»   » ಡೈರೆಕ್ಟರ್ ತ್ರಿವಿಕ್ರಮ್ ಸಂಬಳ ಈಗ ರು.12 ಕೋಟಿ

ಡೈರೆಕ್ಟರ್ ತ್ರಿವಿಕ್ರಮ್ ಸಂಬಳ ಈಗ ರು.12 ಕೋಟಿ

By: ಅನಂತರಾಮು, ಹೈದರಾಬಾದ್
Subscribe to Filmibeat Kannada

ಟಾಲಿವುಡ್ ನಲ್ಲಿ ಬಿಡುಗಡೆಗೂ ಮುನ್ನವೇ ಲೀಕ್ ಆದ ಚಿತ್ರ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ 'ಅತ್ತಾರಿಂಟಿಕಿ ದಾರೇದಿ' (ಅತ್ತೆ ಮನೆಗೆ ದಾರಿ ಯಾವುದು). ಈ ಚಿತ್ರ ಇನ್ನು ಚಿತ್ರಮಂದಿರದಲ್ಲಿ ಓಡುವುದು ಅನುಮಾನ ಎಂದೇ ಎಲ್ಲರೂ ಭಾವಿಸಿದ್ದರು.

ಆದರೆ ಎಲ್ಲಾ ಅನುಮಾನಗಳನ್ನೂ 'ಅತ್ತಾರಿಂಟಿಕಿ' ಚಿತ್ರ ತಲೆಕೆಳಗೆ ಮಾಡಿದೆ. ಬಾಕ್ಸ್ ಆಫೀಸಲ್ಲಿ ಭರ್ಜರಿ ಫಸಲನ್ನೇ ತೆಗೆಯುತ್ತಿದೆ. ಈ ಚಿತ್ರದ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಸಹ ಈಗ ತಮ್ಮ ಸಂಬಳವನ್ನು ಸಿಕ್ಕಾಪಟ್ಟೆ ಏರಿಸಿದ್ದಾರೆ.

Trivikram Srinivas

ಮೂಲಗಳ ಪ್ರಕಾರ ಅವರು ಮುಂದಿನ ಚಿತ್ರಕ್ಕೆ ಪಡೆಯುತ್ತಿರುವ ಸಂಭಾವನೆ ರು.12 ಕೋಟಿ. ಆರಂಭದಲ್ಲಿ ಅವರು ಚಿತ್ರಕಥೆ ಬರೆಯುತ್ತಿದ್ದಾಗ ರು.1 ಕೋಟಿ ಸಂಭಾವನೆ ಪಡೆದು ಎಲ್ಲರ ಹುಬ್ಬೇರಿಸಿದ್ದರು. ತ್ರಿವಿಕ್ರಮ್ ಚಿತ್ರಗಳೆಂದರೆ ಟಾಲಿವುಡ್ ನಲ್ಲಿ ಇಂದಿಗೂ ಎಲ್ಲಿಲ್ಲದ ಕ್ರೇಜ್ ಇದೆ. 'ಅತ್ತಾರಿಂಟಿ ದಾರೇದಿ' ಚಿತ್ರಕ್ಕೆ ತ್ರಿವಿಕ್ರಮ್ ರು.8 ಕೋಟಿ ಸಂಭಾವನೆ ಪಡೆದಿದ್ದರು.

ಈಗ ತಮ್ಮ ಸಂಭಾವನೆಯನ್ನು ರು.12 ಕೋಟಿಗೆ ಏರಿಸಿಕೊಂಡಿದ್ದಾರಂತೆ. ಆದರೂ ನಿರ್ಮಾಪಕರು ಅವರ ಮನೆ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಹನ್ನೆರಡು ಕೊಡಲು ಮುಂದಾಗಿದ್ದಾರೆ. ಇದರ ಜೊತೆ ಟಾಲಿವುಡ್ ಕೆಲವು ಸ್ಟಾರ್ ಹೀರೋಗಳು ಅವರ ಚಿತ್ರದಲ್ಲಿ ಅಭಿನಯಿಸಲು ಹಾತೊರೆಯುತ್ತಿದ್ದಾರೆ.

English summary
Trivikram Srinivas who got a hit with Pawan Kalyan's ‘Attarintiki Daaredhi, is increased his remuneration doubling it from his current pay. Trivikram who got Rs 8crs is now demanding Rs 12 crs.
Please Wait while comments are loading...