Don't Miss!
- Sports
ಮಹಾರಾಜ ಟ್ರೋಫಿ: ಟೇಬಲ್ ಟಾಪರ್ಸ್ ವಿರುದ್ಧ ಗೆದ್ದು 2 ಸ್ಥಾನ ಜಿಗಿದ ಮೈಸೂರು ವಾರಿಯರ್ಸ್!
- News
Breaking: ಕರ್ನಾಟಕದಲ್ಲಿ 2ನೇ ದಿನವೂ ಕೊರೊನಾದಿಂದ 5 ಮಂದಿ ಸಾವು!
- Lifestyle
ಸ್ವಾತಂತ್ರ್ಯದ ಅಮೃತ ಮಹೋತ್ಸಕ್ಕೆ ಸ್ಪೆಷಲ್ ರೆಸಿಪಿ: ತಿರಂಗಾ ಹಲ್ವಾ
- Automobiles
ಇವಿ ಬಸ್ ಸೇವೆಗಾಗಿ 1 ಬಿಲಿಯನ್ ಡಾಲರ್ ಮೌಲ್ಯದ ಸ್ವಿಚ್ ಮೊಬಿಲಿಟಿ ನಿರ್ಮಾಣದ 5 ಸಾವಿರ ಇವಿ ಬಸ್ ನಿಯೋಜನೆ
- Technology
ಬ್ಲೂ ಬೋಲ್ಡ್ N2 ಸ್ಮಾರ್ಟ್ಫೋನ್ ಬಿಡುಗಡೆ! ಏನೆಲ್ಲಾ ಫೀಚರ್ಸ್ ಲಭ್ಯ!
- Finance
ಕೇರಳ ಲಾಟರಿ: 'ಕಾರುಣ್ಯ KR 562' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ
- Education
CSG Karnataka Recruitment 2022 : 128 ಪ್ರಾಜೆಕ್ಟ್ ಮ್ಯಾನೇಜರ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
ಕಳಸಾ-ಬಂಡೂರಿ ಬಗ್ಗೆ ಸಾಕ್ಷ್ಯಚಿತ್ರ ಮಾಡಲಿದ್ದಾರೆ ಪೂಜಾಗಾಂಧಿ
'ದಂಡುಪಾಳ್ಯ' ನಟಿ ಪೂಜಾ ಗಾಂಧಿ 'ಅಭಿನೇತ್ರಿ' ಚಿತ್ರದ ಮೂಲಕ ಭಾರಿ ಸುದ್ದಿಯಾಗಿ 'ರಾವಣಿ' ಚಿತ್ರದ ಮೂಲಕ ಮತ್ತೆ ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಕಾಲಿಡುತ್ತಿದ್ದಾರೆ.
ಅಂದಹಾಗೆ ಇದೀಗ ಪೂಜಾ ಗಾಂಧಿ ಅವರು ಕಳಸಾ-ಬಂಡೂರಿ ನಾಲಾ ಯೋಜನೆಯ ಅನುಷ್ಠಾನದ ಬಗ್ಗೆ ಒಂದು ಸಾಕ್ಷ್ಯಚಿತ್ರ ಮಾಡುವ ಪ್ಲಾನ್ ಮಾಡಿಕೊಂಡಿದ್ದಾರೆ.
ನಟಿ ಪೂಜಾ ಗಾಂಧಿ ಅವರು ತಮ್ಮ ಮುಂದಿನ ಚಿತ್ರ 'ರಾವಣಿ' ಗೆ ತಾವೇ ಬಂಡವಾಳ ಹಾಕುತ್ತಿದ್ದು, ಇದೀಗ ಕಳಸಾ-ಬಂಡೂರಿ ಯೋಜನೆಯ ಸಾಕ್ಷ್ಯಚಿತ್ರಕ್ಕೂ ಇವರೇ ಬಂಡವಾಳ ಹೂಡುತ್ತಿದ್ದಾರೆ. ಇನ್ನೇನು ಕೆಲವು ತಿಂಗಳುಗಳಲ್ಲಿ ಈ ವಿಶೇಷ ಸಾಕ್ಷ್ಯಚಿತ್ರ ಹೊರಬರಲಿದೆ. [ಕಳಸಾ-ಬಂಡೂರಿಗೆ ಸ್ಯಾಂಡಲ್ ವುಡ್ ಕಿಚ್ಚು ; ಯಾರು ಏನು ಹೇಳಿದರು?]
