»   » ಟ್ವಿಟ್ಟರ್ ನಲ್ಲಿ ಮನದಾಳ ಬಿಚ್ಚಿಟ್ಟ ಕಿಚ್ಚ ಸುದೀಪ್.!

ಟ್ವಿಟ್ಟರ್ ನಲ್ಲಿ ಮನದಾಳ ಬಿಚ್ಚಿಟ್ಟ ಕಿಚ್ಚ ಸುದೀಪ್.!

By: ಹರಾ
Subscribe to Filmibeat Kannada

ಕಿಚ್ಚ ಸುದೀಪ್ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿದೆ. ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದುಕೊಳ್ಳುವುದಕ್ಕೆ ಸುದೀಪ್, ಪತ್ನಿ ಪ್ರಿಯಾ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. [14 ವರ್ಷದ ಸುದೀಪ್ ದಾಂಪತ್ಯ ಜೀವನದಲ್ಲಿ ಬಿರುಗಾಳಿ: ಡೈವೋರ್ಸ್!]

ಪ್ರೀತಿಸಿ ವಿವಾಹವಾಗಿದ್ದ ಜೋಡಿಯ ಮಧ್ಯೆ ಈಗ ಅದೆಂಥ ಭಿನ್ನಾಭಿಪ್ರಾಯ ಉಂಟಾಗಿದ್ಯೋ ಗೊತ್ತಿಲ್ಲ. ಆದ್ರೆ, ಜನಸಾಮಾನ್ಯರಿಗೆ ರೋಲ್ ಮಾಡೆಲ್ ಆಗಿರುವ ಸುದೀಪ್ ಸಂಸಾರದಲ್ಲಿ ಈಗ ತಾಳ ತಪ್ಪಿದೆ. [ಕಿಚ್ಚನ ದಾಂಪತ್ಯದಲ್ಲಿ ಕಿಚ್ಚು : ಸುದೀಪ್ ಹೇಳಿದ್ದೇನು?]

''ಕುಟುಂಬದಲ್ಲಿ ಜಗಳ-ಕಿತ್ತಾಟ ಸಾಮಾನ್ಯ. ಚಿಕ್ಕ ಸಮಸ್ಯೆ ಅಷ್ಟೆ. ಸರಿ ಹೋಗಲಿದೆ'' ಅಂತ ಮಾಧ್ಯಮಗಳಿಗೆ ಆಶಾವಾದ ಪ್ರತಿಕ್ರಿಯೆ ನೀಡಿರುವ ಸುದೀಪ್ ಟ್ವಿಟ್ಟರ್ ನಲ್ಲಿ ತಮ್ಮ ಮನದಾಳವನ್ನ ಬಿಚ್ಚಿಟ್ಟಿದ್ದಾರೆ. ಮುಂದೆ ಓದಿ....

ಟ್ವಿಟ್ಟರ್ ನಲ್ಲಿ ಸುದೀಪ್ ಸದಾ ಆಕ್ಟೀವ್

ಟ್ವಿಟ್ಟರ್ ನಲ್ಲಿ ಸುದೀಪ್ ಸದಾ ಸಕ್ರಿಯ. ಅಭಿಮಾನಿಗಳೊಂದಿಗೆ ಸುದೀಪ್ ಮಾತುಕತೆ ನಡೆಸುವುದು ಟ್ವಿಟ್ಟರ್ ನಲ್ಲೇ. ಅನೇಕ ವಿವಾದಗಳಾದಾಗಲೂ ಸುದೀಪ್, ತಮ್ಮ ಟ್ವೀಟ್ ಗಳ ಮೂಲಕವೇ ಉತ್ತರ ನೀಡಿದ್ದರು. ಈ ಬಾರಿ ಕೂಡ ಸುದೀಪ್ ತಮ್ಮ ಮನದಾಳವನ್ನ ಟ್ವೀಟ್ ಗಳ ಮೂಲಕ ಹಂಚಿಕೊಂಡಿದ್ದಾರೆ. ವಿಚ್ಛೇದನದ ವಿಚಾರವಾಗಿ ಸುದೀಪ್ ಮಾಡಿರುವ ಟ್ವೀಟ್ ಗಳಿಗಾಗಿ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ.....

ಇದೇ ಜೀವನ..!

''ಸರಿ-ತಪ್ಪುಗಳು ಜೀವನದಲ್ಲಿ ನಡೆಯುತ್ತವೆ. ನನಗಾಗಿ ಮತ್ತು ನಮ್ಮ ಕುಟುಂಬಕ್ಕಾಗಿ ಸ್ವಲ್ಪ ಸಮಯ ಬೇಕಿದೆ.'' - ಸುದೀಪ್

ಕಾಳಜಿ ಮತ್ತು ಕುತೂಹಲ

''ಎಲ್ಲರಿಗೂ ಇರುವ ಕಾಳಜಿ ಮತ್ತು ಕುತೂಹಲ ನನಗೆ ಅರ್ಥವಾಗುತ್ತೆ. ನಾವೆಲ್ಲರು ಇಲ್ಲಿರುವುದು ಕಲಿಯುವುದಕ್ಕೆ ಮತ್ತು ಕಲಿಸುವುದಕ್ಕೆ. ನನಗೆ ಸಿಗುತ್ತಿರುವ ಸಪೋರ್ಟ್ ಬಗ್ಗೆ ನಾನು ಖುಷಿ ವ್ಯಕ್ತಪಡಿಸುತ್ತೇನೆ'' - ಸುದೀಪ್

ಮಾಧ್ಯಮಗಳಿಗೆ ಧನ್ಯವಾದ

''ಇದನ್ನ ದೊಡ್ಡ ಸುದ್ದಿಯಾಗಿ ಮಾಡದ ಮಾಧ್ಯಮಗಳಿಗೆ ನನ್ನ ಧನ್ಯವಾದಗಳು.'' -ಸುದೀಪ್

ಕೌಟುಂಬಿಕ ವಿಚಾರ

''ಇದು ನನ್ನ ಕೌಟುಂಬಿಕ ವಿಚಾರ. ಹೀಗಾಗಿ ಈ ವಿಚಾರದಲ್ಲಿ ನನಗೆ ಸ್ಪೇಸ್ ನೀಡಿದ ಎಲ್ಲರನ್ನೂ ನಾನು ಗೌರವಿಸುತ್ತೇನೆ.'' - ಸುದೀಪ್

ಕಾರಣಕರ್ತರು ಯಾರು?

''ನನ್ನ ಇವತ್ತಿನ ಈ ಸ್ಥಿತಿಗೆ ಕಾರಣವಾಗಿರುವ ಎಲ್ಲರಿಗೂ ನನ್ನ ಧನ್ಯವಾದಗಳು. ಸದಾ ಖುಷಿಯಾಗಿರಿ. ನಾನು ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತೇನೆ'' - ಸುದೀಪ್

ಯಾವುದನ್ನೂ ಮುಚ್ಚಿಡುತ್ತಿಲ್ಲ.!

''ಬಹುತೇಕ ಎಲ್ಲಾ ಮಾಧ್ಯಮ ಹಾಗು ಪತ್ರಿಕೆಗಳ ಜೊತೆ ಮಾತನಾಡಿದ್ದೇನೆ. ಯಾಕಂದ್ರೆ, ನಾನು ಯಾವುದನ್ನೂ ಮುಚ್ಚಿಡಲು ಬಯಸುವುದಿಲ್ಲ.'' - ಸುದೀಪ್

ಮಾತು ಮುಖ್ಯ

''ನಾನು ಮಾತು ಕೊಟ್ಟಿರುವ ಕಾರಣ ಇಂಥ ಪರಿಸ್ಥಿತಿಯಲ್ಲೂ ಕೆಲಸ ಕಂಪ್ಲೀಟ್ ಮಾಡಬೇಕಿದೆ. ನನ್ನ ಮಾತನ್ನ ನಾನು ಉಳಿಸಿಕೊಳ್ಳಬೇಕು.'' - ಸುದೀಪ್

ಧನ್ಯವಾದಗಳು

''ನಿಮ್ಮೆಲ್ಲರ ಪ್ರೀತಿ-ವಿಶ್ವಾಸಕ್ಕೆ ನನ್ನ ಧನ್ಯವಾದ. ನನ್ನ ಕುಟುಂಬಕ್ಕೆ ಈಗ ಬೇಕಾಗಿರುವುದು ನಿಮ್ಮೆಲ್ಲರ ಪ್ರೀತಿ.'' - ಸುದೀಪ್

English summary
Kannada Actor Kiccha Sudeep has taken his twitter account to react regarding his Divorce. Sudeep has decided to end his 14 years relationship with his wife Priya.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada