For Quick Alerts
  ALLOW NOTIFICATIONS  
  For Daily Alerts

  ವಿಜಯಪ್ರಸಾದ್ ನೀಡಲಿದ್ದಾರೆ ಭಾರಿ 'ನೀರ್ ದೋಸೆ'

  |
  <ul id="pagination-digg"><li class="next"><a href="/news/ramya-jaggesh-movie-neer-dose-vijayaprasad-direction-069103.html">Next »</a></li></ul>

  ಸ್ಪೋಟಗೊಂಡಿದ್ದ ಅಚ್ಚರಿಯ ಸುದ್ದಿ ನಿಜವಾಗಿದೆ. ಗೋಲ್ಡನ್ ಗರ್ಲ್ ರಮ್ಯಾ ಹಾಗೂ ನವರಸನಾಯಕ ಜಗ್ಗೇಶ್, ಯಶಸ್ವಿ 'ಸಿದ್ಲಿಂಗು' ಚಿತ್ರದ ನಿರ್ದೇಶಕ ವಿಜಯಪ್ರಸಾದ್ ನಿರ್ದೇಶಿಸಲಿರುವ 'ನೀರ್ ದೋಸೆ' ಎಂಬ ಆಕರ್ಷಕ ಹೆಸರಿನ ಹೊಸ ಚಿತ್ರದಲ್ಲಿ ಒಟ್ಟಾಗಿ ನಟಿಸಲಿದ್ದಾರೆ. 'ಸಿದ್ಲಿಂಗು' ನಂತರ ವಿಜಯಪ್ರಸಾದ್ ನಿರ್ದೇಶನದಲ್ಲಿ ಮೂಡಿಬರಲಿರುವ ಈ 'ನೀರ್ ದೋಸೆ', ಚಿತ್ರಕ್ಕೆ ನಿನ್ನೆ (24 ಅಕ್ಟೋಬರ್ 2012) ಮುಹೂರ್ತ ನಡೆದಿದೆ. ಜನವರಿ 14, 2013 ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.

  ಈ ಮೊದಲು ವಿಜಯಪ್ರಕಾಶ್ ನಿರ್ದೇಶನದ 'ಸಿದ್ಲಿಂಗು' ಚಿತ್ರದಲ್ಲಿ ನಟಿಸಿದ್ದ ರಮ್ಯಾ, ಪ್ರೆಸ್ ಮೀಟ್ ನಲ್ಲಿ 'ನಿಮ್ಮ ಮುಂದಿನ ಚಿತ್ರದಲ್ಲೂ ನನಗೆ ಅವಕಾಶ ಕೊಡಿ" ಎಂದು ವಿಜಯಪ್ರಕಾಶ್ ಅವರನ್ನು ಬಹಿರಂಗವಾಗಿಯೇ ಕೋರಿದ್ದರು. ರಮ್ಯಾಗೆ ಅವಕಾಶಗಳಿಗೇನೂ ಆಗಲೂ ಈಗಲೂ ಕೊರತೆಯಿಲ್ಲ. ಆದರೆ, ನಿರ್ದೇಶಕ ವಿಜಯಪ್ರಸಾದ್ ಅವರೊಂದಿಗೆ ಸಿದ್ಲಿಂಗು ಚಿತ್ರದಲ್ಲಿ ಕೆಲಸ ಮಾಡಿದ್ದಕ್ಕೆ ಖುಷಿಯಾದ ರಮ್ಯಾ ಆ ಕೋರಿಕೆ ಇಟ್ಟಿದ್ದರು.

  ರಮ್ಯಾ ವಿನಂತಿಯನ್ನು ವಿಜಯಪ್ರಸಾದ್ ನಡೆಸಿಕೊಟ್ಟಿದ್ದಾರೆ. ರಮ್ಯಾ ಕೂಡ ತಾವು ಆಡಿದ ಮಾತಿಗೆ ನಟಿಸಲು ಒಪ್ಪಿ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ. ಕಾಮಿಡಿ ನಿರೂಪಣೆಯ ಮೂಲಕ ಸಾಗುವ ಈ ಚಿತ್ರಕ್ಕೆ ಕಾಮಿಡಿ ಸ್ಟಾರ್ ಜಗ್ಗೇಶ್ ನಾಯಕರಾಗಿ ಆಯ್ಕೆಯಾಗಿದ್ದಾರೆ. ಜಗ್ಗೇಶ್ ಹಾಗೂ ರಮ್ಯಾ ಇದೇ ಮೊದಲ ಬಾರಿಗೆ ಜೋಡಿಯಾಗಿದ್ದಾರೆ. ಈ ಜೋಡಿ ಒಟ್ಟಿಗೆ ಇದ್ದರೂ, ಮಾಮೂಲಿ ಎನಿಸುವ ರೊಮಾನ್ಸ್ ಹಾಗೂ ಮರಸುತ್ತುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿಲ್ಲವಂತೆ.

  ಈ ಬಗ್ಗೆ ನಮ್ಮ ಒನ್ ಇಂಡಿಯಾ ಕನ್ನಡ'ದ ಜೊತೆ ಮಾತನಾಡಿರುವ ವಿಜಯಪ್ರಸಾದ್, "ಹೌದು, ರಮ್ಯಾ ಈ ಚಿತ್ರದಲ್ಲಿ ನಟಿಸುವುದು ಕನ್ಫರ್ಮ್. ಅಷ್ಟೇ ಅಲ್ಲ, ಜಗ್ಗೇಶ್ ಜೊತೆಜೊತೆಯಲ್ಲೇ ರಮ್ಯಾ ಪಾತ್ರವೂ ಚಿತ್ರದಲ್ಲೂ ಕಾಣಿಸಿಕೊಳ್ಳಲಿದೆ. ಜೊತೆಯಲ್ಲಿ ಮರಸುತ್ತಿದರೆ, ರೊಮಾನ್ಸ್ ಮಾಡಿದರೆ ಮಾತ್ರ ಚಿತ್ರದಲ್ಲಿ ಜೋಡಿ ಎನ್ನಲು ಸಾಧ್ಯವಿಲ್ಲ. ರಮ್ಯಾ ಹಾಗೂ ಜಗ್ಗೇಶ್ ಇಬ್ಬರೂ ಚಿತ್ರದಲ್ಲಿ ಜೊತೆಯಾಗಿಯೇ ನಟಿಸಲಿರುವ 'ಲೀಡ್' ಪಾತ್ರಧಾರಿಗಳು" ಎಂದಿದ್ದಾರೆ. ಮುಂದಿನ ಪುಟ ನೋಡಿ...

  <ul id="pagination-digg"><li class="next"><a href="/news/ramya-jaggesh-movie-neer-dose-vijayaprasad-direction-069103.html">Next »</a></li></ul>
  English summary
  Golden Girl Ramya and Navarasanayaka Jaggesh to acts together titled movie 'Neer Dose'. This movie to direct by 'Siddlingu' fame Vijayaprasad. Yesterday, on 24th October 2012 launched this movie to start shooting in January 14th afterwards. This news is confirmed by Vijayaprasad. &#13; &#13;

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X