For Quick Alerts
  ALLOW NOTIFICATIONS  
  For Daily Alerts

  ಡಾ.ರಾಜ್ ಗೆ 'ಭಾರತ ರತ್ನ': ಸರ್ಕಾರದ ಎದುರು ಬೇಡಿಕೆ ಇಟ್ಟ ಅಭಿಮಾನಿಗಳು

  |
  ಸರ್ಕಾರದ ಎದುರು ಬೇಡಿಕೆ ಇಟ್ಟ ರಾಜ್ ಕುಮಾರ್ ಅಭಿಮಾನಿಗಳು | RAJKUMAR | FANS | ONEINDIA KANNADA

  ಕನ್ನಡ ಚಿತ್ರರಂಗ ಕಂಡ ಅದ್ಭುತ ಕಲಾವಿದ, ಕನ್ನಡಿಗರ ಹೆಮ್ಮೆಯ ವರನಟ ಡಾ.ರಾಜ್ ಕುಮಾರ್ ಅವರಿಗೆ ಭಾರತ ರತ್ನ ನೀಡಬೇಕು ಎನ್ನುವ ಕೂಗು ಕೇಳಿ ಬರುತ್ತಿದೆ. ಈ ಬಗ್ಗೆ ಡಾ.ರಾಜ್ ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದಾರೆ. ಈ ವಿಚಾರವಾಗಿ ಮಾತನಾಡಲು ಡಾ.ರಾಜ್ ಅಭಿಮಾನಿಗಳು ಇಂದು ಡಾಲರ್ಸ್ ಕಾಲೊನಿಯಲ್ಲಿರುವ ಸಿಎಂ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿ ಬೇಡಿಕೆ ಸಲ್ಲಿಸಿದ್ದಾರೆ.

  ಕರ್ನಾಟಕ ರತ್ನ, ಪದ್ಮ ಭೂಷಣ, ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸ್ಕೃತ ಡಾ.ರಾಜ್ ಅವರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸದಭಿರುಚಿಯ ಚಿತ್ರಗಳನ್ನು ನೀಡಿರುವ ರಾಜ್ ಅವರಿಗೆ ಭಾರತ ರತ್ನ ಸಿಗಬೇಕು ಎನ್ನುವುದು ಅಭಿಮಾನಿಗಳ ಒತ್ತಾಸೆ. ಈ ಆಸೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ ಅಭಿಮಾನಿಗಳು.

  ಮನೆ ಕೆಲಸದವರ ಜೊತೆ ಕೂತು ಊಟ ಮಾಡಿದ ಅಣ್ಣಾವ್ರ ಮಗಮನೆ ಕೆಲಸದವರ ಜೊತೆ ಕೂತು ಊಟ ಮಾಡಿದ ಅಣ್ಣಾವ್ರ ಮಗ

  ಕನ್ನಡಿಗರ ಹೆಮ್ಮ ಡಾ.ರಾಜ್ ಕುಮಾರ್ ಹೆಸರನ್ನು ದೇಶದ ಅತ್ಯುನ್ನತ ಭಾರತ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಿ ಎಂದು ಅಭಿಮಾನಿಗಳು ಸರ್ಕಾರದ ಮುಂದೆ ಮನವಿ ಮಾಡಿದ್ದಾರೆ. ಇದರ ಜೊತೆಗೆ ಇನ್ನು ಸಾಕಷ್ಟು ಬೇಡಿಕೆಗಳನ್ನು ಸಿ.ಎಂ ಮಂದೆ ಇಟ್ಟಿದ್ದಾರೆ.

  ಇನ್ನು ಮಾಗಡಿ ರಸ್ತೆಯ ಮೆಟ್ರೋ ನಿಲ್ದಾಣಕ್ಕೆ ಡಾ.ರಾಜ್ ಕುಮಾರ್ ಹೆಸರು ನಾಮಕರಣ ಮಾಡುವಂತೆ ಅಭಿಮಾನಿಗಳು ಮನವಿ ಮಾಡಿದ್ದಾರೆ. ಜೊತೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೆಸರನ್ನು ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು ಮಾಡುವಂತೆ ಅಭಿಮಾನಿಗಳು ಸಿಎಂ ಬಳಿ ಕೇಳಿಕೊಂಡಿದ್ದಾರೆ.

  ಬೇಡರ ಕಣ್ಣಪ್ಪ ಚಿತ್ರದಿಂದ ಪ್ರಾರಂಭವಾದ ರಾಜ್ ಕುಮಾರ್ ಅವರ ಸಿನಿಮಾ ಜರ್ನಿ 200ರ ಗಡಿ ದಾಟಿ ಯಶಸ್ವಿಯಾಗಿ ಮುಂದುವರೆದಿತ್ತು. ಶಬ್ದವೇಧಿ ಡಾ.ರಾಜ್ ಕುಮಾರ್ ಅಭಿನಯದ ಕೊನೆಯ ಸಿನಿಮಾ. 2006ರಲ್ಲಿ ರಾಜ್ ಕುಮಾರ್ ಎನ್ನುವ ದೊಡ್ಡ ಶಕ್ತಿ ಚಿತ್ರರಂಗ, ಅಪಾರ ಸಂಖ್ಯೆ ಅಭಿಮಾನಿಗಳನ್ನು ಬಿಟ್ಟು ಬಾರದ ಲೋಕಕ್ಕೆ ಪಯಣ ಬೆಳೆಸಿತ್ತು. ರಾಜ್ ಕುಮಾರ್ ಕಳೆದುಕೊಂಡು 14 ವರ್ಷಗಳು ಕಳೆದರು ಅವರ ನೆನಪು ಇನ್ನು ಹಸಿರಾಗೆ ಇದೆ. ಸಿನಿಮಾಗಳ ಮೂಲಕ ಡಾ.ರಾಜ್ ಇನ್ನು ಜೀವಂತವಾಗಿದ್ದಾರೆ.

  English summary
  Kannada Actor Dr.Rajkumar fans are demanding the government to Bharat Ratna Award for Dr. Rajkumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X