For Quick Alerts
  ALLOW NOTIFICATIONS  
  For Daily Alerts

  ತನ್ನ ಗಂಡನ ನೆನೆದು ಕಣ್ಣೀರಾದ ನಟಿ ಡಿಸ್ಕೋ ಶಾಂತಿ

  By ಅನಂತರಾಮು, ಹೈದರಾಬಾದ್
  |

  ಬಾಲಿವುಡ್ ಚಿತ್ರರಂಗದಲ್ಲಿ ಹಿಟ್ ಮೇಲೆ ಹಿಟ್ ಚಿತ್ರಗಳನ್ನು ಕೊಡುತ್ತಿರುವ ದಕ್ಷಿಣದ ನಿರ್ದೇಶಕ ಪ್ರಭುದೇವ. ಅವರ ನಿರ್ದೇಶನದಲ್ಲಿ ಬರುತ್ತಿರುವ ಬಾಲಿವುಡ್ ತಾಜಾ ಚಿತ್ರ 'ಆರ್....ರಾಜ್ ಕುಮಾರ್' (ಹಳೆ ಶೀರ್ಷಿಕೆ ರ್‍ಯಾಂಬೋ ರಾಜ್ ಕುಮಾರ್). ಈ ಚಿತ್ರ ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ.

  ಈ ಹಿನ್ನೆಲೆಯಲ್ಲಿ ಚಿತ್ರತಂಡ ಹೈದರಾಬಾದಿನಲ್ಲಿ ವಿಶೇಷ ಪ್ರಚಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಚಿತ್ರದ ಹೀರೋ ಶಾಹಿದ್ ಕಪೂರ್, ನಿರ್ದೇಶಕ ಪ್ರಭುದೇವ, ನಟಿ ಚಾರ್ಮಿ ಕೌರ್ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆದರೆ ಸೋನಾಕ್ಷಿ ಸಿನ್ಹಾ ಮಿಸ್ ಆಗಿದ್ದರು.

  ಇತ್ತೀಚೆಗೆ ದಿಢೀರ್ ಸಾವಪ್ಪಿದ್ದ ತೆಲುಗು ರಿಯಲ್ ಸ್ಟಾರ್ ಶ್ರೀಹರಿ ಅವರ ಪತ್ನಿ ಡಿಸ್ಕೋ ಶಾಂತಿ ಸಹ ಪಾಲ್ಗೊಂಡಿದ್ದರು. ಆದರೆ ಅವರು ಕಾರ್ಯಕ್ರಮವನ್ನು ಎಂಜಾಯ್ ಮಾಡಲು ಸಾಧ್ಯವಾಗಲಿಲ್ಲ. ಈ ಚಿತ್ರದಲ್ಲಿ ಶ್ರೀಹರಿ ಸಹ ಅಭಿನಯಿಸಿದ್ದಾರೆ. ಆದರೆ ವಿಧಿ ಅವರನ್ನು ಕಬಳಿಸಿದ್ದನ್ನು ನೆನೆದು ಡಿಸ್ಕೋಶಾಂತಿ ಕಣ್ಣೀರಾದರು. ಹೈದರಾಬಾದಿನಲ್ಲಿ ನಡೆದ ರಾ...ರಾಜ್ ಕುಮಾರ್ ಪ್ರಚಾರ ಕಾರ್ಯಕ್ರಮದ ದೃಶ್ಯಗಳು ಸ್ಲೈಡ್ ನಲ್ಲಿ...

  ಇಷ್ಟಕ್ಕೂ ಚಿತ್ರದ ಕಥೆ ಏನೆಂದರೆ...

  ಇಷ್ಟಕ್ಕೂ ಚಿತ್ರದ ಕಥೆ ಏನೆಂದರೆ...

  ಈ ಚಿತ್ರದಲ್ಲಿ ಗೊತ್ತು ಗುರಿ ಇಲ್ಲದ ರಾಜಕುಮಾರ್ ಪಾತ್ರದಲ್ಲಿ ಶಾಹಿದ್ ಕಪೂರ್ ಕಾಣಿಸುತ್ತಾರೆ. ಅವನು ಡ್ರಗ್ ಲಾಡ್ ಶಿವರಾಜ್ (ಸೋನು ಸೂದ್) ಬಳಿ ಕೆಲಸ ಮಾಡುತ್ತಿರುತ್ತಾನೆ. ಶಿವರಾಜ್ ಅವನಿಗೆ ಒಂದು ಕೆಲಸ ಒಪ್ಪಿಸುತ್ತಾನೆ. ಆತನ ಪ್ರತಿಸ್ಪರ್ಧಿ ಮಾಣಿಕ್ ನನ್ನು (ಆಶಿಶ್ ವಿದ್ಯಾರ್ಥಿ) ಹತ್ಯೆ ಮಾಡುವಂತೆ ಹೇಳುತ್ತಾನೆ.

  ಪ್ರೇಮದ ಬಲೆಗೆ ಬೀಳುವ ರಾಜ್ ಕುಮಾರ್

  ಪ್ರೇಮದ ಬಲೆಗೆ ಬೀಳುವ ರಾಜ್ ಕುಮಾರ್

  ಆದರೆ ರಾಜ್ ಕುಮಾರ್ ಒಬ್ಬ ಸುಂದರವಾದ ಹುಡುಗಿಯ ಪ್ರೇಮ ಬಲೆಗೆ ಬೀಳುತ್ತಾನೆ. ಅವಳ ಹೆಸರು ಚಂದ (ಸೋನಾಕ್ಷಿ ಸಿನ್ಹಾ). ಆಕೆ ಬೇರಾರು ಅಲ್ಲ ಮಾಣಿಕ್ ಸೋದರ ಸೊಸೆ. ತನ್ನ ಸಮಸ್ಯೆಗೆ ಪರಿಹಾರ ಸಿಗಬೇಕಾದರೆ ಒಟ್ಟಾರೆ ಡ್ರಗ್ ಮಾಫಿಯಾವನ್ನೇ ನಾಶ ಮಾಡಲು ರಾಜ್ ಕುಮಾರ್ ಮುಂದಾಗುತ್ತಾನೆ.

  ಡ್ರಗ್ ಮಾಫಿಯಾ ಡಾನ್ ಆಗಿ ಶ್ರೀಹರಿ

  ಡ್ರಗ್ ಮಾಫಿಯಾ ಡಾನ್ ಆಗಿ ಶ್ರೀಹರಿ

  ಇವರನ್ನೆಲ್ಲಾ ಮಲೇಷಿಯಾದಲ್ಲಿದ್ದು ಆಪರೇಟ್ ಮಾಡುತ್ತಿದ್ದ ಅಜಿತ್ ನನ್ನು (ಶ್ರೀಹರಿ) ಮುಗಿಸಬೇಕೆಂದುಕೊಳ್ಳುತ್ತಾನೆ. ಮುಂದೇನು ನಡೆಯುತ್ತದೆ ಎಂಬುದೇ ಕಥೆ. ಬಾಲಿವುಡ್ ಚಿತ್ರಗಳಿಗೆ ಹೈದರಾಬಾದಿನಲ್ಲಿ ದೊಡ್ಡ ಮಾರುಕಟ್ಟೆ ಇದೆ. ಮುಖ್ಯವಾಗಿ ಪ್ರಭುದೇವ ನಿರ್ದೇಶನ, ಚಿತ್ರದಲ್ಲಿ ಶ್ರೀಹರಿ ನಟನೆ ಇರುವುದು ಇನ್ನೊಂದು ವಿಶೇಷ.

  ಈ ಚಿತ್ರದಲ್ಲಿ ಚಾಕೋಲೇಟ್ ಹೀರೋ ಅಲ್ಲ

  ಈ ಚಿತ್ರದಲ್ಲಿ ಚಾಕೋಲೇಟ್ ಹೀರೋ ಅಲ್ಲ

  ಇದುವರೆಗೂ ನಾನು ಚಾಕೋಲೇಟ್ ಹೀರೋ ಆಗಿ ಕಾಣಿಸಿಕೊಂಡಿದ್ದೇನೆ. ಆದರೆ ಈ ಚಿತ್ರದಲ್ಲಿ ಪಾತ್ರ ಭಿನ್ನವಾಗಿರುತ್ತದೆ ಎನ್ನುತ್ತಾರೆ ಶಾಹಿದ್ ಕಪೂರ್.

  ಜಾರಿ ಬಿದ್ದು ಗಾಯಗೊಂಡ ಸೋನಾಕ್ಷಿ

  ಜಾರಿ ಬಿದ್ದು ಗಾಯಗೊಂಡ ಸೋನಾಕ್ಷಿ

  ಇತ್ತೀಚೆಗೆ ಮುಂಬೈನಲ್ಲಿ ಎಲ್ಲರೂ ಬೆರೆತು ಈ ಚಿತ್ರವನ್ನು ವೀಕ್ಷಿಸಿದೆವು. ಮಧ್ಯಂತರದ ವೇಳೆ ಹೊರಗೆ ಹೋಗುತ್ತಿದ್ದ ಸೋನಾಕ್ಷಿ ಮೆಟ್ಟಿಲು ಇಳಿಯಬೇಕಾದರೆ ಕಾಲು ಜಾರಿ ಬಿದ್ದರು. ಅವರ ಕಾಲಿಗೆ ಗಾಯವಾಗಿದ್ದು ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ ಎಂದರು.

  ಪ್ರಭುದೇವ ಸ್ಟೆಪ್ ಹಾಕೋದು ಭಾರಿ ಕಷ್ಟ

  ಪ್ರಭುದೇವ ಸ್ಟೆಪ್ ಹಾಕೋದು ಭಾರಿ ಕಷ್ಟ

  ಇನ್ನು ಚಿತ್ರದಲ್ಲಿ ಪ್ರಭುದೇವ ಹೇಳಿಕೊಟ್ಟ ಸ್ಟೆಪ್ ಹಾಕಲು ತುಂಬಾ ಕಷ್ಟಪಟ್ಟಿದ್ದೇನೆ. ಪಾಶ್ಚಾತ್ಯ ನೃತ್ಯದಲ್ಲಿ ಅನುಭವ ಇರುವ ನನಗೆ ಲೋಕಲ್ ಬಾರೊಂದರ ರೀತಿಯಲ್ಲಿ ಸ್ಟೆಪ್ಸ್ ಹಾಕಿಸಿದ್ದಾರೆ.

  ತನ್ನ ಗಂಡನ ನೆನೆಯುತ್ತಾ ಕಣ್ಣಾಲಿಗಳು ತುಂಬಿ ಬಂದವು

  ತನ್ನ ಗಂಡನ ನೆನೆಯುತ್ತಾ ಕಣ್ಣಾಲಿಗಳು ತುಂಬಿ ಬಂದವು

  ಈ ಸಂದರ್ಭದಲ್ಲಿ ಡಿಸ್ಕೋ ಶಾಂತಿ ಮಾತನಾಡುತ್ತಾ, ಆರ್...ರಾಜ್ ಕುಮಾರ್ ಚಿತ್ರ ತಮ್ಮ ಪತಿ ಶ್ರೀಹರಿ ನಟಿಸಿದ ಕೊನೆಯ ಚಿತ್ರವಿದು. ಈ ಚಿತ್ರದ ಶೂಟಿಂಗ್ ನ ಕೊನೆಯ ದಿನವೇ ಅವರು ಕಣ್ಮುಚ್ಚಿದರು ಎಂದು ಹೇಳುತ್ತಾ ಅವರ ಕಣ್ಣಾಲಿಗಳು ತುಂಬಿ ಬಂದವು.

  ಶ್ರೀಹರಿ ಅಭಿನಯದ ಸೊಗಸಾಗಿದೆ

  ಶ್ರೀಹರಿ ಅಭಿನಯದ ಸೊಗಸಾಗಿದೆ

  ಈ ಚಿತ್ರದಲ್ಲಿನ ಶ್ರೀಹರಿ ಅಭಿನಯಕ್ಕೆ ಖಂಡಿತ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತದೆ. ಹದಿನೈದು ವರ್ಷಗಳ ಹಿಂದೆ ತಾನು ಮಾಡಿದ ಹಾಡಿಗೆ ಪ್ರಭು ನೃತ್ಯ ಸಂಯೋಜನೆ ಆರಂಭಿಸಿದ್ದು ವಿಶೇಷ ಎಂದರು.

  English summary
  R... Rajkumar (earlier known as Rambo Rajkumar) is an upcoming Bollywood action film directed by Prabhu Deva and written by Shiraz Ahmed. Produced by Viki Rajani and Sunil Lulla, the film stars Shahid Kapoor and Sonakshi Sinha in lead roles.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X