»   »  'ಅಂಜನಿಪುತ್ರ' ಇದ್ದರೂ 'ದೊಡ್ಮನೆ ಹುಡ್ಗ' ಧ್ಯಾನದಲ್ಲಿ ಅಪ್ಪು ಫ್ಯಾನ್ಸ್

'ಅಂಜನಿಪುತ್ರ' ಇದ್ದರೂ 'ದೊಡ್ಮನೆ ಹುಡ್ಗ' ಧ್ಯಾನದಲ್ಲಿ ಅಪ್ಪು ಫ್ಯಾನ್ಸ್

Posted By:
Subscribe to Filmibeat Kannada

ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಸದ್ಯ 'ಅಂಜನಿಪುತ್ರ' ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಆದರೆ ಈ ಚಿತ್ರ ಡೈಲಾಗ್ ವಿವಾದದಿಂದ ಚಿತ್ರದ ಪ್ರದರ್ಶನ ರದ್ದು ಮಾಡುವ ವಿಚಾರ ಅವರಿಗೆ ಬೇಸರ ತಂದಿತ್ತು. ಇದರ ಜೊತೆಗೆ ಈಗ ಅಪ್ಪು ಅಭಿಮಾನಿಗಳು 'ದೊಡ್ಮನೆ ಹುಡ್ಗ' ಚಿತ್ರದ ಗುಂಗಿನಿಂದ ಹೊರಬಂದಿಲ್ಲ.

ಅಂಜನಿಪುತ್ರ ಪ್ರದರ್ಶನ ತಡೆಯನ್ನ ವಿರೋಧಿಸಿ ಅಭಿಮಾನಿಗಳ ಹೋರಾಟ

ಪುನೀತ್ ಅವರ 'ಅಂಜನಿಪುತ್ರ' ಸಿನಿಮಾ ಚಿತ್ರಮಂದಿರದಲ್ಲಿ ಓಡುತ್ತಿದ್ದರೆ ಇತ್ತ 'ದೊಡ್ಮನೆ ಹುಡ್ಗ' ಸಿನಿಮಾ ಯೂಟ್ಯೂಬ್ ನಲ್ಲಿ ಓಡುತ್ತಿದೆ. 'ದೊಡ್ಮನೆ ಹುಡ್ಗ' ಪೂರ್ಣ ಸಿನಿಮಾ ಡಿಸೆಂಬರ್ 23ಕ್ಕೆ ಡಿ-ಬೀಟ್ಸ್ ಚಾನಲ್ ಮೂಲಕ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿತ್ತು. ಅಷ್ಟೆ ಅಲ್ಲದೆ ಅದು ನಂ 1 ಟ್ರೆಂಡಿಂಗ್ ವಿಡಿಯೋ ಆಗಿತ್ತು. ಈಗ ಯೂಟ್ಯೂಬ್ ನೋಡಿದರೂ ಈ ಚಿತ್ರ 5ನೇ ಟ್ರೆಂಡಿಂಗ್ ನಲ್ಲಿ ಇದೆ.

Dodmane Huduga movie no 1 trending in youtube.

ಸಾಮಾನ್ಯವಾಗಿ ಹೊಸ ಚಿತ್ರ ಹಾಡುಗಳು, ಟ್ರೇಲರ್, ಟೀಸರ್ ಗಳು ಬಿಡುಗಡೆಯಾದರೆ ಆಗ ಯೂಟ್ಯೂಬ್ ನಲ್ಲಿ ಟ್ರೆಂಡ್ ಅಗುತ್ತದೆ. ಆದರೆ ಇಲ್ಲಿ ವಿಶೇಷ ಎಂಬಂತೆ ವರ್ಷದ ಹಿಂದಿನ ಸಿನಿಮಾ ಈಗ ಟ್ರೆಂಡ್ ಆಗಿದೆ. ಇನ್ನು 'ದೊಡ್ಮನೆ ಹುಡ್ಗ' ಸಿನಿಮಾ ಟಿ.ಆರ್.ಪಿ ಯಲ್ಲಿಯೂ ದಾಖಲೆ ಮಾಡಿತ್ತು.

'ದೊಡ್ಮನೆ ಹುಡ್ಗ' ಸಿನಿಮಾ ಪುನೀತ್ ಮತ್ತು ರಾಧಿಕಾ ಪಂಡಿತ್ ಅಭಿನಯದ ಎರಡನೇ ಸಿನಿಮಾ. ನಿರ್ದೇಶಕ ಸೂರಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಚಿತ್ರ 40 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು.

English summary
Kannada actor Puneeth Rajkumar starrer Dodmane Huduga is trending No.1 in Youtube. The movie is directed by Soori and it was released in September 2016.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X