»   » ಬಾಗಲಕೋಟೆಯಲ್ಲಿ 'ಡಾ ರಾಜ್ ಕಪ್-3' ಝಲಕ್

ಬಾಗಲಕೋಟೆಯಲ್ಲಿ 'ಡಾ ರಾಜ್ ಕಪ್-3' ಝಲಕ್

Posted By:
Subscribe to Filmibeat Kannada
ಉತ್ತರ ಕರ್ನಾಟಕದಲ್ಲಿ ನಿನ್ನೆ (ಶನಿವಾರ, 27 ಅಕ್ಟೋಬರ್ 2012) 'ಡಾ ರಾಜ್ ಕಪ್-3' ಕ್ರಿಕೆಟ್ ಪಂದ್ಯಾಟ ನಡೆಯಿತು. ಅದನ್ನು 'ಡಾ ರಾಜ್ ಕಪ್-3' ಎನ್ನುವುದಕ್ಕಿಂತ ಹೆಚ್ಚಾಗಿ ತಾರೆಗಳ ಹಬ್ಬ ಎನ್ನಬಹುದು. ಕಾರಣ, ತೆರೆಯಲ್ಲಿ ನೋಡಿದ್ದ ತಮ್ಮ ನೆಚ್ಚಿನ ಸ್ಟಾರ್ ಗಳು, ಹೀರೋಗಳು, ನಟ, ನಟಿಯರು, ನಿರ್ದೇಶಕರು ಹಾಗೂ ತಂತ್ರಜ್ಞರುಗಳು ತಮ್ಮ ಕಣ್ಣೆದುರಲ್ಲೇ ಓಡಾಡುತ್ತಿರುವುದನ್ನು ನೋಡಿ ಉತ್ತರ ಕರ್ನಾಟಕದ, ಅದರಲ್ಲೂ ವಿಶೇಷವಾಗಿ ಬಾಗಲಕೋಟೆ ಜನರು ಅಚ್ಚರಿ ಹಾಗೂ ಖುಷಿಯಿಂದ ಕುಣಿದಾಡಿದರು.

ರಾಘವೇಂದ್ರ ರಾಜ್ ಕುಮಾರ್, ಉಪೇಂದ್ರ, ಶ್ರೀನಗರ ಕಿಟ್ಟಿ, ಯೋಗೇಶ್, ಮದನ್ ಪಟೇಲ್ ಸೇರಿದಂತೆ ಸಾಕಷ್ಟು ಕಲಾವಿದರು ಉತ್ತರ ಕರ್ನಾಟಕದ ನೆಲದಲ್ಲಿ ಬ್ಯಾಟ್ ಹಾಗೂ ಬಾಲ್ ಹಿಡಿದು ಕ್ರಿಕೆಟ್ ಆಟದಲ್ಲಿ ನಿರತರಾಗಿದ್ದರು. ನೆತ್ತಿ ಸುಡುವ ಬಿಸಿಲು ಹಾಗೂ ಪೊಲೀಸ್ ಲಾಠಿ ಪ್ರಹಾರವನ್ನೂ ಲೆಕ್ಕಿಸದೇ ಸಾವಿರಾರು ಜನರು ಅಲ್ಲಿ ತಾರೆಗಳ ಕ್ರಿಕೆಟ್ ಪಂದ್ಯವನ್ನು ನೋಡಿ ಕೇಕೆ ಚಪ್ಪಾಳೆಗಳ ಸುರಿಮಳೆಗೆ ಸಾಕ್ಷಿಯಾದರು.

ಕನ್ನಡ ಸಿನಿಮಾಗಳನ್ನು ನೋಡಿದಷ್ಟೇ ಪ್ರೀತಿಯಿಂದ ಸಿನಿಮಾ ನಟರಾಡಿದ ಕ್ರಿಕೆಟ್ ಪಂದ್ಯಾಟ ಕೂಡ ನೋಡಿ ಉತ್ತರ ಕರ್ನಾಟಕದ ಮಂದಿ ನೀಡಿದ ಪ್ರೋತ್ಸಾಹ ನಿಜಕ್ಕೂ ಶ್ಲಾಘನೀಯ ಎನಿಸಿತು. ಅಲ್ಲಿದ್ದ ಕಲಾವಿದರು ಜನರ ಪ್ರೀತಿ ಕಂಡು ಅಚ್ಚರಿಗೊಳಗಾಗಿದ್ದು ಕಂಡುಬಂತು. ದಸರಾ ಹಬ್ಬವನ್ನು ಮುಗಿಸಿದ್ದ ಅಲ್ಲಿನ ಮಂದಿ ಈ ಪಂದ್ಯಾಟವನ್ನೂ ಕೂಡ ಮಹಾಹಬ್ಬವೆಂಬಂತೆ ಆಚರಿಸಿದರು. ಪಂದ್ಯದ ಪ್ರಾರಂಭದಿಂದ ಕೊನೆಯವರೆಗೂ ಇದ್ದು ಉತ್ತರ ಕರ್ನಾಟಕದ ಮಂದಿ ಭಾರಿ ಅಭಿಮಾನ ಮೆರೆದರು.

ಮೊದಲು ಫೀಲ್ಡ್ ಗೆ ಇಳಿದ ವಿಲನ್ ತಂಡ, ಎಂಎಲ್ಎ ಲೆನ್ಸ್ ತಂಡದ ವಿರುದ್ಧ 7 ವಿಕೆಟ್ ಗಳ ಜಯ ರೋಚಕ ಗೆಲುವು ಪಡೆಯುವ ಮೂಲಕ ನೆರೆದಿದ್ದ ಅಭಿಮಾನಿಗಳನ್ನು ರಂಜಿಸಿತು. ಫೈಟರ್ಸ್ ಮತ್ತು ಆರ್ ಜಿ ಮೀಡಿಯನ್ ತಂಡಗಳ ಮಧ್ಯೆ ನಡೆದ ಪಂದ್ಯದಲ್ಲಿ ಫೈಟರ್ಸ್ ತಂಡ ಸುಲಭ ಗೆಲುವು ಸಾಧಿಸಿತು. ನಂತರ ಪ್ರೆಸ್ ಕ್ಲಬ್ ಹಾಗೂ ಯಂಗ್ ಸ್ಟಾರ್ ತಂಡಗಳ ನಡುವೆ ನಡೆದ ಮೂರನೇ ಪಂದ್ಯದಲ್ಲಿ ಯಂಗ್ ಸ್ಟಾರ್ ತಂಡದ ವಿರುದ್ಧ ಪ್ರೆಸ್ ಕ್ಲಬ್ ತಂಡ 95 ರನ್ ಗಳ ಭರ್ಜರಿ ಗೆಲುವು ಸಾಧಿಸಿತು. (ಒನ್ ಇಂಡಿಯಾ ಕನ್ನಡ)

English summary
Dr Raj Cup-3, held in Bagalakote yesterday, on 27th October 2012. Raghavendra Rajkumar, Upendra, Yogesh and Srinagar Kitty were the main attraction for the North Karnataka people. Many people gathered there to see their favorite stars. 
 
Please Wait while comments are loading...