For Quick Alerts
  ALLOW NOTIFICATIONS  
  For Daily Alerts

  ಕನ್ನಡದ ಈ ಹೊಸ ಸಿನಿಮಾಗಳಲ್ಲಿ ಹೆಚ್ಚಾಗುತ್ತಿದೆ ಶ್ವಾನ ಪ್ರೇಮ

  By Naveen
  |

  ಸಿನಿಮಾಗಳಲ್ಲಿ ಪ್ರಾಣಿಗಳನ್ನು ಬಳಸುವುದು ಅನೇಕ ವರ್ಷಗಳಿಂದ ಇರುವ ರೂಡಿ. ಚಿತ್ರದ ಕಥೆಗೆ ಕೆಲ ಪ್ರಾಣಿಗಳು ಬಹಳ ಮುಖ್ಯವಾಗುತ್ತದೆ. ಕೆಲ ಸಿನಿಮಾಗಳಲ್ಲಿ ನಟ ನಟಿಯರ ರೀತಿ ಪ್ರಾಣಿಗಳು ಕೂಡ ಪ್ರಮುಖವಾದ ಪಾತ್ರವನ್ನು ನಿರ್ವಹಿಸಿವೆ.

  ಕನ್ನಡದಲ್ಲಿ ಹೀಗೀಗಾ ಪ್ರಾಣಿಗಳ ಆಧಾರಿತ ಚಿತ್ರಗಳು ಕಡಿಮೆ ಆಗಿತ್ತು. ಆದರೆ ಇದೀಗ ಮತ್ತೆ ತೆರೆಯ ಮೇಲೆ ಶ್ವಾನಗಳ ಪ್ರೇಮ ಹೆಚ್ಚಾಗಿದೆ. ಕನ್ನಡಲ್ಲಿ ಈಗ ಮೂರು ಬ್ಯಾಕ್ ಟು ಬ್ಯಾಕ್ ಶ್ವಾನದ ಸಿನಿಮಾಗಳು ಬರುತ್ತಿದೆ. ಸಾಮಾನ್ಯವಾಗಿ ಬಹುತೇಕ ಸೆಲೆಬ್ರಿಟಿಗಳಿಗೆ ಶ್ವಾನ ಅಂದರೆ ತುಂಬ ಇಷ್ಟ ಇರುತ್ತದೆ. ಆದರೆ ಈಗ ಅದು ಸಿನಿಮಾದಲ್ಲಿಯೂ ಮುಂದುವರೆದಿದೆ. ಮುಂದೆ ಓದಿ....

  '777 ಚಾರ್ಲಿ'

  '777 ಚಾರ್ಲಿ'

  '777 ಚಾರ್ಲಿ' ಎನ್ನುವ ಹೊಸ ಚಿತ್ರ ಇತ್ತೀಚಿಗಷ್ಟೆ ಶುರು ಆಗಿದೆ. ಈ ಸಿನಿಮಾ ಶ್ವಾನ ಮತ್ತು ಮನುಷ್ಯನ ಬಾಂಡಿಂಗ್ ಹೇಳುವಂತಹ ಕಥೆಯನ್ನು ಹೊಂದಿದೆಯಂತೆ. ಚಿತ್ರದಲ್ಲಿ ಶ್ವಾನದ ಹೆಸರು ಚಾರ್ಲಿ ಆಗಿದ್ದು, ಶ್ವಾನದ ಲೈಸನ್ಸ್ ನಂಬರ್ 777 ಅಂತೆ. ಹೀಗಾಗಿ ಚಿತ್ರಕ್ಕೆ '777 ಚಾರ್ಲಿ' ಎಂಬ ಹೆಸರನ್ನು ಆಯ್ಕೆ ಮಾಡಿಕೊಂಡಿದ್ದಾರಂತೆ.

  ರಕ್ಷಿತ್ ಶೆಟ್ಟಿ ನಿರ್ಮಾಣ

  ರಕ್ಷಿತ್ ಶೆಟ್ಟಿ ನಿರ್ಮಾಣ

  'ಕಿರಿಕ್ ಪಾರ್ಟಿ' ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಗೆಳೆಯರ ಪೈಕಿ ಒಬ್ಬರಾಗಿ ನಟಿಸಿದ್ದ ನಟ ಅರವಿಂದ್‌ ಅಯ್ಯರ್‌ '777 ಚಾರ್ಲಿ' ಚಿತ್ರದ ಹೀರೋ ಆಗಿದ್ದಾರೆ. ಈ ಚಿತ್ರವನ್ನು ಸ್ವತಃ ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡುತ್ತಿದ್ದಾರೆ. ರಕ್ಷಿತ್ ಶೆಟ್ಟಿ ಜೊತೆ ಕೆಲಸ ಮಾಡಿರುವ ಕಿರಣ್ ರಾಜ್‌ ಎಂಬುವವರು ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್‌ಗೆ ಪರಿಚಿತವಾಗುತ್ತಿದ್ದಾರೆ.

  'ಕಿರಿಕ್ ಪಾರ್ಟಿ'ಯ ಸ್ನೇಹಿತನಿಗಾಗಿ ರಕ್ಷಿತ್ ಮತ್ತೊಂದು ಸಿನಿಮಾ ನಿರ್ಮಾಣ!

  'ನಾನು ಮತ್ತು ಗುಂಡ'

  'ನಾನು ಮತ್ತು ಗುಂಡ'

  'ನಾನು ಮತ್ತು ಗುಂಡ' ಚಿತ್ರದ ಕಥೆ ಕೂಡ ಒಂದು ನಾಯಿಯ ಸುತ್ತ ನಡೆಯುತ್ತದೆ. ಆ ನಾಯಿಯ ಹೆಸರು ಗುಂಡ ಆಗಿದ್ದು, ಅದೇ ಚಿತ್ರದ ಟೈಟಲ್ ಆಗಿದೆ. ಪ್ರಾಣಿ ಪ್ರೀತಿ ಮನುಷ್ಯರನ್ನು ಯಾವ ರೀತಿ ಬದಲಿಸುತ್ತದೆ ಎಂಬುದು ಚಿತ್ರದ ಕಥಾ ವಸ್ತುವಾಗಿದೆ. ಇಲ್ಲಿ ಶಿವರಾಜ್ ಕೆ.ಆರ್.ಪೇಟೆ ಮತ್ತು ಸಂಯುಕ್ತ ಹೊರನಾಡು ದಂಪತಿಗಳಾಗಿ ತೆರೆ ಹಂಚಿಕೊಂಡಿದ್ದಾರೆ.

  ಕಾಮಿಡಿ ಕಿಲಾಡಿ ಶಿವರಾಜ್ ಹೆಂಡತಿ ಆದ ಸಂಯುಕ್ತ ಹೊರನಾಡು!

  'ನಿಶ್ಯಬ್ದ 2'

  'ನಿಶ್ಯಬ್ದ 2'

  ಈಗಾಗಲೇ ರಿಲೀಸ್ ಗೆ ರೆಡಿ ಇರುವ 'ನಿಶ್ಯಬ್ದ 2' ಚಿತ್ರದಲ್ಲಿ ಕೂಡ ಶ್ವಾನ ಪ್ರಮುಖ ಪಾತ್ರವನ್ನುವಹಿಸಿದೆ. ಚಿತ್ರದಲ್ಲಿ ಕಪ್ಪು ಶ್ವಾನವೊಂದು ನಟನೆ ಮಾಡಿದೆ. ದೇವರಾಜ್ ಕುಮಾರ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ನಟ ರೂಪ್ ಶೆಟ್ಟಿ ಇಲ್ಲಿ ನಾಯಕನಾಗಿದ್ದಾರೆ.

  ವಿಷ್ಣುವರ್ಧನ್ ಚಿತ್ರದಲ್ಲಿ

  ವಿಷ್ಣುವರ್ಧನ್ ಚಿತ್ರದಲ್ಲಿ

  ಈ ಹಿಂದೆ ವಿಷ್ಣುವರ್ಧನ್ ಅವರ 'ನಿಶ್ಯಬ್ದ' ಚಿತ್ರದಲ್ಲಿ ಶ್ವಾನ ಪ್ರಮುಖ ಪಾತ್ರವನ್ನು ನಿರ್ವಹಿಸಿತ್ತು. ಅದೇ ಕಾರಣದಿಂದ 'ನಿಶ್ಯಬ್ದ 2' ಚಿತ್ರದಲ್ಲಿಯೂ ಶ್ವಾನವನ್ನು ಬಳಸಿಕೊಳ್ಳಲಾಗಿದೆ.

  English summary
  List of upcoming dog oriented movies in kannada.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X