For Quick Alerts
  ALLOW NOTIFICATIONS  
  For Daily Alerts

  ಡಾಲಿ ಧನಂಜಯ್‌ 'ಬಡವ ರಾಸ್ಕಲ್'ಗಾಗಿ ಮದುವೆ ಮನೆಯಲ್ಲಿ ಸ್ಲೇಟ್ ಹಿಡಿದ ವಧು ವರ

  |

  ಸ್ಯಾಂಡಲ್‌ವುಡ್‌ನ ನಟರಾಕ್ಷಸ ಡಾಲಿ ಧನಂಜಯ್. ಎಲ್ಲಿ ನೋಡಿದರೂ ಇವರ ಬಗ್ಗೆನೇ ಚರ್ಚೆ. ಯಾರು ನೋಡಿದರೂ ಕೈಯಲ್ಲಿ ಸ್ಲೇಟ್ ಹಿಡಿದು ಸಿನಿಮಾ ನೋಡಿ ಅಂತ ಪ್ರಚಾರ ಮಾಡುತ್ತಿದ್ದಾರೆ. ಈಗಾಗೇ ಡಾಲಿ ಧನಂಜಯ್ ಸಿನಿಮಾ 'ಬಡವ ರಾಸ್ಕಲ್' ಗೆ ಸೂಪರ್‌ ರೆಸ್ಪಾನ್ಸ್ ಸಿಗುತ್ತಿದೆ. ಎಲ್ಲರ ಬಾಯಲ್ಲೂ ಬರೀ ಡಾಲಿ ನಟನೆಯ ಸಿನಿಮಾ ಬಗ್ಗೆನೇ ಟಾಕ್. ಈಗ ಮಧು ಮಕ್ಕಳು ಕೂಡ ಮದುವೆ ಮನೆಯಲ್ಲಿ 'ಬಡವ ರಾಸ್ಕಲ್' ಪ್ರಚಾರಕ್ಕೆ ಇಳಿದಿದ್ದಾರೆ.

  ತರಕಾರಿ ಅಂಗಡಿ, ದಿನಸಿ ಅಂಗಡಿ, ಮಾಂಸದ ಅಂಗಡಿ, ಬಿರಿಯಾನಿ ಹೊಟೇಲ್ ಎಲ್ಲಿ ನೋಡಿದರೂ ಸ್ಲೇಟ್ ಮೇಲೆ 'ಬಡವ ರಾಸ್ಕಲ್' ರಿಲೀಸ್ ಡೇಟ್ ಬರೆದು ಪ್ರಚಾರ ಮಾಡುತ್ತಿದ್ದಾರೆ. ಧನಂಜಯ್ ಅಭಿಮಾನಿಗಳೇ ಸ್ವಯಂ ಪ್ರೇರಿತರಾಗಿ ಈ ಕೆಲಸಕ್ಕೆ ಮುಂದಾಗಿದ್ದಾರೆ. ಈ ವಿಶಿಷ್ಟ ಪ್ರಯತ್ನಕ್ಕೆ ಸ್ವತ: ಧನಂಜಯ್ ತಲೆದೂಗಿದ್ದಾರೆ. ಅಭಿಮಾನಿಗಳೇ ಶೇರ್ ಮಾಡಿದ ಫೋಟೊವನ್ನು ತನ್ನ ಸೋಶಿಯಲ್ ಮೀಡಿಯಾದಲ್ಲೂ ಶೇರ್ ಮಾಡುತ್ತಿದ್ದಾರೆ. ಈಗ ಮದುವೆ ಮನೆಯಲ್ಲಿ ಮದು ಮಕ್ಕಳು ಪ್ರಚಾರ ಮಾಡಿದ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

  ಮದುವೆ ಮನೆಯಲ್ಲಿ 'ಬಡವ ರಾಸ್ಕಲ್' ಪ್ರಚಾರ

  ಮದುವೆ ಮನೆಯಲ್ಲಿ 'ಬಡವ ರಾಸ್ಕಲ್' ಪ್ರಚಾರ

  ಡಾಲಿ ಧನಂಜಯ್ ಅದ್ಯಾವುದೇ ಪಾತ್ರ ಕೊಟ್ಟರೂ ಸೈ. ರಗಡ್ ಲುಕ್ ಕೊಟ್ಟು ವಿಲನ್ ಶೇಡ್‌ನಲ್ಲಿ ನಟಿಸುವುದಕ್ಕೂ ಸೈ.. ಇತ್ತ ಪಕ್ಕಾ ಫ್ಯಾಮಿಲಿಮ್ಯಾನ್ ಲುಕ್ ಕೊಡಲು ಜೈ. ಈ ಎರಡೂ ಅವತಾರಗಳಲ್ಲಿ ಡಾಲಿಯನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಧನಂಜಯ್ ಪಕ್ಕಾ ಮಧ್ಯಮ ವರ್ಗದ ವ್ಯಕ್ತಿಯೊಬ್ಬನ ಕಥೆಯನ್ನು ತೆರೆಮೇಲೆ ತರಲು ಸಜ್ಜಾಗಿದ್ದಾರೆ. ಅದುವೇ 'ಬಡವ ರಾಸ್ಕಲ್'. ಇದೇ ಸಿನಿಮಾವನ್ನು ಜನರೇ ವಿಭಿನ್ನವಾಗಿ ಪ್ರಚಾರ ಮಾಡುತ್ತಿದ್ದಾರೆ. ಈಗ ಮದುವೆ ಮನೆಯಲ್ಲಿ ವಧು ವರರೇ ಸ್ಲೇಟ್ ಹಿಡಿದು ಪ್ರಚಾರಕ್ಕಿಳಿದಿದ್ದಾರೆ.

