For Quick Alerts
  ALLOW NOTIFICATIONS  
  For Daily Alerts

  ಡಾ.ಬಿ.ಆರ್.ಅಂಬೇಡ್ಕರ್ ಚಿತ್ರ ಕನ್ನಡಕ್ಕೆ ಡಬ್: ಕರ್ನಾಟಕ ಸರ್ಕಾರ

  By Suneel
  |

  ಪರಭಾಷಾ ಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳ ಕನ್ನಡ ಡಬ್ಬಿಂಗ್ ಗೆ ಸ್ಯಾಂಡಲ್ ವುಡ್ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಲವು ದಶಕಗಳಿಂದ ಕಾನೂನು ಬಾಹಿರವಾಗಿ ವಿರೋಧ ವ್ಯಕ್ತಿಪಡಿಸುತ್ತಲೇ ಇದೆ. ಅಲ್ಲದೇ ಪರಭಾಷೆ ಚಿತ್ರಗಳ ಡಬ್ಬಿಂಗ್ ವಿರೋಧಿಸಿ ಈ ಬಗ್ಗೆ ಕೆಎಫ್‌ಸಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸ್ಪರ್ಧಾತ್ಮಕ ಮೇಲ್ಮನವಿ ನ್ಯಾಯಮಂಡಳಿ(Cometition Appellate Tribunal) ಇತ್ತೀಚೆಗೆ ವಜಾಗೊಳಿಸಿದೆ.

  ಆದರೆ ಈಗ ಕರ್ನಾಟಕ ಸರ್ಕಾರ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ ಕುರಿತ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಲು ನಿರ್ಧರಿಸಿದೆ. ಚಿತ್ರದ ಹೆಸರೇನು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

  ಚಿತ್ರಕೃಪೆ: en.wikipedia.org

  ಡಾ.ಬಿ.ಆರ್.ಅಂಬೇಡ್ಕರ್ ಕುರಿತ ಚಿತ್ರ ಕನ್ನಡಕ್ಕೆ ಡಬ್

  ಡಾ.ಬಿ.ಆರ್.ಅಂಬೇಡ್ಕರ್ ಕುರಿತ ಚಿತ್ರ ಕನ್ನಡಕ್ಕೆ ಡಬ್

  ಕರ್ನಾಟಕ ಸರ್ಕಾರ ಕನ್ನಡಕ್ಕೆ ಡಬ್ ಮಾಡಲು ನಿರ್ಧರಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಕುರಿತ ಚಿತ್ರದ ಹೆಸರು 'ಡಾ. ಬಾಬಾಸಾಹೇಬ್ ಅಂಬೇಡ್ಕರ್'. ಇಂಗ್ಲಿಷ್ ಭಾಷೆಯಲ್ಲಿ ಮೂಡಿಬಂದ ಈ ಚಿತ್ರವನ್ನು ಸಾಮಾಜಿಕ ನ್ಯಾಯ ಮತ್ತು ಅಭಿವೃದ್ದಿ ಸಚಿವಾಲಯ ಹಾಗೂ ಮಹಾರಾಷ್ಟ್ರ ಸರ್ಕಾರ ಜಂಟಿಯಾಗಿ 8.95 ಕೋಟಿ ರೂ ಬಜೆಟ್ ನಲ್ಲಿ ನಿರ್ಮಾಣ ಮಾಡಿದ್ದವು.

   'ಡಾ. ಬಾಬಾಸಾಹೇಬ್ ಅಂಬೇಡ್ಕರ್' ಚಿತ್ರ ಬಿಡುಗಡೆ ಆಗಿದ್ದು ಯಾವಾಗ?

  'ಡಾ. ಬಾಬಾಸಾಹೇಬ್ ಅಂಬೇಡ್ಕರ್' ಚಿತ್ರ ಬಿಡುಗಡೆ ಆಗಿದ್ದು ಯಾವಾಗ?

  'ಡಾ.ಬಾಬಾಸಾಹೇಬ್ ಅಂಬೇಡ್ಕರ್' ಚಿತ್ರವನ್ನು 2000 ನೇ ಇಸವಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ಭಾರತ ದೇಶದ ಅಭಿವೃದ್ಧಿಗೆ ಮತ್ತು ದೇಶಕ್ಕೆ ಸುಭದ್ರವಾದ ಸಂವಿಧಾನ ರಚನೆಗಾಗಿ ಡಾ.ಬಿ.ಆರ್.ಅಂಬೇಡ್ಕರ್ ನೀಡಿದ ಕೊಡುಗೆ ಬಗ್ಗೆ ಕುರಿತ ವಿಷಯಗಳ ಆಧಾರಿತವಾಗಿ ಈ ಸಿನಿಮಾ ರಚಿಸಲಾಗಿದೆ.

  ಅಂಬೇಡ್ಕರ್ ಪಾತ್ರದಲ್ಲಿ ಮಮ್ಮೂಟ್ಟಿ

  ಅಂಬೇಡ್ಕರ್ ಪಾತ್ರದಲ್ಲಿ ಮಮ್ಮೂಟ್ಟಿ

  ಖ್ಯಾತ ಮರಾಠಿ ಚಿತ್ರ ನಿರ್ದೇಶಕರಾದ ಜಬ್ಬರ್ ಪಟೇಲ್ ರವರು ಡೈರೆಕ್ಟ್ ಮಾಡಿದ್ದ 'ಡಾ.ಬಾಬಾಸಾಹೇಬ್ ಅಂಬೇಡ್ಕರ್' ಚಿತ್ರದಲ್ಲಿ ಅಂಬೇಡ್ಕರ್ ಪಾತ್ರವನ್ನು ಮಾಲಿವುಡ್ ಖ್ಯಾತ ನಟ ಮಮ್ಮೂಟ್ಟಿ ರವರು ನಿರ್ವಹಿಸಿದ್ದರು. ಈ ಚಿತ್ರದ ನಟನೆಗಾಗಿ ಮಮ್ಮೂಟ್ಟಿ ಅವರಿಗೆ ಚಿತ್ರ ಬಿಡುಗಡೆಯಾದ ವರ್ಷವೇ ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಲಭಿಸಿತ್ತು. ಅಲ್ಲದೇ ಈ ಚಿತ್ರದಲ್ಲಿ ಸೋನಾಲಿ ಕುಲ್ಕರ್ಣಿ, ಮೋಹನ್ ಗೋಖಲೇ ಮತ್ತು ಮ್ರಿನಾಲ್ ಕುಲ್ಕರ್ಣಿ ಅಭಿನಯಿಸಿದ್ದರು.

  ಚಿತ್ರದ ಡಬ್ಬಿಂಗ್ ಗೆ ಸ್ಯಾಂಡಲ್ ವುಡ್ ವಿರೋಧಿಸುವುದೇ?

  ಚಿತ್ರದ ಡಬ್ಬಿಂಗ್ ಗೆ ಸ್ಯಾಂಡಲ್ ವುಡ್ ವಿರೋಧಿಸುವುದೇ?

  'ಡಾ. ಬಾಬಾಸಾಹೇಬ್ ಅಂಬೇಡ್ಕರ್' ಚಿತ್ರವನ್ನು ಈಗಾಗಲೇ ಭಾರತದ 9 ಭಾಷೆಗಳಿಗೆ ಡಬ್ ಮಾಡಲಾಗಿದೆ. ಈಗ ಕರ್ನಾಟಕ ಸರ್ಕಾರ ಡಾ.ಬಿ.ಆರ್.ಅಂಬೇಡ್ಕರ್ ರವರು ಶ್ರೇಷ್ಠ ಸಂವಿಧಾನದ ಮೂಲಕ ಭಾರತದ ಎಲ್ಲಾ ವರ್ಗದ ಜನರಿಗೂ ಸಾಮಾಜಿಕ ನ್ಯಾಯ ಸಿಗುವಂತೆ ಮಾಡವಲ್ಲಿ ಮತ್ತು ದೇಶದ ಸ್ವಾತಂತ್ರ್ಯ ಲಭಿಸುವಲ್ಲಿ ಅವರ ಪಾತ್ರ ಏನು ಎಂಬುದನ್ನು ತಿಳಿಸುವ ಮೂಲ ಉದ್ದೇಶದಿಂದ ಕನ್ನಡಕ್ಕೆ ಡಬ್ ಮಾಡಲು ನಿರ್ಧರಿಸಿದೆ. "ಈ ಚಿತ್ರದ ಡಬ್ಬಿಂಗ್ ಗೆ ಸ್ಯಾಂಡಲ್ ವುಡ್ ವಿರೋಧಿಸುವುದೇ? ಸಮಯ ಮಾತ್ರ ಇದನ್ನು ಹೇಳುತ್ತದೆ" ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಆಂಜನೇಯ ರವರು ಹೇಳಿದ್ದಾರೆ.

  English summary
  The Karnataka Government has decided to dub the 'Dr Babasaheb Ambedkar' film in Kannada. The film released in 2000 in nine languages.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X