Just In
- 8 min ago
ನಿಮ್ಮ ಹೆಸರಿನ ಪಕ್ಕ ಯಾವ ನಟ, ನಟಿ, ರಾಜಕಾರಣಿ ಹೆಸರು ಸೇರಿಸಬೇಡಿ: ನಟ ಜಗ್ಗೇಶ್ ಮನವಿ
- 24 min ago
ರಚಿತಾ ರಾಮ್ ಮತ್ತೊಂದು ಸಿನಿಮಾ: 'ಲವ್ ಯೂ ರಚ್ಚು' ಎಂದ ಸ್ಟಾರ್ ನಟ
- 35 min ago
ಪ್ರಭಾಸ್ ಮದುವೆ ಯಾವಾಗ? ದೊಡ್ಡಪ್ಪ ಕೃಷ್ಣಂರಾಜು ಹೇಳಿದ್ದು ಹೀಗೆ
- 42 min ago
ಮಗುವಿಗೆ ಜನ್ಮ ನೀಡಿದ ಬಳಿಕ ಮೊದಲ ಬಾರಿಗೆ ಕ್ಯಾಮರಾ ಮುಂದೆ ಕಾಣಿಸಿಕೊಂಡ ನಟಿ ಅನುಷ್ಕಾ ಶರ್ಮಾ
Don't Miss!
- News
ರಾಮ ಮಂದಿರ ನಿರ್ಮಾಣಕ್ಕೆ 1 ಕೋಟಿ ರು ದೇಣಿಗೆ ನೀಡಿದ ಗೌತಮ್ ಗಂಭೀರ್
- Sports
ಐಪಿಎಲ್ 2021: ವಿದೇಶಿ ಆಟಗಾರರ ಲಭ್ಯತೆ ಹಾಗೂ ತಂಡಗಳಲ್ಲಿ ಉಳಿದಿರುವ ಸ್ಥಾನ
- Lifestyle
ಡಾರ್ಕ್ ಸರ್ಕಲ್ ವಿರುದ್ಧ ಉತ್ತಮವಾಗಿ ಹೋರಾಡುತ್ತೆ ಈ ಎಣ್ಣೆ...
- Finance
ರಿಲಯನ್ಸ್ ಇಂಡಸ್ಟ್ರೀಸ್- ಫ್ಯೂಚರ್ ಸಮೂಹದ ವ್ಯವಹಾರಕ್ಕೆ ಸೆಬಿ ಸಮ್ಮತಿ
- Automobiles
ಆಕ್ಸೆಸ್ 125 ಸ್ಕೂಟರ್ ಬೆಲೆಯನ್ನು ಹೆಚ್ಚಿಸಿದ ಸುಜುಕಿ ಮೋಟಾರ್ಸೈಕಲ್
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸುದೀಪ್ ಜೊತೆ ಸೂರಿ ಸಿನಿಮಾ : ಸಿಹಿ ಸುದ್ದಿ ನೀಡಿದ ನಿರ್ಮಾಪಕ
ಸುಕ್ಕ ಸೂರಿ ಅಂತಾನೆ ಖ್ಯಾತಿ ಗಳಿಸಿರುವ ನಿರ್ದೇಶಕ ಸೂರಿ ಈಗ ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಸದ್ಯ 'ಪಾಪ್ ಕಾರ್ನ್ ಮಂಕಿ ಟೈಗರ್' ಚಿತ್ರದಲ್ಲಿ ಬ್ಯುಸಿ ಇರುವ ಸೂರಿ ಮತ್ತೊಂದು ದೊಡ್ಡ ಬಜೆಟ್ ನ ಸಿನಿಮಾ ಮಾಡುತ್ತಿದ್ದಾರೆ ಎನ್ನುವ ವಿಚಾರ ಬಾರಿ ಚರ್ಚೆಯಾಗುತ್ತಿದೆ.
ಅದರಲ್ಲಿ ಏನು ವಿಶೇಷ ಅಂತೀರಾ. ವಿಶೇಷ ಅಂದ್ರೆ ಸೂರಿ ಈ ಬಾರಿ ನಿರ್ದೇಶನ ಮಾಡುತ್ತಿರುವುದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ. ಹೌದು, ಸೂರಿ ನಿರ್ದೇಶನದ ಸಿನಿಮಾದಲ್ಲಿ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಅನೇಕ ದಿನಗಳಿಂದ ಕೇಳಿ ಬರುತ್ತಿತ್ತು.
ಗಾಂಧಿನಗರದಲ್ಲಿ ಸದ್ದು ಮಾಡುತ್ತಿರುವ ದೊಡ್ಡ ಸುದ್ದಿಗಳಿವು.!
ಆದ್ರೀಗ ಈ ಮಾತು ನಿಜವಾಗಿದೆ. ಕಾರಣ ನಿರ್ಮಾಪಕ ಕೆಪಿ ಶ್ರೀಕಾಂತ್ ಈ ಸಿನಿಮಾದ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ. ಟಗರು ಖ್ಯಾತಿಯ ನಿರ್ಮಾಪಕ ಕೆಪಿ ಶ್ರೀಕಾಂತ್ ಸೂರಿ ಮತ್ತು ಸುದೀಪ್ ಕಾಂಬಿನೇಷನ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಮುಂದೆ ಓದಿ..

ಸುದೀಪ್ ಗೆ ಸೂರಿ ನಿರ್ದೇಶನ
ಇತ್ತೀಚಿಗಷ್ಟೆ 'ಟಗರು' ಚಿತ್ರಮಾಡಿ ಸಖತ್ ಸದ್ದು ಮಾಡಿದ್ದ ಸೂರಿ ಈಗ ಧನಂಜಯ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಇದರ ನಡುವೆ ಈಗ ಸುದೀಪ್ ಗೆ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. ಸೂರಿ ಸಿನಿಮಾ ಅಂದ್ಮೇಲೆ ಪಕ್ಕಾ ಕ್ರೈಮ್, ರಕ್ತ ಮತ್ತು ಆಕ್ಷನ್ ಇರುತ್ತೆ. ಇಂತಹ ರಾ ಸಬ್ಜೆಕ್ಟ್ ಇಟ್ಟುಕೊಂಡು ಸಿನಿಮಾ ಮಾಡುವ ಸೂರಿ ನಿರ್ದೇಶದಲ್ಲಿ ಸುದೀಪ್ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಅಭಿಮಾನಿಗಳ ಕುತೂಹಲ.
'ಕೊಡಗಿಗೆ ಸುಸಜ್ಜಿತ ಆಸ್ಪತ್ರೆ ಬೇಕು' ಅಭಿಯಾನಕ್ಕೆ ಕಲಾವಿದರ ಬೆಂಬಲ

ಕೆಪಿ ಶ್ರೀಕಾಂತ್ ಬಂಡವಾಳ
ಸೂರಿ ಮತ್ತು ಸುದೀಪ್ ಕಾಂಬಿನೇಶನ್ ನ ಸಿನಿಮಾಗೆ ಕೆ.ಪಿ ಶ್ರೀಕಾಂತ್ ಬಂಡವಾಳ ಹೂಡುತ್ತಿದ್ದಾರೆ. ಈ ಬಗ್ಗೆ ಶ್ರೀಕಾಂತ್ ಅವರೆ ಸ್ಪಷ್ಟಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಶ್ರೀಕಾಂತ್, ಸುದೀಪ್ ಗೆ ಸೂರಿ ನಿರ್ದೇಶನ ಮಾಡುತ್ತಿರುವುದು ನಿಜ ಎಂದು ಬಹಿರಂಗ ಪಡಿಸಿದ್ದಾರೆ. ಅಂದ್ಹಾಗೆ 'ಟಗರು' ಚಿತ್ರದ ಮೂಲಕ ಚಿತ್ರ ನಿರ್ಮಾಣಕ್ಕೆ ಎಂಟ್ರಿ ಕೊಟ್ಟ ಶ್ರೀಕಾಂತ್ ಸದ್ಯ 'ಸಲಗ' ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಆನಂತರ ಸುದೀಪ್ ಮತ್ತು ಸೂರಿ ಸಿನಿಮಾಗೆ ಬಂಡವಾಳ ಹೂಡಲಿದ್ದಾರೆ.