  ವೈರಲ್ ಆಗುತ್ತಿದೆ ವಧು ವರರ ವಿಡಿಯೋ

  ವೈರಲ್ ಆಗುತ್ತಿದೆ ವಧು ವರರ ವಿಡಿಯೋ

  ಮದುವೆ ಮನೆಯಲ್ಲಿ ಅಡುಗೆ ಮಾಡುವ ಭಟ್ಟರು ಡಿಸೆಂಬರ್ 24ಕ್ಕೆ 'ಬಡವ ರಾಸ್ಕಲ್' ಬಿಡುಗಡೆ ಅಂತ ಬರೆದ ಸ್ಲೇಟ್ ಹಿಡಿದು ಕೂತಿದ್ದಾರೆ. ಹಪ್ಪಳ ಕರಿಯುವ ಭಟ್ಟರು 'ಬಡವ ರಾಸ್ಕಲ್' ಪ್ರಚಾರ ಮಾಡುತ್ತಿದ್ದಾರೆ. ವಾಲಗ ಊದುವವರು ಕೂಡ ಸ್ಲೇಟ್ ಹಿಡಿದು ಪ್ರಚಾರ ಮಾಡುತ್ತಿದ್ದಾರೆ. ಮದುವೆಗೆ ಬಂದವರ ಕೈಯಲ್ಲೂ ಸ್ಲೇಟ್ ಹಿಡಿದು ಪ್ರಚಾರ ಮಾಡುತ್ತಿದ್ದಾರೆ. ಮಧು ಮಕ್ಕಳು ಕೂಡ ವೇದಿಕೆ ಮೇಲೆ 'ಬಡವ ರಾಸ್ಕಲ್' ಪ್ರಚಾರಕ್ಕಿಳಿದಿದ್ದಾರೆ.

  ವಧು ವರರ ವಿಡಿಯೋ ಶೇರ್ ಮಾಡಿದ ಡಾಲಿ

  ವಧು ವರರ ವಿಡಿಯೋ ಶೇರ್ ಮಾಡಿದ ಡಾಲಿ

  ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಬಡವ ರಾಸ್ಕಲ್ ವಿಡಿಯೋವನ್ನು ಡಾಲಿ ಧನಂಜಯ್ ಕೂಡ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದಾರೆ. " ಜನರೇ ಪ್ರೀತಿ ತೋರಿಸುತ್ತಿದ್ದಾರೆ. ಅವರೂ ಬಡವ ರಾಸ್ಕಲ್ ಸಿನಿಮಾದ ಪ್ರಚಾರದಲ್ಲಿ ತೊಡಗಿಸಿಕೊಂಡಿರುವುದು ನೋಡಿದರೆ ಖುಷಿಯಾಗುತ್ತೆ. ಈಗ ತಾನೇ ಮಧು ಮಕ್ಕಳ ವಿಡಿಯೋವನ್ನು ಸ್ನೇಹಿತರು ಕಳುಹಿಸಿದ್ದರು. ಅದು ಇಷ್ಟ ಆಯ್ತು. ಅದಕ್ಕೆ ತನ್ನ ಟ್ವಿಟರ್‌ ಖಾತೆಯಲ್ಲಿ ಶೇರ್ ಮಾಡಿದ್ದೇನೆ. ಜನರು ಹೀಗೆ ಪ್ರತಿಕ್ರಿಯೆ ನೀಡುತ್ತಿರುವುದು ಖುಷಿ ಕೊಟ್ಟಿದೆ." ಎಂದು ಫಿಲ್ಮಿ ಬೀಟ್‌ಗೆ ಧನಂಜಯ್ ಪ್ರತಿಕ್ರಿಯೆ ನೀಡಿದ್ದಾರೆ.

  ಧನಂಜಯ್ ನಿರ್ಮಿಸಿದ ಸಿನಿಮಾ ಬಡವ ರಾಸ್ಕಲ್

  'ಬಡವ ರಾಸ್ಕಲ್' ಸಿನಿಮಾವನ್ನು ಡಾಲಿ ಧನಂಜಯ್ ನಿರ್ಮಾಣ ಮಾಡಿದ್ದಾರೆ. ಮಧ್ಯಮ ವರ್ಗದ ಜನರ ದಿನನಿತ್ಯದ ಜೀವನದಲ್ಲಿ ನಡೆಯುವ ಘಟನೆಗಳೇ ಈ ಸಿನಿಮಾ ಕಥಾವಸ್ತು. ಈ ಚಿತ್ರದಲ್ಲಿ ಧನಂಜಯ್‌ ಆಟೋ ಡ್ರೈವರ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಶಂಕರ್‌ ಗುರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ.

  English summary
  Dolly Dhananjay is promoting differently for his movie Badava rascal releasing on Christmas. Vegetable Market, mutton stall, marriage hall he is promoting in a different way.
  Wednesday, December 1, 2021, 21:47
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X