»   » ಖ್ಯಾತ ನಿರ್ದೇಶಕ ಟಿ ಎಸ್ ರಂಗ ಇನ್ನಿಲ್ಲ

ಖ್ಯಾತ ನಿರ್ದೇಶಕ ಟಿ ಎಸ್ ರಂಗ ಇನ್ನಿಲ್ಲ

Posted By:
Subscribe to Filmibeat Kannada

ಕನ್ನಡ ಹಾಗೂ ಹಿಂದಿ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದ ಹೆಸರಾಂತ ನಿರ್ದೇಶಕ ಟಿ ಎಸ್ ರಂಗ ವಿಧಿವಶರಾಗಿದ್ದಾರೆ. ಟಿ ಎಸ್ ರಂಗ ಅವರು 'ಗೀಜಗನ ಗೂಡು' ಹಾಗೂ 'ಸಾವಿತ್ರಿ' ಸಿನಿಮಾವನ್ನ ನಿರ್ದೇಶನ ಮಾಡಿದ್ದರು . ಬಾಲಿವುಡ್ ನಲ್ಲಿ 'ಗಿಡ್ಡ' ಎಂಬ ಚಿತ್ರವನ್ನ ಡೈರೆಕ್ಟ್ ಮಾಡಿ ನ್ಯಾಷನಲ್ ಅವಾರ್ಡ್ ಕೂಡ ಪಡೆದುಕೊಂಡಿದ್ದರು.

ಟಿ ಎಸ್ ನಾಗಾಭರಣ ಅವರಿಗೆ ಆಪ್ತರಾಗಿದ್ದ ಟಿ ಎಸ್ ರಂಗ ನಾಗಭರಣ ನಿರ್ದೇಶನ ಮಾಡಿದ್ದ 'ಗ್ರಹಣ' ಚಿತ್ರಕ್ಕೆ ಚಿತ್ರಕಥೆ ಬರೆದು ರಾಜ್ಯ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದರು. ಕೇವಲ ಸಿನಿಮಾರಂಗದಲ್ಲಿ ಮಾತ್ರವಲ್ಲದೆ ರಂಗಭೂಮಿಯಲ್ಲಿಯೂ ಟಿ ಎಸ್ ರಂಗ ಒಳ್ಳೆಯ ಹೆಸರು ಮಾಡಿದ್ದರು.

ಚಿತ್ರರಂಗಕ್ಕೆ ಸಾಕಷ್ಟು ಜನರನ್ನ ಪರಿಚಯಿಸಿದ ಮಾಡಿದ್ದ ಟಿ ಎಸ್ ರಂಗ ಅವರ ಅಗಲಿಕೆ ಕನ್ನಡ ಸಿನಿಮಾರಂಗಕ್ಕೆ ದುಖಃ ತರಿಸಿದೆ. ನಾನಾ ಪಾಟೇಕರ್ ಹಾಗೂ ಸ್ಮಿತಾ ಪಾಟೀಲ್ ಅವರನ್ನ ಹಿಂದಿ ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಟಿ ಎಸ್ ರಂಗ ಅವರಿಗೆ ಸಲ್ಲುತ್ತದೆ.

Director T S Ranga passes away

ಕೇವಲ ರಾಜ್ಯ ಮಟ್ಟದಲ್ಲಿ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಟಿ ಎಸ್ ರಂಗ ಗುರುತಿಸಿಕೊಂಡಿದ್ದರು. ಕೋಕಿಲ ಮೋಹನ್ ಹಾಗೂ ಕಮಲ್ ಹಾಸನ್ ಅವರೊಂದಿಗೆ ಟಿ ಎಸ್ ರಂಗ ಉತ್ತಮ ಬಾಂದವ್ಯವನ್ನೂ ಹೊಂದಿದ್ದರು. ಟಿ ಎಸ್ ರಂಗ ಪುತ್ರಿ ತನ್ವಿ ಹಾಗೂ ಪತ್ನಿ ಅಶ್ವಿನಿ ಮತ್ತು ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ.

English summary
Kannada Director T S Ranga (66) died on Sunday at a his house in bangalore .

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X