»   » ಹಾಸನದಲ್ಲಿ 'ಡಾ.ರಾಜ್' ಕಪ್ ಕ್ರಿಕೆಟ್ ಪಂದ್ಯಾವಳಿ

ಹಾಸನದಲ್ಲಿ 'ಡಾ.ರಾಜ್' ಕಪ್ ಕ್ರಿಕೆಟ್ ಪಂದ್ಯಾವಳಿ

Posted By: ಉದಯರವಿ
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಈಗ ಕ್ರಿಕೆಟ್ ಹಬ್ಬದ ಸಂಭ್ರಮ. ಸ್ಯಾಂಡಲ್ ವುಡ್ ಕ್ರಿಕೆಟ್ ಲೀಗ್ ಪ್ರಕಟವಾಗಿದ್ದೇ ತಡ ಸಾಲುಸಾಲು ಪಂದ್ಯಾವಳಿಗಳು ಘೋಷಣೆಯಾಗಿವೆ. ಜನವರಿಯಲ್ಲಿ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಡೆದರೆ, ಇದೀಗ 'ಡಾ.ರಾಜ್ ಕಪ್' ಅನೌನ್ಸ್ ಆಗಿದೆ.

ಕಳೆದ ಮೂರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ 'ಡಾ.ರಾಜ್ ಕಪ್' ಕ್ರಿಕೆಟ್ ಪಂದ್ಯಾವಳಿ ನಾಲ್ಕನೇ ಸೀಸನ್ ಗೆ ಕಲಾವಿದರು ಮತ್ತು ತಂತ್ರಜ್ಞರು ಈಗಾಗಲೆ ಭರ್ಜರಿ ತಯಾರಿ ನಡೆಸಿದ್ದಾರೆ. ಈ ಸಲ ಹಾಸನ ಜಿಲ್ಲೆಯಲ್ಲಿ ಪಂದ್ಯಾವಳಿ ನಡೆಯಲಿದೆ. [ಜನವರಿಯಲ್ಲಿ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಹೊಸ ಸೀಸನ್]

Dr Raj cup cricket

ಇದೇ ನವೆಂಬರ್ 21 ರಿಂದ 23ರತನಕ 'ರಾಜ್ ಕಪ್' ಪಂದ್ಯಾವಳಿಗೆ ನೃತ್ಯ ನಿರ್ದೇಶಕ ರಾಜೇಶ್ ಬ್ರಹ್ಮಾವರ ನೇತೃತ್ವ ವಹಿಸಿದ್ದಾರೆ. ವಿಶೇಷ ಎಂದರೆ ಫೈನಲ್ ಪಂದ್ಯವನ್ನು ಮಲೇಷ್ಯಾದಲ್ಲಿ ಆಯೋಜಿಸಲಾಗಿದೆ.

ಒಟ್ಟು ಎಂಟು ತಂಡಗಳ ನಡುವೆ ಪಂದ್ಯಾವಳಿ ನಡೆಯಲಿದೆ. ಈಗಾಗಲೆ ಏಳು ತಂಡಗಳು ರೆಡಿಯಾಗಿವೆ. ಹ್ಯಾಟ್ರಿಕ್ ಹೀರೋ ಶಿವಾರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಉಪೇಂದ್ರ, ದುನಿಯಾ ವಿಜಯ್, ಯೋಗಿ, ರಾಜು ಗೌಡ, ಶ್ರೀನಗರಕಿಟ್ಟಿ ತಂಡಗಳ ನಾಯಕತ್ವ ವಹಿಸಲಿದ್ದಾರೆ. [ಸ್ಯಾಂಡಲ್ ವುಡ್ ಕ್ರಿಕೆಟ್ ಲೀಗ್ ಒಗ್ಗಟ್ಟಿನ ಆಟಕ್ಕೆ ರೆಡಿ]

ನವೆಂಬರ್ 9ರಿಂದ ಅಭ್ಯಾಸ ಪಂದ್ಯಗಳು ನಡೆಯಲಿದ್ದು ವಸತಿ ಸಚಿವ ಅಂಬರೀಶ್ ಅವರು ರಾಜ್ ಕಪ್ ಗೆ ಚಾಲನೆ ನೀಡಲಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ದೇಶಕರ ಸಂಘ, ಛಾಯಾಗ್ರಾಹಕರ ಸಂಘ, ನಿರ್ಮಾಪಕರ ಸಂಘ ಈ ಪಂದ್ಯಾವಳಿಗೆ ಬೆಂಬಲ ಸೂಚಿಸಿವೆ' ಎನ್ನುತ್ತಾರೆ ರಾಜೇಶ್‌ ಬ್ರಹ್ಮಾವರ್‌.

ರಾಜ್ ಕಪ್ ಸೀಸನ್ 3ರ ಫೈನಲ್ ಪಂದ್ಯ ಶ್ರೀಲಂಕಾದಲ್ಲಿ ನಡೆದಿತ್ತು. ಇದೀಗ ಸೀಸನ್ ನಾಲ್ಕನ್ನು ಮಲೇಷ್ಯಾದಲ್ಲಿ ನಡೆಯಲಿದೆ. ಡಿಸೆಂಬರ್ 7ರಂದು ನಡೆಯಲಿರುವ ಫೈನಲ್ ಪಂದ್ಯಕ್ಕೆ ಸುಮಾರು 240 ಕಲಾವಿದರು, ತಂತ್ರಜ್ಞರು ಮಲೇಷ್ಯಾಗೆ ಪ್ರಯಾಣ ಬೆಳಸಲಿದ್ದಾರೆ ಎನ್ನುತ್ತಾರೆ ರಾಜೇಶ್ ಬ್ರಹ್ಮಾವರ್.

English summary
The fourth season of 'Dr Raj cup' cricket tournament held in Hassan from the 21st of November and end on 23rd of November. The finals of the tournament will be held in Malaysia on the 07th of December.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada