»   » 'ಪ' ಅಕ್ಷರದ ಮೇಲೆ ಯೋಗರಾಜ್ ಭಟ್ ರಿಗೆ ಲವ್ ಆಗಿದೆ

'ಪ' ಅಕ್ಷರದ ಮೇಲೆ ಯೋಗರಾಜ್ ಭಟ್ ರಿಗೆ ಲವ್ ಆಗಿದೆ

Posted By:
Subscribe to Filmibeat Kannada

ನಿರ್ದೇಶಕ ಯೋಗರಾಜ್ ಭಟ್ ಕನ್ನಡದಲ್ಲಿ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. 'ಮುಗುಳುನಗೆ' ಸಿನಿಮಾದ ನಂತರ ಯೋಗರಾಜ್ ಭಟ್ ತಮ್ಮ ಹೊಸ ಸಿನಿಮಾವನ್ನು ಶುರು ಮಾಡಿದ್ದಾರೆ. ಆ ಸಿನಿಮಾಗೆ 'ಪಂಚತಂತ್ರ' ಎನ್ನುವ ಟೈಟಲ್ ಕೂಡ ಇಡಲಾಗಿದೆ. ಈ ಸಿನಿಮಾದ ಚಿತ್ರೀಕರಣ ಈಗಾಗಲೇ ಶುರು ಆಗಿದೆ.

ಯೋಗರಾಜ್ ಭಟ್ ಮುಂದಿನ ಚಿತ್ರದ ಟೈಟಲ್ ಫಿಕ್ಸ್

'ಪಂಚತಂತ್ರ' ಸಿನಿಮಾದ ಹೆಸರು ಎಲ್ಲರ ಗಮನ ಸೆಳೆದಿದೆ. ವಿಶೇಷ ಅಂದರೆ ಈ ಸಿನಿಮಾದ ಹೆಸರು ಸೇರಿದಂತೆ ಯೋಗರಾಜ್ ಭಟ್ ಅವರ ಅನೇಕ ಸಿನಿಮಾದ ಹೆಸರು 'ಪ' ದಿಂದ ಶುರುವಾಗಿದೆ. ಮೊದಲ ಬಾರಿಗೆ 'ಪಂಚರಂಗಿ' ಎಂಬ ಹೆಸರನ್ನು ಇಟ್ಟ ಭಟ್ಟರು ಮುಂದೆ ತಮ್ಮ ಸಿನಿಮಾಗಳಿಗೆ 'ಪ' ಅಕ್ಷರದಿಂದಲೇ ಹೆಚ್ಚು ಹೆಸರನ್ನು ಇಟ್ಟಿದ್ದಾರೆ.

Director Yogaraj Bhat's next movie titled as Panchatantra

ಪುನೀತ್ ರಾಜ್ ಕುಮಾರ್ ಜೊತೆಗೆ 'ಪರಮಾತ್ಮ' ಸಿನಿಮಾ ಮಾಡಿದ್ದ ಭಟ್ಟರು ನಂತರ 'ಪರಪಂಚ' ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಪರಮಾತ್ಮ, ಪಂಚರಂಗಿ, ಪರಪಂಚ ಸಿನಿಮಾಗಳ ನಂತರ 'ಪಂಚತಂತ್ರ' ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. 'ಪಂಚತಂತ್ರ' ಸಿನಿಮಾದ ಟೈಟಲ್ ಅನ್ನು ನಟ ರವಿಚಂದ್ರನ್ ಲಾಂಚ್ ಮಾಡಿದ್ದರು. ಈಗ ಈ ಸಿನಿಮಾದ ಚಿತ್ರೀಕರಣ ಕೂಡ ಶುರು ಆಗಿದೆ.

English summary
Kannada director Yogaraj Bhat's next movie titled as Panchatantra. Actress Akshara Gowda and actor Vihan Gowda selected to play lead role in this movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada