»   » ಸಿನಿಮಾ ಬಿಟ್ಟು 'ಜ್ಯೋತಿಷ್ಯ' ಹೇಳ್ತಿದ್ದಾರೆ 'ನೀರ್ದೋಸೆ' ನಿರ್ದೇಶಕ ವಿಜಯಪ್ರಸಾದ್

ಸಿನಿಮಾ ಬಿಟ್ಟು 'ಜ್ಯೋತಿಷ್ಯ' ಹೇಳ್ತಿದ್ದಾರೆ 'ನೀರ್ದೋಸೆ' ನಿರ್ದೇಶಕ ವಿಜಯಪ್ರಸಾದ್

Posted By:
Subscribe to Filmibeat Kannada

ಒಂದು ಸಿನಿಮಾ ಸಕ್ಸಸ್ ಆದ್ರೆ, ಆ ಚಿತ್ರದ ನಾಯಕ, ನಾಯಕಿಗೆ ಬಂಪರ್ ಹೊಡೆಯುತ್ತೆ. ಅದೇ ತರ ನಿರ್ದೇಶಕ ಹಾಗೂ ಸಂಗೀತ ನಿರ್ದೇಶಕನಿಗೂ ಸಾಲು ಸಾಲು ಪ್ರಾಜೆಕ್ಟ್ ಗಳು ಸಿಗುತ್ತೆ. ಇದಕ್ಕೆ ಹಲವು ಉದಾಹರಣೆಗಳಿವೆ. ಆದ್ರೆ, ಈ 'ನೀರ್ದೋಸೆ' ಚಿತ್ರದ ನಿರ್ದೇಶಕರ ವಿಷ್ಯದಲ್ಲಿ ಈ ಭವಿಷ್ಯ ಸುಳ್ಳಾಗಿದೆ.

'ನೀರ್ದೋಸೆ' ನಿರ್ದೇಶಕ ವಿಜಯ ಪ್ರಸಾದ್, ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಮತ್ತು ಕೋ-ಡೈರೆಕ್ಟರ್ ಕೆಲಸವಿಲ್ಲದೇ ಖಾಲಿ ಕೂತಿದ್ದಾರೆ. ಪುಟ್ ಪಾತ್ ನಲ್ಲಿರುವ ಟೀ-ಅಂಗಡಿ ಬಳಿ, ಆಕಾಶವೇ ತಲೆಯ ಮೇಲೆ ಬಂದು ಬಿದ್ದಿರುವಾಗೇ ಕೂತಿದ್ದಾರೆ. ಈ ಫೋಟೋಗಳನ್ನ ಸ್ವತಃ ವಿಜಯ ಪ್ರಸಾದ್ ಅವರೇ ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

'ನೀರ್ದೋಸೆ' ನಿರ್ದೇಶಕರ ಮುಂದಿನ ಚಿತ್ರದಲ್ಲಿ ಜಗ್ಗೇಶ್ ಇಲ್ಲ

Director Vijay Prasad Did Not Get Producer for his Next Movie

ಅಷ್ಟೇ ಅಲ್ಲದೆ, ಶ್ರೀ ಸಾಯಿ ಚಕ್ರ ಜ್ಯೋತಿಷ್ಯಾಲಯದ ಬೋರ್ಡ್ ಹಿಡಿದು ಕೂತಿರುವ ಸ್ಟೈಲ್ ಗಮನ ಸೆಳೆಯುತ್ತಿದೆ.

Director Vijay Prasad Did Not Get Producer for his Next Movie

'ನೀರ್ದೋಸೆ' ಅಂತ ಒಳ್ಳೆ ಸಿನಿಮಾ ನೀಡಿದ್ದ ವಿಜಯ ಪ್ರಸಾದ್ ಅವರು ಈಗ 'ಲೇಡಿಸ್ ಟೈಲರ್' ಅಂತ ಮತ್ತೊಂದು ವಿಭಿನ್ನ ಚಿತ್ರವನ್ನ ಕೈಗೆತ್ತಿಕೊಂಡಿದ್ದಾರೆ. ಆದ್ರೆ, ಈ ಚಿತ್ರಕ್ಕೆ ವಿಘ್ನಗಳ ಮೇಲೆ ವಿಘ್ನ ಎದುರಾಗುತ್ತಲೇ ಇದೆ. ಇಷ್ಟು ದಿನ 'ಲೇಡಿಸ್ ಟೈಲರ್' ಚಿತ್ರಕ್ಕೆ ನಾಯಕ ಹಾಗೂ ನಾಯಕಿ ಸಿಕ್ಕಿಲ್ಲ ಅಂತಿದ್ದ ನಿರ್ದೇಶಕರು, ಈಗ ನಿರ್ಮಾಪಕರು ಸಿಕ್ಕಿಲ್ಲ ಎನ್ನುತ್ತಿದ್ದಾರೆ.

'ಲೇಡಿಸ್ ಟೈಲರ್' ಒಂದು ವಿಶೇಷ ಕಥೆಯಾಗಿದ್ದು, ಈ ಚಿತ್ರದ ನಾಯಕಿ 125 ಕೆಜಿ ತೂಕ ಇರಬೇಕಾಗಿದೆಯಂತೆ. ಮೂರ್ನಾಲ್ಕು ನಾಯಕರ ಹೆಸರು ಕೇಳಿ ಬಂದರು, ಯಾರೂ ಕೂಡ ಅಂತಿಮವಾಗಿಲ್ಲ. ಹೀಗಾಗಿ, ಏನೂ ಮಾಡುವುದು ಎಂದು ಯೋಚಿಸುತ್ತಿರುವಾಗಲೇ, ನಿರ್ಮಾಪಕರು ಕೈಕೊಟ್ಟಂತಿದೆ. ಈ ಕಾರಣದಿಂದ ಬಹುಶಃ ವಿಜಯ ಪ್ರಸಾದ್ ಅವರ ಕನಸು ಬರಿ ಕನಸಾಗಿಯೇ ಉಳಿದಿದೆ.

English summary
'Neerdose' Director Vijay Prasad has Not Found Producer for his Next Movie Ladies Tailor.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada