For Quick Alerts
  ALLOW NOTIFICATIONS  
  For Daily Alerts

  ಶಿವಣ್ಣನ ಮಗಳ ವೆಬ್ ಸೀರಿಸ್ ಗೆ ಈಕೆಯೇ ನಾಯಕಿ

  By Naveen
  |
  ಭರವಸೆ ಮೂಡಿಸಿದ ಶಿವಣ್ಣನ ಮಗಳು ನಿವೇದಿತಾ..! | Filmibeat Kannada

  ನಟ ಶಿವರಾಜ್ ಕುಮಾರ್ ಈಗ ಹೊಸ ವೆಬ್ ಸೀರಿಸ್ ಶುರು ಮಾಡಿದ್ದಾರೆ. ಶಿವಣ್ಣ ಪುತ್ರಿ ನಿವೇದಿತಾ ಶಿವರಾಜ್ ಕುಮಾರ್ ಅವರ ಸಾರಥ್ಯದಲ್ಲಿ ಈ ವೆಬ್ ಸೀರಿಸ್ ಬರುತ್ತಿದೆ.

  'ಹೇಟ್ ಯೂ ರೋಮಿಯೋ' ವೆಬ್ ಸೀರಿಸ್ ನ ಕೆಲವು ಪೋಸ್ಟರ್ ಗಳು ಇತ್ತೀಚಿಗಷ್ಟೆ ಬಿಡುಗಡೆಯಾಗಿತ್ತು. ಆದರೆ, ಈ ವೆಬ್ ಸೀರಿಸ್ ನಲ್ಲಿ ನಾಯಕಿಯಾಗಿ ಯಾರು ಕಾಣಿಸಿಕೊಳ್ಳುತ್ತಾರೆ ಎಂಬ ವಿಷಯವನ್ನು ಇಡೀ ಟೀಂ ಗುಟ್ಟಾಗಿ ಇಟ್ಟಿತ್ತು. ಆದರೆ, ಈಗ ಈ ವೆಬ್ ಸೀರಿಸ್ ನಲ್ಲಿ ಕಾಣಿಸಿಕೊಳ್ಳುವ ನಟಿ ಯಾರು ಎಂಬುದು ತಿಳಿದಿದೆ.

   ಹೊಸ ಸಾಹಸಕ್ಕೆ ಕೈ ಹಾಕಿದ ಶಿವಣ್ಣನ ಮಗಳು ನಿವೇದಿತಾ ಹೊಸ ಸಾಹಸಕ್ಕೆ ಕೈ ಹಾಕಿದ ಶಿವಣ್ಣನ ಮಗಳು ನಿವೇದಿತಾ

  ಮೂಲತಹ ನೃತ್ಯ ಸಂಯೊಜಕರಾಗಿರುವ ದಿಶಾ ಮದನ್ ಈ ವೆಬ್ ಸೀರಿಸ್ ನ ಲೀಡ್ ರೋಲ್ ನಲ್ಲಿ ನಟಿಸಲಿದ್ದಾರೆ. ದಿಶಾ ಕರ್ನಾಟಕದ ಜನಪ್ರಿಯ ನೃತ್ಯ ಕಾರ್ಯಕ್ರಮ 'ಡ್ಯಾನ್ಸಿಂಗ್ ಸ್ಟಾರ್' ಮೊದಲ ಸೀಸನ್ ನ ವಿಜೇತರಾಗಿದ್ದಾರೆ. ಇದರ ಜೊತೆಗೆ ಮ್ಯೂಸಿಕಲೀ ಸಖತ್ ಫೇಮಸ್ ಆಗಿರುವ ಇವರು 2.7 ಮಿಲಿಯನ್ ಗೂ ಹೆಚ್ಚು ಫಾಲೊವರ್ ಗಳನ್ನು ಹೊಂದಿದ್ದಾರೆ.

  ಉಳಿದಂತೆ, ಅರವಿಂದ್ ಐಯ್ಯರ್ 'ಹೇಟ್ ಯು ರೋಮಿಯೋ' ವೆಬ್ ಸೀರೀಸ್ ನಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದಾರೆ. 'ಕಿರಿಕ್ ಪಾರ್ಟಿ' ಸಿನಿಮಾದ ಮೂಲಕ ಗಮನ ಸೆಳೆದ ಈ ನಟ ಸದ್ಯಕ್ಕೆ 'ಭೀಮಸೇನ ನಳಮಹರಾಜ' ಸಿನಿಮಾದ ಲೀಡ್ ರೋಲ್ ನಲ್ಲಿ ನಟಿಸುತ್ತಿದ್ದಾರೆ.

  disha madan playing lead role in Hate You Romeo series

  ಈ ವೆಬ್ ಸೀರೀಸ್ ಶೇಕಡ 90ರಷ್ಟು ಚಿತ್ರೀಕರಣ ವಿದೇಶದಲ್ಲಿ ನಡೆಯಲಿದೆ. ಶಿವಣ್ಣನ ಶ್ರೀ ಮುತ್ತು ಸಿನಿ ಸರ್ವಿಸ್ ಹಾಗೂ ಆರ್ ಜೆ ಪ್ರದೀಪ್ ಅವರ ಸಖತ್ ಸ್ಟೂಡಿಯೊ ಈ ವೆಬ್ ಸೀರಿಸ್ ಅನ್ನು ನಿರ್ಮಾಣ ಮಾಡುತ್ತಿದೆ.

  English summary
  Actress disha madan playing lead role in 'Hate You Romeo' kannada web series. Actor Shivraj Kumar daughter niveditha is producing this web series.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X