»   » ಜಗ್ಗೇಶ್, ಕಿಚ್ಚ, ಶಿವಣ್ಣಗೆ ಯಾರನ್ನ ಕಂಡ್ರೆ 'ಆಗಲ್ಲಾಂತ' ನಿಮಗ್ಗೊತ್ತಾ?

ಜಗ್ಗೇಶ್, ಕಿಚ್ಚ, ಶಿವಣ್ಣಗೆ ಯಾರನ್ನ ಕಂಡ್ರೆ 'ಆಗಲ್ಲಾಂತ' ನಿಮಗ್ಗೊತ್ತಾ?

Posted By:
Subscribe to Filmibeat Kannada

ವಿನಯ್ ರಾಜ್ ಕುಮಾರ್ ಅವರ ಎರಡನೇ ಸಿನಿಮಾ 'ರನ್ ಆಂಟನಿ' ತೆರೆಗೆ ಬರಲು ದಿನಗಣನೆ ಶುರುವಾಗಿದ್ದು, ಜುಲೈ 1 ರಂದು ಗ್ರ್ಯಾಂಡ್ ಆಗಿ ತೆರೆ ಕಾಣುತ್ತಿದೆ. ನಿರ್ದೇಶಕ ರಘು ಶಾಸ್ತ್ರಿ ನಿರ್ದೇಶನ ಮಾಡಿರುವ 'ರನ್ ಆಂಟನಿ' ಟೀಸರ್-ಟ್ರೈಲರ್ ಮೂಲಕ ಭಾರಿ ನಿರೀಕ್ಷೆ ಹುಟ್ಟು ಹಾಕಿದೆ.

ಅಂದಹಾಗೆ 'ರನ್ ಆಂಟನಿ' ಚಿತ್ರತಂಡದವರು #irunaway 'ಐ ರನ್' 'ನೀವು ಯಾವುದರಿಂದ ಓಡಿ ಹೋಗ್ತೀರಾ?.... ಅಂತ ವಿಭಿನ್ನ ಕಾನ್ಸೆಪ್ಟ್ ಇಟ್ಟುಕೊಂಡು ಚಿತ್ರದ ಪ್ರಚಾರ ಕೈಗೊಂಡಿರುವ ಬಗ್ಗೆ ನಾವೇ ನಿಮಗೆ ಇದೇ ಫಿಲ್ಮಿಬೀಟಲ್ಲಿ ಹೇಳಿದ್ವಿ. ಇದೀಗ ಈ ಪ್ರೊಮೋಷನ್ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗಿದೆ.[ಕ್ಷಣ-ಕ್ಷಣಕ್ಕೂ ಕುತೂಹಲ ಕೆರಳಿಸುವ 'ರನ್ ಆಂಟನಿ' ವಾಂಟೆಡ್ ಟ್ರೈಲರ್.!]


Do you know what sandalwood stars wants to run away from

ಇದಕ್ಕೂ ಮುನ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ನಿರ್ದೇಶಕ ಪವನ್ ಒಡೆಯರ್, ನಟಿ ನಭಾ ನಟೇಶ್ ಮುಂತಾದವರು 'ಐ ರನ್' ಪ್ರಶ್ನೋತ್ತರ ಕಾರ್ಯಕ್ರಮದ ಬಗ್ಗೆ ಮಾತನಾಡಿ ಅವರುಗಳು ಯಾವುದನ್ನು ಕಂಡರೆ ಓಡಿ ಹೋಗುತ್ತಾರೆ ಅನ್ನೋದನ್ನು ಫೇಸ್ ಬುಕ್ ಮೂಲಕ ಎಲ್ಲರಿಗೂ ತಿಳಿಸಿದ್ದರು.[ಪುನೀತ್ ಗೆ 'ಇವರನ್ನು' ಕಂಡರೆ ಬಿಲ್ ಕುಲ್ ಆಗಲ್ವಂತೆ.!]


ಅದ್ರಲ್ಲೂ ಇದೀಗ ವಿಶೇಷವಾಗಿ ನವರಸ ನಾಯಕ ಜಗ್ಗೇಶ್ ಅವರು ಹೀಗನ್ನುತ್ತಾರೆ "ಬದುಕಲ್ಲಿ ಪ್ರತಿಯೊಬ್ಬರು ಅವರ ಜೀವನದಲ್ಲಿ 'ರನ್ ಆಂಟನಿ' ಆಗಿರುತ್ತಾರೆ. ನಾನು ನನ್ನ ಜೀವನದಲ್ಲಿ ಓಡಿರೋದು ಅಂತ ಅಂದ್ರೆ, ಒಬ್ಬ ವ್ಯಕ್ತಿನಾ ನೋಡಿ ಓಡ್ತೀನಿ. ಅದು ಯಾರಪ್ಪಾ ಅಂದ್ರೆ ಈ ಚಕ್ಕಾಗಳು (ಮಂಗಳಮುಖಿಯರು) ಅಂತಾರಲ್ಲಾ, ಅವರನ್ನು ನೋಡಿದ್ರೆ ಏನೋಪ್ಪಾ ಗೊತ್ತಿಲ್ಲ ತುಂಬಾ ಭಯ ನನಗೆ".


"ಕಾರಣ ಏನಪ್ಪಾ ಅಂದ್ರೆ, ನನ್ನ ದೌರ್ಭಾಗ್ಯವೋ ಏನೋ, ನಾನು ಎಲ್ಲಿ ಸಿಕ್ಕಿದ್ರುನೂ ನನಗೆ ಅತಿಯಾಗಿ ರೇಗಿಸುವಂತಹ ಜನ ಯಾರು ಅಂದ್ರೆ ಅವರೇನೆ. ಅವರ ಕೈಯಲ್ಲಿ ತಗ್ಲಾಕ್ಕೊಂಡ್ರೆ, ಅವರು ಮುಟ್ಟೋದು, ತಿವಿಯೋದು ಮಾಡ್ತಾರೆ. ಅದಕ್ಕೆ ಅವರನ್ನ ಕಂಡರೆ ಸಿಕ್ಕಾಪಟ್ಟೆ ಫೋಬಿಯಾ. ಅದಕ್ಕೆ ಹೇಳ್ದೆ-ಕೇಳ್ದೆ ಎಸ್ಕೇಪ್ ಆಗ್ಬಿಡ್ತೀನಿ" ಅವರಿಂದ ನಾನು ಇವತ್ತಿಗೂ ಓಡಿ ಹೋಗ್ತೀನಿ ಅಂತ ತಮ್ಮ ಜೀವನದ ಅನುಭವ ಒಂದನ್ನು ಬಿಚ್ಚಿಟ್ಟಿದ್ದಾರೆ ಜಗ್ಗೇಶ್ ಅವರು.


ಇನ್ನು ಕಿಚ್ಚ ಸುದೀಪ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಶ್ರೀಮುರಳಿ, ನಟಿ ರಾಧಿಕಾ ಪಂಡಿತ್, ನಟಿ ಮಯೂರಿ, ನಟಿ ಪ್ರಿಯಾಮಣಿ, ನಟ ದೇವರಾಜ್, ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಮುಂತಾದವರು ಯಾವುದರಿಂದ ಓಡಿ ಹೋಗುತ್ತಾರೆ ಅನ್ನೋದನ್ನ ತಿಳಿಸಿದ್ದಾರೆ.[ವಿನಯ್ ರಾಜ್ ಕುಮಾರ್ ಥಿಯೇಟರ್ ಗೆ ಯಾವಾಗ ಓಡಿ ಬರೋದು?]


ಈ ಸ್ಟಾರ್ ನಟರೆಲ್ಲಾ ಯಾವುದನ್ನು/ಯಾರನ್ನು ಕಂಡರೆ ಓಡಿ ಹೋಗುತ್ತಾರೆ ಅನ್ನೋದನ್ನು ಅವರ ಬಾಯಿಂದಲೇ ಕೇಳುವ ಕುತೂಹಲ ನಿಮಗೂ ಇದ್ದರೆ ಈ ವಿಡಿಯೋ ನೋಡಿ..ಈ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ನಿಮಗೂ ಭಾಗವಹಿಸಿ, 'ರನ್ ಆಂಟನಿ' ಚಿತ್ರಕ್ಕೆ ಶುಭ ಹಾರೈಸಲು ಮುಕ್ತ ಅವಕಾಶ ಇದೆ. ಭಾಗವಹಿಸಲು ನೀವು ಮಾಡಬೇಕಾಗಿರುವುದು ಇಷ್ಟೇ. ನೀವು ಯಾವುದರಿಂದ ಓಡಿ ಹೋಗುತ್ತೀರಾ? ಅನ್ನೋ ಪ್ರಶ್ನೆಗೆ ವಿಡಿಯೋ ಮಾಡುವ ಮೂಲಕ ಉತ್ತರಿಸಿ, ಅದನ್ನು #irunaway #runantony ಅಂತ ಹ್ಯಾಶ್ ಟ್ಯಾಗ್ ಬಳಸಿ 'ರನ್ ಆಂಟನಿ' ಪೇಜ್ ಫೇಸ್ ಬುಕ್ ಗೆ ಅಪ್ ಲೋಡ್ ಮಾಡಿ.


-
-
-
-
-
-
-
-
-

English summary
Do you know what sandalwood stars like Sudeep, Puneeth Rajkumar, Shiva Rajkumar, Jaggesh, Actress Priyamani, Actress Radhika Pandit, Mayuri wants to run away from..?. Here is the reason, Watch this #irunaway Video.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X