ಯಾವಾಗ ಸೆಟ್ಟೇರುತ್ತೆ ಸಿನಿಮಾ?
ಸೂರಿ ಮತ್ತು ಸುದೀಪ್ ಕಾಂಬಿನೇಷನ್ ನ ಸಿನಿಮಾ ಯಾವಾಗ ಸೆಟ್ಟೇರುತ್ತೆ ಎನ್ನುವುದು ಅಭಿಮಾನಿಗಳ ಕುತೂಹಲ. ಆದ್ರೆ ಈ ಸಿನಿಮಾ ಶುರುವಾಗುವುದು ಕೊಂಚ ತಡವಾಗುವ ಸಾಧ್ಯತೆ ಇದೆ. ಯಾಕಂದ್ರೆ ಸೂರಿ ಸದ್ಯ 'ಪೋಪ್ ಕಾರ್ನ್ ಮಂಕಿ ಟೈಗರ್' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಮತ್ತೊಂದೆಡೆ ಸುದೀಪ್ ಬಾಲಿವುಡ್ ನ 'ದಬಾಂಗ್-3' ಮತ್ತು 'ಕೋಟಿಗೊಬ್ಬ-3' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇಬ್ಬರ ಸಿನಿಮಾ ಸೆಟ್ಟೇರಬೇಕಾದ್ರೆ ಈ ಎಲ್ಲಾ ಪ್ರಾಜೆಕ್ಟ್ ಗಳು ಮುಗಿಯಬೇಕಾಗುತ್ತೆ. ಹಾಗಾಗಿ ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ.
ಲಾರ್ಡ್ಸ್ ನಲ್ಲಿ ಕ್ರಿಕೆಟ್ ಪಂದ್ಯ ಗೆದ್ದು ಅಗಲಿದ ಸ್ನೇಹಿತನಿಗೆ ಗೆಲುವು ಅರ್ಪಿಸಿದ ಸುದೀಪ್

ಅನೂಪ್ ಭಂಡಾರಿ ನಿರ್ದೇಶನದಲ್ಲಿ ಸುದೀಪ್
ಸುದೀಪ್ ಈಗಾಗಲೆ ಅನೂಪ್ ಭಂಡಾರಿ ನಿರ್ದೇಶನದ ಸಿನಿಮಾಗೆ ಕಮಿಟ್ ಆಗಿದ್ದಾರೆ. ಈಗಾಗಲೆ ಚಿತ್ರಕ್ಕೆ 'ಬಿಲ್ಲ ರಂಗ ಭಾಷ' ಎಂದು ಟೈಟಲ್ ಕೂಡ ಫೈನಲ್ ಆಗಿದೆ. ಸುದೀಪ್ ಹೋಮ್ ಬ್ಯಾನರ್ ನಲ್ಲಿ ಸಿನಿಮಾ ಮೂಡಿ ಬರಲಿದೆ. ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 'ಬಿಲ್ಲ ರಂಗ ಭಾಷ' ಸ್ಯಾಂಡಲ್ ವುಡ್ ನಲ್ಲಿ ಭಾರಿ ಕುತೂಹಲ ಮೂಡಿಸಿರುವ ಚಿತ್ರವಾಗಿದೆ. 'ಕೋಟಿಗೊಬ್ಬ-3' ಸಿನಿಮಾ ಮುಗಿದ ಬಳಿಕ ಸುದೀಪ್ 'ಬಿಲ್ಲ ರಂಗ ಭಾಷ'ನಾಗಿ ಬಣ್ಣ ಹಚ್ಚುವ ಸಾಧ್ಯತೆ ಇದೆ.

'ಸಲಗ' ಚಿತ್ರದಲ್ಲಿ ಶ್ರೀಕಾಂತ್ ಬ್ಯುಸಿ
ಶ್ರೀಕಾಂತ್ ಸದ್ಯ ದುನಿಯಾ ವಿಜಯ್ ಅಭಿನಯದ ಮತ್ತು ನಿರ್ದೇಶನದ 'ಸಲಗ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ಚಿತ್ರೀಕರಣ ಪ್ರಾರಂಭವಾಗಿದ್ದು ಹಾಡಿನ ಚಿತ್ರೀಕರಣದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. 'ಟಗರು' ಚಿತ್ರದ ಸಕ್ಸಸ್ ನ ನಂತರ ಶ್ರಿಕಾಂತ್ ಕೈಗೆತ್ತಿಕೊಂಡಿರುವ ಎರಡನೆ ಪ್ರಾಜೆಕ್ಟ್. ಸುದೀಪ್ ಮತ್ತು ಸೂರಿ ಕಾಂಬಿನೇಷನ್ ನ ಸಿನಿಮಾ ಶ್ರೀಕಾಂತ್ ನಿರ್ಮಾಣದ ಮೂರನೆ ಸಿನಿಮಾವಾಗಲಿದೆ.