ್ದೇಶಿಸುವ ಬಗ್ಗೆ ಸುದ್ದಿ ಬಂದಿತ್ತು. ಚಿತ್ರದ ಶೂಟಿಂಗ್ ಕೂಡಾ ಆರಂಭವಾಗಿತ್ತು. ಆದರೆ, ನಂತರ ಯಾಕೋ ನಿಂತು ಹೋಗಿತ್ತು.

  ಈಗ ಹೊಸ ಚಿತ್ರದ ಬಗ್ಗೆ ಜನವರಿ 15, 2013ರಂದು ಘೋಷಿಸಲಿದ್ದಾರಂತೆ. ನಿರೀಕ್ಷೆಯಂತೆ ಅನಂತ್ ಹಾಗು ಕೋಮಲ್ ಕಾಂಬಿನೇಷನ್ ನಲ್ಲಿ ಸಂಪೂರ್ಣ ಹಾಸ್ಯಮಯ ಚಿತ್ರ ನೀಡುವ ಪಣ ತೊಟ್ಟಿದ್ದಾರೆ ದೇಸಾಯಿ.

  ತರ್ಕ, ಉತ್ಕರ್ಷ, ಸಂಘರ್ಷ, ನಿರ್ಷ್ಕರ್ಷ, ಬೆಳದಿಂಗಳ ಬಾಲೆ, ನಮ್ಮೂರ ಮಂದಾರ ಹೂವೆ, ಪ್ರತ್ಯರ್ಥ, ಸ್ಪರ್ಶ, ಮರ್ಮ ದಂಥ ಹಿಟ್ ಚಿತ್ರಗಳು ಪ್ರೇಮ ರಾಗ ಹಾಡು ಗೆಳತಿ, ಪರ್ವ ದಂಥ ಉತ್ತಮ ಚಿತ್ರಗಳನ್ನು ಕನ್ನಡ ತೆರೆಗೆ ನೀಡಿದ ಸಾಧನೆ ಪಟ್ಟಿ ದೇಸಾಯಿ ಹೆಗಲ ಮೇಲಿದೆ.

  ಅನಂತ್ ಹಾಗೂ ಕೋಮಲ್ ಕುಮಾರ್ ಜೋಡಿಯಲ್ಲಿ 'ಮಿ. ಗರಗಸ' ಚಿತ್ರ ಭರ್ಜರಿ ಯಶಸ್ವಿಯಾಗಿರುವುದು ಜನರಿಗೆ ಚೆನ್ನಾಗಿ ನೆನಪಿದೆ. 8 ದಿನಗಳಲ್ಲಿ ಶೂಟಿಂಗ್ ಮುಗಿಸಿ ಕಡಿಮೆ ಬಜೆಟ್ ನಲ್ಲಿ ನಿರ್ಮಿಸಿದ ಈ ಚಿತ್ರ ಅಚ್ಚರಿಯ ರೀತಿಯಲ್ಲಿ ಹಿಟ್ ಆಗಿತ್ತು.

  ಸುನೀಲ್ ಕುಮಾರ್ ದೇಸಾಯಿ ಅವರು ಕೂಡಾ ಇದೇ ಫಾರ್ಮೂಲಾದೊಂದಿಗೆ ಕೇವಲ 30 ದಿನಗಳೊಳಗೆ ಚಿತ್ರದ ಶೂಟಿಂಗ್ ಮುಗಿಸುವ ಯೋಜನೆ ಹಾಕಿಕೊಂಡಿದ್ದಾರೆ. ದೇಸಾಯಿ ಅವರ ಆಸೆಗೆ ಅವರ ನಾಲ್ವರು ಧೈರ್ಯ ಮಾಡಿ ಹಣ ಹಾಕಿದ್ದಾರೆ. ದೇಸಾಯಿ ಚಿತ್ರಕ್ಕಾಗಿ ಹಾತೊರೆಯುತ್ತಿರುವ ಅವರ ಅಭಿಮಾನಿಗಳಂತೂ ಕಾತುರದಿಂದ ಕಾದಿದ್ದಾರೆ.

  English summary
  Creative director Sunil Kumar Desai making come back to KFI with a Ananth Nag and Komal Kumar combination. Earlier he launched Sarigama movie but film got stalled for shooting. Next venture will be launched on Jan,15, 2013 according to sources.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X