For Quick Alerts
  ALLOW NOTIFICATIONS  
  For Daily Alerts

  ಯೋಗರಾಜ್ ಭಟ್ ಜೊತೆಗೆ ಗರಡಿ ಮನೆ ಸೇರಿದ ಯಶಸ್ ಸೂರ್ಯ!

  |

  ಕನ್ನಡ ಚಿತ್ರರಂಗದ ವಿಕಟ ಕವಿ ಯೋಗರಾಜ್ ಭಟ್ ನಿರ್ದೇಶನದ ಹೊಸ ಸಿನಿಮಾ ಪ್ರಕಟವಾಗಿದೆ. ಈ ಚಿತ್ರದಲ್ಲಿ ನಟ ಯಶಸ್ ಸೂರ್ಯ ನಾಯಕ ನಟನಾಗಿ ಅಭಿನಯಿಸಲಿದ್ದಾರೆ. ಈ ಚಿತ್ರವನ್ನು ಬಿ.ಸಿ. ಪಾಟೀಲ್ ಅವರು ನಿರ್ಮಾಣ ಮಾಡುತ್ತಾ ಇದ್ದಾರೆ. ಚಿತ್ರಕ್ಕೆ 'ಗರಡಿ' ಎನ್ನುವ ಶೀರ್ಷಿಕೆಯನ್ನು ಇಡಲಾಗಿದೆ. ಸದ್ಯ ಚಿತ್ರದ ಟೈಟಲ್‌ ಲಾಂಚ್ ಮಾಡಲಾಗಿದೆ. ನಟ ಯಶಸ್ ಸೂರ್ಯ ಈ ಹಿಂದೆ 'ಒಡೆಯ', ಚಿಟ್ಟೆ ಮತ್ತು ಇತರೆ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದ ಟೈಟಲನ್ನು ನಟ ದರ್ಶನ್ ಲಾಂಚ್ ಮಾಡಿದ್ದಾರೆ.

  ಯುವ ನಟ ಯಶಸ್ ಸೂರ್ಯ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ಆದರೆ ಅಷ್ಟರ ಮಟ್ಟಿಗೆ ಯಶಸ್ ಸುರ್ಯನಿಗೆ ಸಕ್ಸಸ್ ಒಲಿದಿಲ್ಲ. ಈಗ ದೊಡ್ಡ ಸಕ್ಸಕ್‌ ಪಡೆಯಲು ಯಶಸ್‌ ಸೂರ್ಯ ಮುಂದಾಗಿದ್ದಾರೆ. ಯೋಗರಾಜ್ ಭಟ್ ಮತ್ತು ಯಶಸ್ ಸೂರ್ಯ ಅವರ ಕಾಂಬಿನೇಶನ್ ಕುತೂಹಲ ಹುಟ್ಟಿಸುತ್ತದೆ.

  ಯಶಸ್ಸು ಅರಸಿ ಹೊರಟ ಯಶಸ್ ಸೂರ್ಯ!

  ಯಶಸ್ಸು ಅರಸಿ ಹೊರಟ ಯಶಸ್ ಸೂರ್ಯ!

  ಯಶಸ್ ಸೂರ್ಯ ಇಲ್ಲಿ ತನಕ ಮಾಡಿರುವ ಸಿನಿಮಾ ಮತ್ತು ಪಾತ್ರಗಳಿಗಿಂತ ಈ ಚಿತ್ರ 100 ಪರ್ಸೆಂಟ್ ವಿಭಿನ್ನವಾಗಿ ಇರುತ್ತದೆ ಎನ್ನುವ ಮಾತುಗಳು ಗಾಂಧಿನಗರದಲ್ಲಿ ಹರಿದಾಡುತ್ತಾ ಇವೆ. ಇನ್ನು ಸ್ಯಾಂಡಲ್‌ವುಡ್‌ನಲ್ಲಿ ಹಲವು ವರ್ಷಗಳಿಂದ ಇದ್ದರು ಯಶಸ್ ಸೂರ್ಯನಿಗೆ ಬ್ರೇಕ್‌ ಸಿಕ್ಕಿಲ್ಲ. ಗರಡಿ ಚಿತ್ರದ ಮುಲಕ ಯಶಸ್ ಸೂರ್ಯ ಚಿತ್ರರಂಗದಲ್ಲಿ ಛಾಪು ಮುಡಿಸಲು ಮುಂದಾಗಿದ್ದಾರೆ.

  ಗರಡಿ ಚಿತ್ರಕ್ಕೆ ನಟ ದರ್ಶನ ಸಾಥ್!

  ಗರಡಿ ಚಿತ್ರಕ್ಕೆ ನಟ ದರ್ಶನ ಸಾಥ್!

  ಚಿತ್ರದ ಟೈಟಲ್‌ 'ಗರಡಿ'. ಶೀರ್ಷಿಕೆಯ ಮೂಲಕವೇ ಸಿನಿಮಾದ ಕತೆ ಏನಿರಬಹುದು ಎನ್ನುವುದನ್ನು ಊಹಿಸಬಹುದು. ಇದು ಬಹುಶಃ ಗರಡಿ ಮನೆ ಕುರಿತಾದ ಕಥೆ ಇರಬಹುದು. ನಟ ಯಶಸ್ ಸೂರ್ಯ ಈ ಚಿತ್ರದೊಂದಿಗೆ ಆ್ಯಕ್ಷನ್ ನಟನಾಗಿ ಹೊರ ಹೊಮ್ಮುವ ಸಾಧ್ಯತೆ ಇದೆ. ಇನ್ನೂ ಯೋಗರಾಜ್ ಭಟ್ ಸಿನಿಮಾಗಳು ಬೇರೆ ರೀತಿ ಇರುತ್ತವೆ. ಪ್ರೇಮ ಕತೆಯನ್ನು ಮನಮುಟ್ಟುವಂತೆ ಹೇಳೋದು ಭಟ್ಟರ ಸ್ಟೈಲ್. ಹಾಗಾಗಿ ಯೋಗರಾಜ್ ಭಟ್ಟರ ಸಿನಿಮಾ ಅಂದರೆ ಅಲ್ಲಿ ಪ್ರೇಮ ಕತೆಯೇ ಪ್ರಧಾನವಾಗಿ ಇರುತ್ತದೆ. ಹಾಗಾಗಿ ಗರಡಿ ಚಿತ್ರದಲ್ಲಿ ಆ್ಯಕ್ಷನ್ ಜೊತೆಗೆ ಸುಂದರ ಪ್ರೇಮ ಇರುವುದು ಮಿಸ್ ಆಗುವುದಿಲ್ಲ.

   'ಗರಡಿ' ಚಿತ್ರ ತಂಡಕ್ಕೆ ದರ್ಶನ್ ಬೆಂಬಲ

  'ಗರಡಿ' ಚಿತ್ರ ತಂಡಕ್ಕೆ ದರ್ಶನ್ ಬೆಂಬಲ

  ಕರ್ನಾಟಕ ಕೃಷಿ ಸಚಿವ ಬಿ.ಸಿ ಪಾಟಿಲ್ ಅವರು ಆಯೋಜಿಸಿದ್ದ ರೈತರ ದಿನಾಚರಣೆ ಕಾರ್ಯಕ್ರಮದಲ್ಲಿ ನಟ ದರ್ಶನ್ ಭಾಗಿ ಆಗಿದ್ದರು. ಇದೇ ಸಂದರ್ಭದಲ್ಲಿ 'ಗರಡಿ' ಚಿತ್ರ ತಂಡಕ್ಕೆ ದರ್ಶನ್ ತಮ್ಮ ಬೆಂಬಲವನ್ನು ನೀಡಿದರು. ಮತ್ತು ಚಿತ್ರದ ಟೈಟಲ್‌ ಬಿಡುಗಡೆ ಮಾಡಿದ್ದಾರೆ. ಸೌಮ್ಯ ಫಿಲಂಸ್ ಬ್ಯಾನರ್‌ನಲ್ಲಿ 'ಗರಡಿ' ಸಿನಿಮಾ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಗರಡಿ ಮನೆಯ ಮತ್ತು ಜಿಮ್ನಾಸ್ಟಿಕ್ ಒಳಗೊಂಡ ಆ್ಯಕ್ಷನ್‌ಗಳು ಚಿತ್ರದಲ್ಲಿ ಇರಲಿವೆ. ಇನ್ನೂ ನಟ ದರ್ಶನ್ ಕೂಡ ಈ ಚಿತ್ರದಲ್ಲಿರುವ ವಿಶೇಷ ಪಾತ್ರವನ್ನು ನಿರ್ವಹಿಸಲಿದ್ದಾರೆ. ಉತ್ತರ ಕರ್ನಾಟಕದಲ್ಲಿ ವ್ಯಾಪಕವಾಗಿ ಚಿತ್ರೀಕರಣ ನಡೆಸಲಿದೆ. ಸದ್ಯಕ್ಕೆ ಈ ಸುದ್ದಿಯನ್ನು ಮಾತ್ರ ಚಿತ್ರತಂಡ ಬಿಟ್ಟು ಕೊಟ್ಟಿದೆ. ಆದರೆ ಚಿತ್ರದ ಪಾತ್ರವರ್ಗ ಮತ್ತು ನಾಯಕ ನಟಿಯ ಬಗ್ಗೆ ಮುಂದಿನ ದಿನಗಳಲ್ಲಿ ತಿಲಿಸಲಿದೆ.

   ಯಶಸ್ ಸೂರ್ಯ 2009 ರಲ್ಲಿ ತನ್ನ ನಟನಾ ಪ್ರಯಾಣ

  ಯಶಸ್ ಸೂರ್ಯ 2009 ರಲ್ಲಿ ತನ್ನ ನಟನಾ ಪ್ರಯಾಣ

  ಈ ಚಿತ್ರವು ನಟ ಯಶಸ್ ಸೂರ್ಯ ಅವರ ಸಿನಿಮಾ ಪಯಣದಲ್ಲಿ ಬಹುಮುಖ್ಯ ಆಗಲಿದೆ. ಈ ಮೂಲಕ ಯಶಸ್ ಸೂರ್ಯ ದೊಡ್ಡ ಬ್ರೇಕ್‌ನ ನಿರೀಕ್ಷೆಯಲ್ಲಿ ಇದ್ದಾರೆ. ಯಶಸ್ ಸೂರ್ಯ 2009 ರಲ್ಲಿ ತನ್ನ ನಟನಾ ಪ್ರಯಾಣವನ್ನು ಪ್ರಾರಂಭಿಸಿದ್ದಾರೆ. ಇಲ್ಲಿಯ ತನಕ ಸಾಕಷ್ಟು ಏಳು ಬೀಳು ಕಂಡಿದ್ದಾರೆ. ಆದರೆ ಇನ್ನೂ ಪ್ರಮುಖ ನಟನಾಗಿ ಹೊರ ಹೊಮ್ಮಿಲ್ಲ. ಸದ್ಯ ಕನ್ನಡ ಚಿತ್ರರಂಗದಲ್ಲಿ ಹಲವು ಹಿಟ್ ಕೊಟ್ಟು, ಹಲವು ನಟರಿಗೆ ಬ್ರೇಕ್ ಕೊಟ್ಟ ನಿರ್ದೇಶಕ ಯೋಗರಾಜ್‌ ಭಟ್ ಅವರು ಯಶಸ್ ಸೂರ್ಯ ಗರಡಿಗೆ ನಿರ್ದೇಶನ ಮಾಡುತ್ತಾ ಇರುವುದು ಒಂದು ರೀತಿ ಅವರ ಅದೃಷ್ಟ ಎಂದೇ ಹೇಳಬಹುದು.

  ಯೋಗರಾಜ್ ಭಟ್ ಅವರು ಇತ್ತೀಚೆಗೆ ಚಿತ್ರೀಕರಣ ಮುಗಿಸಿದ 'ಗಾಳಿಪಟ 2' ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಗಣೇಶ್, ದಿಗಂತ್ ಮಂಚಾಲೆ, ಅನಂತ್ ನಾಗ್, ಶರ್ಮಿಳಾ ಮಾಂಡ್ರೆ, ಪವನ್ ಕುಮಾರ್ ಮತ್ತು ಇನ್ನೂ ಅನೇಕರು ಗಾಳಿಪಟ ಚಿತ್ರದಲ್ಲಿ ಇದ್ದಾರೆ. 2008 ರಲ್ಲಿ ಬಂದ 'ಗಾಳಿಪಟ' ಚಿತ್ರದ ಸೀಕ್ವೆಲ್ ಈ ಚಿತ್ರ. ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದ್ದೆ.

  English summary
  Director Yograj Bhat To Direct Actor Yashas surya Film Named As Garadi

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X