'PUC' ಫಲಿತಾಂಶ ನೋಡುವ ಮುನ್ನ ಭಟ್ಟರ ಮಾತು ಕೇಳಿ

Recommended Video

ಸೋಲು, ಗೆಲುವಿನ ಪಾಠ ಮಾಡಿದ ಯೋಗರಾಜ್ ಭಟ್

ಇಂದು ದ್ವಿತೀಯ ಪಿಯುಸಿ ಫಲಿತಾಂಶ ಬಂದಿದೆ. ಪರೀಕ್ಷೆ ಬರೆದ ಹುಡುಗ ಹುಡುಗಿಯರು ತಮ್ಮ ಫಲಿತಾಂಶ ನೋಡಲು ಕಾಯುತ್ತಿದ್ದಾರೆ. ಏನಾಗುತ್ತದೆಯೋ ಎಂಬ ಕುತೂಹಲ, ಭಯ ವಿದ್ಯಾರ್ಥಿಗಳಲ್ಲಿ ಇದೆ.

ಎಷ್ಟು ಅಂಕ ಬರುತ್ತದೆ...?, ಮುಂದೆ ಯಾವ ಕೋರ್ಸ್ ಸೇರಬೇಕು...?, ಮಾರ್ಕ್ ಕಡಿಮೆ ಬಂದರೆ ಏನು ಮಾಡೋದು..?, ಆಕಸ್ಮತ್ ಫೇಲ್ ಆದರೆ...? ಹೀಗೆ ಸಾಕಷ್ಟು ಪ್ರಶ್ನೆಗಳು ವಿದ್ಯಾರ್ಥಿಗಳಲ್ಲಿ ಇರುತ್ತದೆ.

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ, ಉಡುಪಿ ಪ್ರಥಮ

ಹೀಗಿರುವ ವಿದ್ಯಾರ್ಥಿಗಳಿಗೆ ನಿರ್ದೇಶಕ ಯೋಗರಾಜ್ ಭಟ್ ತಮ್ಮ ಪದಗಳ ಮೂಲಕ ಧೈರ್ಯ ತುಂಬಿದ್ದಾರೆ. ''ಫೇಲಾದವ್ನೆ ಪಾಸಾಗೋದು ಹೊಡಿ 9... ಇದ್ನ ತಿಳ್ಕಂಡವ್ನೆ ಮೇಷ್ಟ್ರಾಗೋದು ಹೊಡಿ 9...'' ಎಂದು ಹೇಳುವ ಮೂಲಕ ಹುಡುಗ ಹುಡುಗಿಯರ ಆತಂಕವನ್ನು ದೂರ ಮಾಡಿದ್ದಾರೆ.

ರಿಸಲ್ಟ್ ಏನೇ ಬರ್ಲಿ ತಲೆ ಕೆಡುಸ್ಕೋಬೇಡಿ

ರಿಸಲ್ಟ್ ಏನೇ ಬರ್ಲಿ ತಲೆ ಕೆಡುಸ್ಕೋಬೇಡಿ

''PUC ಹುಡುಗ ಹುಡುಗಿಯರಿಗೆ ಜೈ ರಿಸಲ್ಟ್ ಏನೇ ಬರ್ಲಿ ತಲೆ ಕೆಡುಸ್ಕೋಬೇಡಿ ಯಾಕೆಂದ್ರೆ ಏನೇ ರಿಸಲ್ಟ್ ಬಂದ್ರೂ ಅದು "THE END" ಅಂತ ಅಲ್ಲ... ಫೇಲಾದವ್ನೆ ಪಾಸಾಗೋದು ಹೊಡಿ 9 ಇದ್ನ ತಿಳ್ಕಂಡವ್ನೆ ಮೇಷ್ಟ್ರಾಗೋದು ಹೊಡಿ 9. ಎಜುಕೇಷನ್ ಗಿಂತ ದೊಡ್ಡದು ಜೀವನ... ಎಷ್ಟೊಳ್ಳೆ ಮೇಷ್ಟ್ರು ಕೂಡ ಜೀವನ ಹೇಳ್ಕೊಡಕ್ಕಾಗಲ್ಲ...''

ಜೀವನ ಎಲ್ಲಾ ಕಲಿಸುತ್ತೆ

ಜೀವನ ಎಲ್ಲಾ ಕಲಿಸುತ್ತೆ

''ಜೀವನ ಚೂರು ಅರ್ಥ ಆಗೋಕೆ ಶುರು ಆಗೋದೇ PUC & CET ರಿಸಲ್ಟ್ ದಿನ..! ಹೆಚ್ಚು ಕಮ್ಮಿ ಹದಿನೆಂಟು ತುಂಬುತ್ತಲ್ಲಾ..! ಈ ಜೀವನ ಎಲ್ಲಾ ಕಲಿಸುತ್ತೆ ಬದುಕೋದೊಂದನ್ನ ಬಿಟ್ಟು ಅಂತಾರೆ ..ಸೋ ..ಯಾವುದೇ ಕಾರಣಕ್ಕೂ ಟೆನ್ಷನ್ ಆಗ್ಬೇಡಿ... ಒಳ್ಳೆ ಮಾರ್ಕ್ಸ್ ಬಂದ್ರೂ ಕೆಟ್ಟ ಮಾರ್ಕ್ಸ್ ಬಂದ್ರೂ ಸಮನಾಗಿ ತಗೋಳಿ... ಓದುವುದರಲ್ಲಿ ತಪ್ಪು ಮಾಡಿದ್ರೆ ತಿದ್ಕೊಳ್ಳೋ ಪ್ಲಾನ್ ಮಾಡಿ...''

ಇಂದು ದ್ವಿತೀಯ ಪಿಯು ಫಲಿತಾಂಶ, ಕಡಿಮೆ ಅಂಕ ಬಂದ್ರೆ ನಿರಾಶರಾಗ್ಬೇಡಿ

ಫೇಲ್ ಆದವ್ರಿಗೆಲ್ಲಾ ನನ್ನ ಶುಭಾಶಯ

''ತುಂಬಾ ಸರಿಯಾಗಿ ಓದ್ಕೊಂಡವ್ರು, ಜಾಸ್ತಿ ಮಾರ್ಕ್ಸ್ ತಗೊಂಡವ್ರು ಅಹಂಕಾರ ಪಡ್ಬೇಡಿ... ಏನೇ ಕಿಸ್ದು ದಬ್ಬಾಕಿದ್ರೂ ಜೀವನ ತಾನಾಗೇ ಅರ್ಥ ಆಗ್ಬೇಕು... ಏನೋ ಒಂದು ಮಾಡೋವರೆಗೆ "ಅನುಭವ" ಕೂಡಾ ನಮ್ಮನ್ನ ನೋಡಿ ದೂರದಿಂದ ನಗತ್ತೆ... ಯಾವುದಕ್ಕೂ Short Cut ಇಲ್ಲ... ಚೆನ್ನಾಗಿರಿ ಅಷ್ಟೆ... Rank ಬಂದವ್ರಿಗೆ, Distinction ಬಂದವ್ರಿಗೆ, Higher Second Class ಬಂದವ್ರಿಗೆ, Just Pass ಆದವ್ರಿಗೆ ಹಾಗೂ ಫೇಲ್ ಆದವ್ರಿಗೆಲ್ಲಾ ನನ್ನ ಶುಭಾಶಯ''

ಜೀವನ ಮತ್ತು ಯೌವನ

ಜೀವನ ಮತ್ತು ಯೌವನ

''ಜೀವನ ಮತ್ತು ಯೌವನ ಎರಡೂ ಸರಿ ದಾರಿಗೆ ಸಾಗಲಿ ಎಂದು WISH ಮಾಡ್ತೇನೆ... ಸರಿಯಾಗಿ ಬದುಕೋದಕ್ಕಿಂತ ದೊಡ್ಡದು ಸದ್ಯಕ್ಕೆ ಬೇರೇನೂ ಇಲ್ಲ..! ಎಂದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಯೋಗರಾಜ್ ಭಟ್ ತಮ್ಮ ಹಾಗೂ ಪಂಚತಂತ್ರ ಚಿತ್ರತಂಡದಿಂದ ಶುಭಾಶಯ ತಿಳಿಸಿದ್ದಾರೆ.

More from Filmibeat

English summary
Kannada director Yogaraj Bhat quoted his opinion puc results.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X