ಉತ್ತರ ಕರ್ನಾಟಕದಲ್ಲಿ ರೈತರು ಕುಡಿಯುವ ನೀರಿಗಾಗಿ ನಡೆಸುತ್ತಿರುವ ಹೋರಾಟಕ್ಕೆ ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಇಡೀ ಕನ್ನಡ ಚಿತ್ರರಂಗ ಪಾಲ್ಗೊಂಡು ಎಲ್ಲಾ ರೈತ ಜನತೆ ಹಾಗೂ ಹೋರಾಟಗಾರರನ್ನು ಪ್ರೋತ್ಸಾಹಿಸಿದೆ.[ನರೇಂದ್ರ ಮೋದಿಗೆ ಕರ್ನಾಟಕದ ಕೂಗು ಕೇಳಿಸಲಿ: ಚಿತ್ರರಂಗ]
ಇನ್ನು ಈ ವಿಶೇಷ ಸಾಕ್ಷ್ಯಚಿತ್ರವು ಇದೇ ತಿಂಗಳ ಕೊನೆಯಲ್ಲಿ ಫ್ರೊ ಎಂ.ಡಿ ನಂಜುಂಡ ಸ್ವಾಮಿ ಸ್ಮರಣಾರ್ಥ ಅಮೃತ ಭೂಮಿ ಚಾಮರಾಜನಗರದಲ್ಲಿ ಬಿಡುಗಡೆಯಾಗಲಿದೆ.
ಸದ್ಯಕ್ಕೆ ಅರ್ಧದಷ್ಟು ಸ್ಯಾಂಡಲ್ ವುಡ್ ತಾರೆಯರು ಉತ್ತರ ಕರ್ನಾಟಕದ ಕಳಸಾ-ಬಂಡೂರಿ ಯೋಜನೆಯ ಹೋರಾಟದಲ್ಲಿ ಭಾಗವಹಿಸಿ ಮತ್ತೊಮ್ಮೆ ಗೋಕಾಕ್ ಚಳುವಳಿಯ ನೆನಪುಗಳನ್ನು ಹೊತ್ತು ತಂದಿದ್ದಾರೆ.[ನೀರು ಹಂಚಿಕೆ ವಿವಾದಕ್ಕೆ ರಿಯಲ್ ಸ್ಟಾರ್ ಉಪ್ಪಿಯಿಂದ ಪರಿಹಾರ]
'ಮುಂಗಾರು ಮಳೆ' ಚಿತ್ರದ ಯಶಸ್ಸಿನ ನಂತರ ಬೇರೆ ಯಾವುದೇ ಚಿತ್ರಗಳಲ್ಲಿ ಅಷ್ಟಾಗಿ ಯಶಸ್ಸು ಗಳಿಸದ ಪೂಜಾ ಗಾಂಧಿ ಸದಾ ಒಂದಲ್ಲ ಒಂದು ವಿಷಯಗಳಲ್ಲೂ ಸುದ್ದಿಯಾಗುತ್ತಿದ್ದರು.
ಇದೀಗ ಸದ್ಯಕ್ಕೆ ಕಳಸಾ-ಬಂಡೂರಿ ಯೋಜನೆಯ ಮೂಲಕ ಸುದ್ದಿಯಾಗುತ್ತಿದ್ದು, ಇದೇನು, ಒಳ್ಳೆ ವಿಚಾರಕ್ಕೆ ಸುದ್ದಿಯಾಗಿದ್ದಾರೆ ಎಂದು ಸ್ವಲ್ಪ ಮಟ್ಟಿಗೆ ಪ್ರೇಕ್ಷಕರು ಖುಷಿ ಪಡಬಹುದು.