»   » ಪಾಂಡವಪುರದಲ್ಲಿ ಪವರ್ ಸ್ಟಾರ್ 'ದೊಡ್ಮನೆ ಹುಡ್ಗ'

ಪಾಂಡವಪುರದಲ್ಲಿ ಪವರ್ ಸ್ಟಾರ್ 'ದೊಡ್ಮನೆ ಹುಡ್ಗ'

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಮತ್ತೊಂದು ಫ್ಯಾಮಿಲಿ ಡ್ರಾಮಾ ಚಿತ್ರ 'ದೊಡ್ಮನೆ ಹುಡ್ಗ'. ದುನಿಯಾ ಸೂರಿ ಆಕ್ಷನ್ ಕಟ್ ಹೇಳುತ್ತಿರುವ ದೊಡ್ಮನೆ ಹುಡ್ಗ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.

ಎಂ ಗೋವಿಂದು ಅವರು ನಿರ್ಮಿಸುತ್ತಿರುವ ಚಿತ್ರ ಇದಾಗಿದೆ. ಜಾಕಿ ಹಾಗೂ ಅಣ್ಣಾಬಾಂಡ್ ಚಿತ್ರಗಳ ಬಳಿಕ ಸೂರಿ, ಪುನೀತ್ ಕಾಂಬಿನೇಷನಲ್ಲಿ ಬರುತ್ತಿರುವ ಮೂರನೇ ಚಿತ್ರ ದೊಡ್ಮನೆ ಹುಡ್ಗ. ಆಕ್ಷನ್ ಚಿತ್ರಗಳಿಗೆ ಹೆಸರಾಗಿರುವ ದುನಿಯಾ ಸೂರಿ ಈ ಬಾರಿ ಫ್ಯಾಮಿಲಿ ಶೀರ್ಷಿಕೆ ಮೂಲಕ ಗಮನಸೆಳೆದಿದ್ದಾರೆ. [ಬಂಪರ್ ಆಫರ್ ಗಿಟ್ಟಿಸಿಕೊಂಡ ನಟಿ ರಾಧಿಕಾ ಪಂಡಿತ್]


'Dodmane Huduga' shooting in brisk progress

ಅಜಯ್ ಪಿಕ್ಚರ್ಸ್ ಲಾಂಛನದಲ್ಲಿ ಎಂ.ಗೋವಿಂದು ನಿರ್ಮಿಸುತ್ತಿರುವ 'ದೊಡ್ಮನೆ ಹುಡ್ಗ' ಚಿತ್ರಕ್ಕೆ ಮಂಡ್ಯ ಜಿಲ್ಲೆಯ ಪಾಂಡವಪುರದ ಸುತ್ತಮುತ್ತ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಸೂರಿ ಹಾಗೂ ವಿಕಾಸ್ ಅವರು ಬರೆದಿರುವ ಕಥೆಗೆ ಸೂರಿ ಅವರೆ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ['ಫಿಲ್ಮಿಬೀಟ್ ಕನ್ನಡ' ಉಚಿತ ಸುದ್ದಿಸಾರಂಗಿ]


ಈ ಹಿಂದೆ 'ವಿಷ್ಣುಸೇನೆ' ಹಾಗೂ 'ಡೈರೆಕ್ಟರ್ಸ್ ಸ್ಪೆಷಲ್' ಚಿತ್ರಗಳನ್ನು ನಿರ್ಮಿಸಿದ್ದ ಎಂ ಗೋವಿಂದು ಈ ಬಾರಿ 'ದೊಡ್ಮನೆ ಹುಡ್ಗನ' ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸತ್ಯ ಹೆಗಡೆ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ದೀಪು.ಎಸ್.ಕುಮಾರ್ ಸಂಕಲನ, ಶಶಿಧರ ಅಡಪ ಅವರ ಕಲಾ ನಿರ್ದೇಶನವಿದೆ.


ಚಿತ್ರದ ಪಾತ್ರವರ್ಗದಲ್ಲಿ ರೆಬಲ್ ಸ್ಟಾರ್ ಅಂಬರೀಶ್, ಪುನೀತ್ ರಾಜಕುಮಾರ್, ಸುಮಲತಾ ಅಂಬರೀಶ್, ಭಾರತಿ ವಿಷ್ಣುವರ್ಧನ, ರಾಧಿಕಾ ಪಂಡಿತ್, ಶ್ರೀನಿವಾಸಮೂರ್ತಿ, ಅವಿನಾಶ್, ರಂಗಾಯಣ ರಘು, ರವಿಸಂಕರ್, ಉದಯ್, ಚಿಕ್ಕಣ್ಣ, ಸಂತೋಷ್ ರಾಜವರ್ಧನ ಮುಂತಾದವರಿದ್ದಾರೆ. (ಫಿಲ್ಮಿಬೀಟ್ ಕನ್ನಡ)

English summary
Power Star Puneeth Rajkumar starrer Dodmane Huduga directed by Duniya Soori, shooting in brisk progress around Pandavapura, Mandya district. Radhika Pandit playing opposite to Puneeth in the movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada