»   » ಚಿತ್ರಗಳು: 'ನೀರ್ ದೋಸೆ' ಹುಯಿದು ಸುಸ್ತಾದ ವಿಜಯ್ ಪ್ರಸಾದ್

ಚಿತ್ರಗಳು: 'ನೀರ್ ದೋಸೆ' ಹುಯಿದು ಸುಸ್ತಾದ ವಿಜಯ್ ಪ್ರಸಾದ್

Posted By:
Subscribe to Filmibeat Kannada

ನಿರ್ದೇಶಕ ವಿಜಯ್ ಪ್ರಸಾದ್ ಅವರು 'ಉಶ್ಯ್' ಎಂದು ದೀರ್ಘ ಉಸಿರೊಂದನ್ನು ಬಿಡುತ್ತಿದ್ದಾರೆ. ಯಾಕಂತೀರಾ?, ಯಾಕೆಂದರೆ, ತುಂಬಾ ದಿನಗಳಿಂದ 'ನೀರ್ ದೋಸೆ' ಹುಯ್ಯುತ್ತಿದ್ದ ಕೆಲಸವನ್ನು ಮುಗಿಸುವ ಸಮಯ ಹತ್ತಿರವಾಗಿದೆ.

ದೋಸೆ ಹುಯ್ಯೋ ಕೆಲಸ ಅಷ್ಟೊಂದು ಸುಲಭ ಅನ್ಕೊಂಡ್ರಾ?, ತುಂಬಾ ಕಷ್ಟ ಇದೆ. ನನ್ ಕಷ್ಟ ನನಗೆ ಎಂದು ಸಿನಿಮಾ ಕೊನೆಯ ಹಂತಕ್ಕೆ ಬಂದು ತಲುಪಿದ ಖುಷಿಯಲ್ಲಿ ನಿರ್ದೇಶಕರು ಅಪರೂಪಕ್ಕೆ ಬಿಯರ್ ಬಾಟಲಿ ಎದುರು ಕುಳಿತು ಗಾಢವಾಗಿ ಯೋಚನೆ ಮಾಡುತ್ತಾ ಫೋಸ್ ಕೊಟ್ಟಿದ್ದಾರೆ.[ಸಿಗರೇಟ್ ಸೇದಿ ಆರೋಗ್ಯ ಕೆಡಿಸಿಕೊಂಡ 'ನೀರ್ ದೋಸೆ' ಬೆಡಗಿ]

'ಇನ್ನೂ ಎರಡು ಸೀನ್ಸ್, ಮೂರು ಸಾಂಗ್ಸ್ ಆದ್ರೆ, 'ನೀರ್ ದೋಸೆ ಫಿನಿಶ್..! ಎಂದು ವೀಕೆಂಡ್ ನಲ್ಲಿ ಯೋಚನೆ ಮಾಡುತ್ತಾ ಬಿಯರ್ ಸಿಪ್ ಮಾಡಿ ಚಿಲ್ ಆಗಿದ್ದನ್ನು ನಿರ್ದೇಶಕ ವಿಜಯ್ ಪ್ರಸಾದ್ ಅವರು ತಮ್ಮ ಫೇಸ್ ಬುಕ್ಕಿನಲ್ಲಿ ಹಾಕಿಕೊಂಡಿದ್ದಾರೆ.

ಉಸ್ಸಪ್ಪಾ ...ಇನ್ ಎರ್ಡ್ ಸೀನ್ಸು - ಮೂರ್ ಸಾಂಗ್ಸ್ ಆದ್ರೆ ' ನೀರ್ ದೋಸೆ ' ಶೂಟಿಂಗ್ ಫಿನೀಶ್..! #neerdose

Posted by Vijayaprasad MC on Sunday, January 3, 2016

ಇನ್ನು ನಿರ್ದೇಶಕ ವಿಜಯ್ ಪ್ರಸಾದ್ ಅವರ ಈ ಫೋಸ್ ಗೆ ಹಾಗೂ ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಒಳ್ಳೆಯ ಅಭಿಪ್ರಾಯಯಗಳು ವ್ಯಕ್ತವಾಗುತ್ತಿದೆ. 'ತುಂಬಾ ದಿನ ಕಾಯಿಸಬೇಡಿ ಸರ್, ಹಿಟ್ಟು ಹುಳಿಯಾಗಿ ಬಿಡುತ್ತೆ' ಅಂತ ತಮಾಷೆ ರೀತಿಯ ಕಮೆಂಟ್ ಗಳು ಹರಿದಾಡುತ್ತಿದೆ.[ಚಿತ್ರಗಳು : 'ನೀರ್ ದೋಸೆ' ಸೆಟ್ ನಲ್ಲಿ ಮೋಜು-ಮಸ್ತಿ]

ಶೂಟಿಂಗ್ ಸಂದರ್ಭದಲ್ಲಂತೂ 'ನೀರ್ ದೋಸೆ' ಚಿತ್ರತಂಡದವರು ಮಸ್ತ್ ಮಜಾ ಮಾಡ್ತಾರೆ ಅನ್ನೋದಕ್ಕೆ ಕೆಳಗೆ ಸ್ಲೈಡ್ಸ್ ನಲ್ಲಿರುವ ಚಿತ್ರಗಳೇ ಸಾಕ್ಷಿ. ಹೌದು ನಟಿ ಹರಿಪ್ರಿಯಾ, ನವರಸ ನಾಯಕ ಜಗ್ಗೇಶ್, ಹಿರಿಯ ನಟ ದತ್ತಣ್ಣ ಮತ್ತು ನಿರ್ದೇಶಕ ವಿಜಯ್ ಪ್ರಸಾದ್ ಅವರ ಸ್ಕೂಟಿ ಸವಾರಿ ನೋಡಲು ಕೆಳಗಿನ ಸ್ಲೈಡ್ ಕ್ಲಿಕ್ ಮಾಡಿ..

