»   » ಡಾ.ರಾಜ್ 'ಅಪರೂಪದ ಪ್ರತಿಮೆಗಳ ಹಿಂದಿನ ಅದ್ಭುತ ಶಿಲ್ಪಿ' ಈತ..

ಡಾ.ರಾಜ್ 'ಅಪರೂಪದ ಪ್ರತಿಮೆಗಳ ಹಿಂದಿನ ಅದ್ಭುತ ಶಿಲ್ಪಿ' ಈತ..

Posted By: Naveen
Subscribe to Filmibeat Kannada

ಏಪ್ರಿಲ್ ತಿಂಗಳು ಬಂತು ಅಂದ್ರೆ ಡಾ.ರಾಜ್ ಕುಮಾರ್ ಅಭಿಮಾನಿಗಳಿಗೆ ಅಕ್ಷರಶಃ ಹಬ್ಬ. ಇಂದು (ಎಪ್ರಿಲ್ 24) ಅಣ್ಣಾವ್ರ 89ನೇ ಜನ್ಮದಿನೋತ್ಸವ.

ಡಾ.ರಾಜ್ ಹುಟ್ಟುಹಬ್ಬವನ್ನ ಇಂದು ಅಣ್ಣಾವ್ರ ಕುಟುಂಬ ಹಾಗೂ ಅಭಿಮಾನಿಗಳು ಅದ್ಧೂರಿಯಾಗಿ, ಅಷ್ಟೇ ಅರ್ಥಪೂರ್ಣವಾಗಿ ಆಚರಣೆ ಮಾಡುತ್ತಿದ್ದಾರೆ. ಇದೇ ಸುಸಂದರ್ಭದಲ್ಲಿ ಡಾ.ರಾಜ್ ಪ್ರತಿಮೆಗಳ ಬಗ್ಗೆ ಒಂದು ವಿಶೇಷವಾದ ವಿಷಯವನ್ನ ನಿಮಗೆ ಹೇಳ್ಬೇಕು ಅನ್ನೋದು ನಮ್ಮ ಆಸೆ.[ಅಣ್ಣಾವ್ರು ನನ್ನ ಪಾದ ಮುಟ್ಟಿದ ಆ ಕ್ಷಣ ನಾ ಮರೆಯುಲಾರೆ]

ಬೆಂಗಳೂರಿನಲ್ಲಿ ನಾವು ಯಾವುದೇ ಏರಿಯಾಗೆ ಹೋದರೂ, ಅಲ್ಲಿ ಡಾ.ರಾಜ್ ಕುಮಾರ್ ಅವರ ಪ್ರತಿಮೆ ನಿಮ್ಮ ಕಣ್ಣಿಗೆ ಬಿದ್ದಿರುತ್ತೆ. ಇನ್ನೂ ಕರ್ನಾಟಕದಲ್ಲಿ ಡಾ.ರಾಜ್ ರವರ ಪ್ರತಿಮೆಗಳು ಅದೆಷ್ಟಿವೆಯೋ, ಲೆಕ್ಕವಿಲ್ಲ. ಅಂತಹ ಪ್ರತಿಮೆಗಳ ಹಿಂದಿನ ಶಿಲ್ಪಿ ಶಿವಕುಮಾರ್ ಅನ್ನೋದು ಮಾತ್ರ ಅನೇಕರಿಗೆ ಗೊತ್ತಿಲ್ಲ.

ಬೆಂಗಳೂರಿನಲ್ಲಿರುವ ಡಾ.ರಾಜ್ ಕುಮಾರ್ ಅವರ ಬಹುಪಾಲು ಪ್ರತಿಮೆಗಳನ್ನ ಮಾಡಿರೋದು ಶಿವಕುಮಾರ್ ಅವರೇ.! ರಾಜ್ ಅವ್ರ ಅದೆಷ್ಟೊ ಪಾತ್ರಗಳು ಪ್ರತಿಮೆಯ ರೂಪದಲ್ಲಿ ಇಂದಿಗೂ ಜೀವಂತವಾಗಿದೆ ಅಂದ್ರೆ ಅದರ ಪಾಲು ಶಿವಕುಮಾರ್ ಅವರಿಗೆ ಸೇರಬೇಕು. ಅಂದಹಾಗೆ, ಇವರು ಮಾಡಿರುವ ಪ್ರತಿಮೆಗಳು ಯಾವುವು..? ಅವು ನೀಡುವ ಸಂದೇಶ ಏನು..? ಈ ಬಗ್ಗೆ ತಿಳಿದುಕೊಳ್ಳಬೇಕು ಅಂದ್ರೆ ಮುಂದೆ ಓದಿ.

ಶಿಲ್ಪಿ ಶಿವಕುಮಾರ್ ಬಗ್ಗೆ

ಚಿಕ್ಕ ವಯಸ್ಸಿನಿಂದ ಡಾ.ರಾಜ್ ಕುಮಾರ್ ಅವರ ಸಿನಿಮಾಗಳನ್ನ ನೋಡುತ್ತಾ ಬೆಳೆದ ಶಿವಕುಮಾರ್ ಗೆ ಅಣ್ಣಾವ್ರರಂದ್ರೆ ಪಂಚಪ್ರಾಣ. ಕಳೆದ 11 ವರ್ಷಗಳಿಂದ ಪ್ರತಿಮೆ ಮಾಡುವ ಕಾಯಕದಲ್ಲಿ ತೊಡಗಿರುವ ಶಿವಕುಮಾರ್ 110 ಹೆಚ್ಚು ಪ್ರತಿಮೆಗಳನ್ನ ನಿರ್ಮಿಸಿದ್ದಾರೆ. ಡಾ.ರಾಜ್ ಕುಮಾರ್ ಪ್ರತಿಮೆಗಳನ್ನ ಶಿವಕುಮಾರ್ ಬೇರೆಲ್ಲ ಶಿಲ್ಪಿಗಳಿಗಿಂತ ಅದ್ಭುತವಾಗಿ ಮಾಡ್ತಾರೆ ಅನ್ನೋದು ಅನೇಕರ ಮಾತು.[ಜನರಿಂದ ಮನ್ನಣೆ ಪಡೆದ ಡಾ.ರಾಜ್ ಜನರಿಗೆ ಕೊಟ್ಟಿದ್ದೇನು?]

'ರಾಘವೇಂದ್ರ ಸ್ವಾಮಿ' ಪ್ರತಿಮೆ

ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳು ಅಂದ್ರೆ ಡಾ.ರಾಜ್ ಕುಮಾರ್ ಗೆ ಎಲ್ಲಿಲ್ಲದ ಭಕ್ತಿ. ರಾಘವೇಂದ್ರ ಸ್ವಾಮಿ ರೂಪದ ಡಾ.ರಾಜ್ ಪ್ರತಿಮೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿದೆ. 2008ರಲ್ಲಿ ನಿರ್ಮಾಣವಾದ ಈ ಪ್ರತಿಮೆ 4 ಅಡಿ, 150 ತೂಕದ ಪಂಚಲೋಹದಿಂದ ಕೂಡಿದೆ. ಈ ಪ್ರತಿಮೆಗೆ ಪ್ರತಿ ಗುರುವಾರ ಪೂಜೆ ನಡೆಯುತ್ತದೆ.[ನಾವು ನೀವು ಅರಿಯದ ರಾಜ್ ಅಪರೂಪದ ಸಂಗತಿಗಳು]

'ಮಯೂರ ವರ್ಮ' ಪ್ರತಿಮೆ

ಡಾ.ರಾಜ್ ಮೇಲಿನ ಅಭಿಮಾನವೇ ಹಾಗೆ. ಅದು ಎನನ್ನಾದ್ರೂ ಸಾಧಿಸುವ ಪ್ರೇರಣೆ ನೀಡುತ್ತದೆ. ಅದಕ್ಕೆ ಉತ್ತಮ ಉದಾಹರಣೆ ಅಂದ್ರೆ ಬೆಂಗಳೂರಿನ ಕುರುಬರಹಳ್ಳಿಯಲ್ಲಿರುವ 'ಮಯೂರ ವರ್ಮ' ಪ್ರತಿಮೆ. 1 ಟನ್ ತೂಕವಿರುವ ಈ ಪ್ರತಿಮೆಯಲ್ಲಿ ಅಣ್ಣಾವ್ರು ರಾಜ ಮಯೂರ ವರ್ಮ ರೂಪದಲ್ಲಿದ್ದಾರೆ. ಹಂಪಿ ರಥದ ಮೇಲೆ ಈ ಪ್ರತಿಮೆ ನಿಂತಿರುವುದು ವಿಶೇಷ. ಶಿಲ್ಪಿ ಶಿವಕುಮಾರ್ ಅವರ 4 ವರ್ಷಗಳ ಸತತ ಶ್ರಮದ ಫಲ ಇದಾಗಿದೆ. 1 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ಪ್ರತಿಮೆಯನ್ನ ಮೀರಿಸುವ ಪ್ರತಿಮೆ ಬೆಂಗಳೂರಿನಲ್ಲಿಯೇ ಇಲ್ಲ.[ಡಾ.ರಾಜ್ ಅವರನ್ನು ದೇವರು ಅಂದ ಆ ನಟ ಯಾರು?]

'ಕವಿರತ್ನ ಕಾಳಿದಾಸ' ಪ್ರತಿಮೆ

ಕವಿರತ್ನ ಕಾಳಿದಾಸ ರೂಪದ ಡಾ.ರಾಜ್ ಪ್ರತಿಮೆ ಇರುವುದು ಬೆಂಗಳೂರಿನ ಬಳೇಪೇಟೆಯಲ್ಲಿ. ಈ ಪ್ರತಿಮೆ 2010ರಲ್ಲಿ ನಿರ್ಮಾಣವಾಗಿದ್ದು, ಮುನಿಯಪ್ಪ ಎಂಬ ಅಣ್ಣವ್ರ ಅಪ್ಪಟ್ಟ ಅಭಿಮಾನಿ ಇದನ್ನ ಮಾಡಿಸಿದ್ದಾರೆ. ಪ್ರತಿ ವರ್ಷದ ಡಾ.ರಾಜ್ ಹುಟ್ಟುಹಬ್ಬವನ್ನ ಇಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ.[ಡಾ.ರಾಜ್ ಡಾಕ್ಟರೇಟ್ ಪಡೆದ ಅಪರೂಪದ ಕ್ಷಣ ನೋಡಿ!]

ಸಂದೇಶ ಸಾರುವ ಪ್ರತಿಮೆಗಳು

ಡಾ.ರಾಜ್ ಕುಮಾರ್ ಅವರ ಈ ರೀತಿಯ ಪ್ರತಿಮೆಗಳು ಕೇವಲ ಮೂರ್ತಿಗಳಾಗದೆ, ಒಂದೊಂದು ಪ್ರತಿಮೆಗಳು ಒಂದೊಂದು ಸಂದೇಶ ಸಾರುತ್ತದೆ. 'ಕಸ್ತೂರಿ ನಿವಾಸ' ಪ್ರತಿಮೆ ತ್ಯಾಗದ ಸಂಕೇತವಾಗಿದೆ.[ರಾಜ್ ಅಭಿನಯದ 30 ಚಿತ್ರಗಳು, ಹುಟ್ಟುಹಬ್ಬ ವಿಶೇಷ]

'ಸಾರ್ಥಕತೆ' ಇದೆ.

"ಡಾ.ರಾಜ್ ಕುಮಾರ್ ಅವರ ಬಹು ದೊಡ್ಡ ಅಭಿಮಾನಿ ನಾನು. ಅವ್ರ ಮೂರ್ತಿಗಳನ್ನ ಮಾಡುವುದರಲ್ಲಿ ಸಾರ್ಥಕತೆ ಕಾಣುತ್ತಿದ್ದೇನೆ. ಬೇರೆ ಯಾವುದೇ ಮೂರ್ತಿ ಮಾಡುವುದಕ್ಕಿಂತ ಹೆಚ್ಚು ಖುಷಿಯನ್ನ ರಾಜ್ ಪ್ರತಿಮೆ ನೀಡುತ್ತೆ. ಈ ಕೆಲಸದಲ್ಲಿ ನನಗೆ ತೃಪ್ತಿ ಜಾಸ್ತಿ ಇದೆ" - ಶಿಲ್ಪಿ ಶಿವಕುಮಾರ್ ['ಗೋಕಾಕ್ ಚಳವಳಿ' ವೇಳೆ ಕನ್ನಡಿಗರಿಗಾಗಿ ಪತ್ರ ಬರೆದಿದ್ದ ಡಾ.ರಾಜ್]

English summary
Dr.Rajkumar 89th Birthday special: Meet Sculptor Shivakumar, who is the creator of 110 statues of Dr.Rajkumar in Karnataka.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada