»   » ಪುನೀತ್ ಜೊತೆ ಡ್ಯಾನ್ಸ್ ಮಾಡಲು ಅಭಿಮಾನಿಗಳಿಗೆ ಇಲ್ಲಿದೆ ಅವಕಾಶ

ಪುನೀತ್ ಜೊತೆ ಡ್ಯಾನ್ಸ್ ಮಾಡಲು ಅಭಿಮಾನಿಗಳಿಗೆ ಇಲ್ಲಿದೆ ಅವಕಾಶ

Posted By:
Subscribe to Filmibeat Kannada

ನಿರ್ದೇಶಕ ದುನಿಯಾ ಸೂರಿ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಾಂಬಿನೇಷನ್ ನ ಅದ್ದೂರಿ ಬಜೆಟ್ ನ 'ದೊಡ್ಮನೆ ಹುಡುಗ' ಚಿತ್ರ ಗಾಂಧಿನಗರದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

ಚಿತ್ರದ ಟೈಟಲ್ ಟ್ರ್ಯಾಕ್ ಅನ್ನು ಬಹಳ ಅದ್ದೂರಿಯಾಗಿ ಕೋಟಿ ವೆಚ್ಚ ರೂಪಾಯಿ ಭರಿಸಿ ಶೂಟಿಂಗ್ ಮಾಡಲು ನಿರ್ದೇಶಕ ಸೂರಿ ಪ್ಲ್ಯಾನ್ ಮಾಡುತ್ತಿದ್ದಾರೆ ಅಂತ ಮೊನ್ನೆ ಮೊನ್ನೆ ನಾವೇ ನಿಮಗೆ ಇದೇ ಫಿಲ್ಮಿಬೀಟಲ್ಲಿ ಹೇಳಿದ್ವಿ.[ಕೋಟಿ ರೂಪಾಯಿ ವೆಚ್ಚದಲ್ಲಿ 'ದೊಡ್ಮನೆ ಹುಡುಗ' ಸಾಂಗ್ ಶೂಟ್]


ಇದೀಗ 'ದೊಡ್ಮನೆ ಹುಡುಗ' ಚಿತ್ರದ 'ಅಭಿಮಾನಿಗಳಿಗೋಸ್ಕರ' ಎಂಬ ಹಾಡಿನಲ್ಲಿ ಹೆಜ್ಜೆ ಹಾಕಲು ಪುನೀತ್ ಅಭಿಮಾನಿಗಳಿಗೆ ಅಮೂಲ್ಯ ಅವಕಾಶ ಇದ್ದು, ಆಸಕ್ತಿ ಇರುವ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಜೊತೆ ಹಾಡಿಗೆ ಸಖತ್ತಾಗಿ ಹೆಜ್ಜೆ ಹಾಕಬಹುದು.


'Dodmane Huduga' title track shoot with Actor Puneeth Rajkumar's fans

'ಅಭಿಮಾನಿಗಳೇ ನಮ್ಮನೆ ದೇವ್ರು' ಅನ್ನೋ ಹಾಡನ್ನು ಸುಮಾರು 8 ದಿನಗಳಲ್ಲಿ ಶೂಟಿಂಗ್ ನಡೆಸಲು ಚಿತ್ರತಂಡ ನಿರ್ಧರಿಸಿದ್ದು, 22 ರಿಂದ ಶೂಟಿಂಗ್ ಆರಂಭವಾಗುತ್ತಿದೆ. 'ಜೂನ್ 22 ರಂದು ಬಳ್ಳಾರಿ ದುರ್ಗಮ್ಮ ದೇವಿ ಮೈದಾನದಲ್ಲಿ', '23 ರಂದು ಹೊಸಪೇಟೆ ವಿಜಯ ನಗರ ಕಾಲೇಜು ಮೈದಾನ', '24 ರಂದು ಹುಬ್ಬಳ್ಳಿ ಚೆನ್ನಮ್ಮ ಸರ್ಕಲ್', '25 ಚಿತ್ರದುರ್ಗ ಮದಕರಿ ನಾಯಕ ಸರ್ಕಲ್', 27 ಮತ್ತು 28 ಬೆಂಗಳೂರಿನ ಮಲ್ಲೇಶ್ವರಂ ಮೈದಾನದಲ್ಲಿ, ಚಿತ್ರೀಕರಣ ಅಂತ್ಯಗೊಳ್ಳಲಿದೆ.


ನಿರ್ದೇಶಕ ಯೋಗರಾಜ್ ಭಟ್ ಅವರು ರಚಿಸಿರುವ ಈ ಹಾಡಿನಲ್ಲಿ ಅಭಿಮಾನಿಗಳೇ ಪ್ರಮುಖ ಆಕರ್ಷಣೆ ಆಗಿರೋದ್ರಿಂದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೊತೆ ಅಭಿಮಾನಿಗಳು ಹೆಜ್ಜೆ ಹಾಕಲಿದ್ದಾರೆ.[ಅಂಬರೀಶ್ ಹುಟ್ಟುಹಬ್ಬಕ್ಕೆ 'ದೊಡ್ಮನೆ'ಯಿಂದ ಸಿಕ್ಕ ಉಡುಗೊರೆ ಇದು.!]


ಈಗಾಗಲೇ ಚಿತ್ರೀಕರಣಕ್ಕೆ ನಿಗದಿಯಾಗಿರುವ ಎಲ್ಲಾ ಸ್ಥಳಗಳಲ್ಲಿ ಸುಮಾರು ಸಾವಿರದ ಐನೂರಕ್ಕೂ ಹೆಚ್ಚು ಮಂದಿ ಪುನೀತ್ ಅವರ ಜೊತೆ ಹೆಜ್ಜೆ ಹಾಕಲಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಭಾಗವಹಿಸಬೇಕು ಎಂದು ಚಿತ್ರತಂಡದವರು ಮನವಿ ಮಾಡಿದ್ದಾರೆ.


ಅಂದಹಾಗೆ ಹಾಡಿನ ಚಿತ್ರೀಕರಣದಲ್ಲಿ ಭಾಗವಹಿಸಿದ ಎಲ್ಲಾ ಅಭಿಮಾನಿಗಳಿಗೆ, ಚಿತ್ರತಂಡದವರು ನೀರು ಮತ್ತು ಊಟದ ವ್ಯವಸ್ಥೆ ಮಾಡಿದ್ದು, ಚಿತ್ರೀಕರಣದ ಸಂದರ್ಭದಲ್ಲಿ ಜನ ಸಂಖ್ಯೆ ನಿಯಂತ್ರಣ ಮಾಡುವ ವ್ಯವಸ್ಥೆಯನ್ನು ಪುನೀತ್ ಮತ್ತು ಶಿವಣ್ಣ ಅವರ ಅಭಿಮಾನಿ ಸಂಘದ ಸದಸ್ಯರು ನೋಡಿಕೊಳ್ಳಲಿದ್ದಾರೆ. (ಚಿತ್ರದ ಶೂಟಿಂಗ್ ಸ್ಟಿಲ್ಸ್ ನೋಡಿ ಕೆಳಗಿನ ಸ್ಲೈಡುಗಳಲ್ಲಿ..)


-
-
-
-
-
-
-
-
-
-
-
-
-
-
-
-
-
-
ಪುನೀತ್ ಜೊತೆ ಡ್ಯಾನ್ಸ್ ಮಾಡಲು ಅಭಿಮಾನಿಗಳಿಗೆ ಇಲ್ಲಿದೆ ಅವಕಾಶ

ಪುನೀತ್ ಜೊತೆ ಡ್ಯಾನ್ಸ್ ಮಾಡಲು ಅಭಿಮಾನಿಗಳಿಗೆ ಇಲ್ಲಿದೆ ಅವಕಾಶ

-
-
-
-
-
-
-
-
-
-
-
-
-
-
English summary
Kannada Movie 'Dodmane Huduga' title track 'Abhimanigaligoskara' shoot with Actor Puneeth Rajkumar's fans on June 22nd onwards. Kannada Actor Puneeth Rajkumar, Kannada Actress Radhika Pandith, Actor Ambareesh, Actress Bharathi Vishnuvardhan in the lead role. The movie is directed by Duniya Soori.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada