For Quick Alerts
  ALLOW NOTIFICATIONS  
  For Daily Alerts

  ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಸ್ಮಾರಕಕ್ಕೆ ಅಡ್ಡಿ

  |

  ಕಂಠೀರವ ಸ್ಟುಡಿಯೋದಲ್ಲಿ ಡಾ.ರಾಜ್ ಕುಮಾರ್ ಅವರ ಸ್ಮಾರಕದ ಬಳಿಯೇ ನಟ ಅಂಬರೀಶ್‌ ಅವರ ಸ್ಮಾರಕ ನಿರ್ಮಾಣ ಮಾಡುವುದಾಗಿ ಸಿಎಂ ಕುಮಾರಸ್ವಾಮಿ ಅವರು ಹೇಳಿದ್ದರು. ಆದರೆ, ಈಗ ಇದಕ್ಕೆ ಅಡ್ಡಿ ಎದುರಾಗಿದೆ.

  ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಸ್ಮಾರಕ ನಿರ್ಮಾಣ ಮಾಡಬಾರದು ಎಂದು ವಕೀಲ ಪಿ.ಆರ್.ದೇಸಾಯಿ ಅವರು ಇಂದು ಹೈಕೋರ್ಟ್‌ ರಿಜಿಸ್ಟ್ರಾರ್‌ ಅವರಿಗೆ ಪಿಐಎಲ್ ಸಲ್ಲಿಸಿದ್ದಾರೆ. ಅಂಬರೀಶ್‌ ಅವರ ಅಂತಿಮ ಸಂಸ್ಕಾರವನ್ನು ಕಂಠೀರವ ಸ್ಟುಡಿಯೋದಲ್ಲಿ ಮಾಡಬಾರದು ಎಂದು ವಕೀಲರು ತಕರಾರು ತೆಗೆದಿದ್ದಾರೆ.

  ಹೀಗೆ ನಟ-ನಟಿಯರ ಅಂತಿಮ ಸಂಸ್ಕಾರವನ್ನು ಕಂಠೀರವ ಸ್ಟುಡಿಯೋದಲ್ಲಿ ಮಾಡುತ್ತಾ ಹೋದರೆ ಕೊನೆಗೆ ಅದು ರುದ್ರಭೂಮಿ ಆಗಿ ಬಿಡುತ್ತದೆ ಎಂದು ವಕೀಲರು ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.

  ಕಂಠೀರವ ಸ್ಟುಡಿಯೋ ಇರುವುದು ಸಿನಿತಾರೆಗಳ ಅಂತಿಮ ಸಂಸ್ಕಾರಕ್ಕಲ್ಲ ಸಿನಿಮಾ ಕಾರ್ಯಕ್ಕಾಗಿ ಆ ಸ್ಟುಡಿಯೋ ಇದೆ ಅದನ್ನು ಅದೇ ಕಾರಣಕ್ಕೇ ಬಳಸಬೇಕು ಎಂದು ವಕೀಲರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಹೇಳಿದ್ದಾರೆ.

  ಭಾನುವಾರವಾದ ಇಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಬಗ್ಗೆ ವಕೀಲರಿಗೆ ಮೌಖಿಕವಾಗಿ ಸೂಚನೆ ನೀಡಿದ ಹೈಕೋರ್ಟ್‌ ನ್ಯಾಯಮೂರ್ತಿ ಅವರು, ಈ ಅರ್ಜಿಯು ಇತರೆ ಸಾಮಾನ್ಯ ಅರ್ಜಿಗಳಂತೆ ವಿಚಾರಣೆಗೆ ಬರಲಿದೆ ಎಂದು ಹೇಳಿದ್ದಾರೆ.

  ನಾಳೆ ಅಂಬರೀಶ್ ಅವರ ಅಂತಿಮ ಸಂಸ್ಕಾರ ಮುಗಿದ ನಂತರವೇ ಪಿಐಎಲ್ ವಿಚಾರಣೆಗೆ ಬರಲಿದೆ.

  English summary
  A PIL filled to Karnataka high court objecting Ambareesh final cremation in Kanteerava studio. High court judge said that PIL will come to trial as other PILs. That means Ambareesh final cremation will happen in kanteerava studio only.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X