ನಟಿ ಹರಿಪ್ರಿಯಾ ಮತ್ತು ವಿಜಯ್ ಪ್ರಸಾದ್

ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ನಟಿ ಹರಿಪ್ರಿಯಾ ಮತ್ತು ನಿರ್ದೇಶಕ ವಿಜಯ್ ಪ್ರಸಾದ್ ಅವರು ಸ್ಕೂಟಿಯಲ್ಲಿ ಒಂದು ಜಾಲಿ ರೈಡ್ ಮಾಡಿದರು. ಈ ಸಂದರ್ಭದಲ್ಲಿ ನಿರ್ದೇಶಕರು ಹಗಲಲ್ಲೇ ನಿದ್ದೆ ಮಾಡುವ ರೀತಿಯಲ್ಲಿ ಫೋಸ್ ನೀಡಿದ್ದಾರೆ.

ನವರಸ ನಾಯಕ ಜಗ್ಗೇಶ್

ಈ ಸಿನಿಮಾದಲ್ಲಿ ನವರಸ ನಾಯಕ ಜಗ್ಗೇಶ್ ಅವರು ವಿಭಿನ್ನ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಅವರು ಮುಂಚಿಗಿಂತಲೂ ತುಂಬಾ ಸಣ್ಣ ಆಗಿದ್ದು, ಅದಕ್ಕೂ ಕಮೆಂಟ್ ವ್ಯಕ್ತವಾಗಿದೆ. 'ಪಾಪ ಜಗ್ಗೇಶ್ ಅವರು 'ನೀರ್ ದೋಸೆ' ಆಸೆಯಲ್ಲಿ ಕಾದು ಕಾದು ಎಷ್ಟು ಸಣ್ಣ ಆಗಿ ಹೋದ್ರು' ಅಂತ ತಮಾಷೆಯ ಕಮೆಂಟ್ ಗಳು ಬಂದಿವೆ. ಚಿತ್ರದಲ್ಲಿ ಜಗ್ಗೇಶ್ ಮತ್ತು ನಿರ್ದೇಶಕರ ನಗುಮುಖದ ಭಂಗಿ.

ಹರಿಪ್ರಿಯಾ, ವಿಜಯ್ ಪ್ರಸಾದ್, ದತ್ತಣ್ಣ

ಶೂಟಿಂಗ್ ನ ಬಿಡುವಿನ ಸಮಯದಲ್ಲಿ ನಟಿ ಹರಿಪ್ರಿಯಾ, ನಿರ್ದೇಶಕರಾದ ವಿಜಯ್ ಪ್ರಸಾದ್ ಮತ್ತು ನಟ ದತ್ತಣ್ಣ ಅವರು ಪೋಟೋ ಕ್ಲಿಕ್ಕಿಸಿಕೊಳ್ಳುವ ಮೂಲಕ ಮೋಜು ಮಸ್ತಿ ಮಾಡಿದರು. ಚಿತ್ರದಲ್ಲಿ ನಟಿ ಹರಿಪ್ರಿಯಾ ಅವರು ಕಾಲ್ ಗರ್ಲ್ ಕುಮುದಾಳ ಪಾತ್ರದಲ್ಲಿ ಮಿಂಚುತ್ತಿದ್ದಾರೆ.

ವಿಜಯ್ ಪ್ರಸಾದ್ ಮತ್ತು ದತ್ತಣ್ಣ

ನಿರ್ದೇಶಕ ವಿಜಯ್ ಪ್ರಸಾದ್ ಮತ್ತು ಹಿರಿಯ ನಟ ದತ್ತಣ್ಣ ಅವರು ಜಾಲಿ ರೈಡ್ ಮಾಡುತ್ತಾ ಫೊಟೋ ಗೆ ಪೋಸ್ ನೀಡಿದ ಪರಿ ಹೇಗಿದೆ?.

ನಿರ್ದೇಶಕ ವಿಜಯ್ ಪ್ರಸಾದ್

'ನೀರ್ ದೋಸೆ' ಸೆಟ್ ನಲ್ಲಿ ನಿರ್ದೇಶಕ ವಿಜಯ್ ಪ್ರಸಾದ್ ಅವರ ವಿಭಿನ್ನ ಭಾವ-ಭಂಗಿಗಳ ಕಲೆಕ್ಷನ್ಸ್. ಅಂತೂ ಲೇಟ್ ಆದ್ರೂ ಲೇಟೆಸ್ಟ್ ಆಗಿ ಬರುವ ನಿರ್ದೇಶಕರ ಬಿಸಿ ಬಿಸಿ 'ನೀರ್ ದೋಸೆ' ಇನ್ನೇನು ಕೆಲವೇ ದಿನಗಳಲ್ಲಿ ನಿಮ್ಮೆಲ್ಲರ ತಟ್ಟೆಗೂ ಬೀಳಲಿದೆ.

English summary
Kannada Director Vijayprasad is now ready to complete the movie 'Neer Dose'. Check out the shooting pics of 'Neer Dose'. Kannada Actor Jaggesh, Actreess Haripriya, Actress Suman Ranganath, Actor Dattanna in the lead role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada