»   » ನಟ ಸಾರ್ವಭೌಮ ರಾಜ್ ಹುಟ್ಟುಹಬ್ಬ, ಎಲ್ಲೆಲ್ಲಿ ಏನೇನು?

ನಟ ಸಾರ್ವಭೌಮ ರಾಜ್ ಹುಟ್ಟುಹಬ್ಬ, ಎಲ್ಲೆಲ್ಲಿ ಏನೇನು?

Posted By:
Subscribe to Filmibeat Kannada

ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ 87ನೇ ಹುಟ್ಟುಹಬ್ಬವನ್ನು ನಾಡಿನೆಲ್ಲೆಡೆ ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅಣ್ಣಾವ್ರ ಹುಟ್ಟುಹಬ್ಬ ಎಂದರೆ ನಾಡಿಗೆ ಹಬ್ಬವಿದ್ದಂತೆ. ಇದರ ಜೊತೆಗೆ ರಕ್ತದಾನ, ನೇತ್ರದಾನ, ಅಂಗಾಂಗ ದಾನದಂತಹ ಮಹತ್ವದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಡಾ.ರಾಜ್ ಕುಮಾರ್ ಜನ್ಮದಿನಾಚರಣೆ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ನಟ ಸಾರ್ವಭೌಮ ಡಾ. ರಾಜ್‌ಕುಮಾರ್ ಅವರ 87ನೇ ಜನ್ಮ ದಿನಾಚರಣೆ ಪ್ರಯುಕ್ತ ಏಪ್ರಿಲ್ 24 ರಂದು ಸಂಜೆ 6.15 ಗಂಟೆಗೆ ನಗರದ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸಂಪೂರ್ಣ ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ.

Dr Rajkumar birthday events in and around Bengaluru

ಡಾ.ರಾಜ್ ರಥಯಾತ್ರೆ: ಅಣ್ಣಾವ್ರ ಅಭಿಮಾನಿ ಬಳಗ ಸೇವಾ ಸಂಸ್ಥೆ ಕುಂಬಳಗೋಡಿನ ಪುನೀತ್ ಫಾರಂನಲ್ಲಿರುವ ರಾಜ್ ಅವರ ತಾಯಿಯ ಸಮಾಧಿ ಬಳಿಯಿಂದ ಡಾ.ರಾಜ್ ರಥಯಾತ್ರೆ ಬೆಳಗ್ಗೆ 10ಕ್ಕೆ ಆರಂಭ. ಬಳಿಕ ರಾಜ್ ನೆನಪಿನಲ್ಲಿ ಸಸಿ ನೆಡುವ ಕಾರ್ಯಕ್ರಮ. ಸಾಹಿತಿಗಳಾದ ಕೆ.ಎಸ್.ನಿಸಾರ್ ಅಹಮದ್, ತೋಟಗಾರಿಕೆ ಇಲಾಖೆಯ ನಿರ್ದೇಶಕ ಎಸ್.ಪಿ. ಷಡಕ್ಷರಿ ಸ್ವಾಮಿ, ನರೇಂದ್ರ ಬಾಬು, ಕರ್ನಾತಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ ನಾರಾಯಣ ಗೌಡ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸ್ಥಳ: ರಾಜ್ ಕುಮಾರ್ ಪುಣ್ಯಭೂಮಿ. [ಡಾ.ರಾಜ್ ಹುಟ್ಟುಹಬ್ಬ ; ಎಲ್ಲೆಲ್ಲಿ ಏನೇನು ವಿಶೇಷ..?]

ಡಾ.ರಾಜ್ ಕುಮಾರ್ ಸಾಂಸ್ಕೃತಿಕ ಕಾರ್ಯಕ್ರಮ: ಇದೇ 24 ರಂದು ಸಂಜೆ 6 ಗಂಟೆಗೆ ಮಲ್ಲೇಶ್ವರಂ ಸೇವಾಸದನದಲ್ಲಿ 'ಹೌಸ್ ಫುಲ್' ಹೆಸರಿನ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. 60-70 ದಶಕದಲ್ಲಿ ಡಾ.ರಾಜ್ ಅಭಿನಯಿಸಿದ ಅವಿಸ್ಮರಣೀಯ ಹಾಡುಗಳಿಗೆ ಹಾಗೂ ಹಳೆಯ ಕನ್ನಡ ಚಿತ್ರಗೀತೆಗಳಿಗೆ ಹೆಸರಾಂತ ನೃತ್ಯ ಕಲಾವಿದರಿಂದ ಭರತನಾಟ್ಯ, ಕೂಚುಪುಡಿ, ಕಥಕ್ ಶೈಲಿಯ ನೃತ್ಯ ಪ್ರದರ್ಶನ ಏರ್ಪಡಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ

Dr Rajkumar birthday events in and around Bengaluru

ಅಣ್ಣಾವ್ರ ಹುಟ್ಟುಹಬ್ಬ ವಿಶೇಷ ರಸಮಂಜರಿ: ಕಳೆದ 18 ವರ್ಷಗಳಿಂದ ಸಮರ್ಥನಂ ಸಂಸ್ಥೆ ಅಂಧರಿಗೆ, ದೈಹಿಕವಾಗಿ ಅಂಗವೈಕಲ್ಯ ಇರುವವರಿಗೆ ಆಶ್ರಯ ನೀಡುತ್ತಿದೆ. ಈ ಬಾರಿ ರಾಜ್ ಹುಟ್ಟುಹಬ್ಬದ ನಿಮಿತ್ತ ನಿಧಿ ಸಂಗ್ರಹಿಸಲು 'ಡಾ.ರಾಜ್ ಕುಮಾರ್ ರಸಮಂಜರಿ' ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸಂಗೀತ ಮಾಂತ್ರಿಕ ಇಳಯರಾಜಾ, ಡಾ. ಕೆಜೆ ಯೇಸುದಾಸ್, ವಾಣಿ ಜಯರಾಮ್, ಎಸ್ ಜಾನಕಿ, ಮಂಜುಳಾ ಗುರುರಾಜ್ ಸಂಗೀತ ಸಂಜೆಗೆ ಮೆರುಗು ನೀಡಲಿದ್ದಾರೆ. ಅಣ್ಣಾವ್ರ ಹಾಡುಗಳನ್ನು ಹಾಡಿ ಅಭಿಮಾನಿ ದೇವರುಗಳನ್ನು ರಂಜಿಸಲಿದ್ದಾರೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ

ಡಾ.ರಾಜ್ ಹುಟ್ಟುಹಬ್ಬ ಆಚರಣೆ: ಕೆಂಪೇಗೌಡ ನಗರದ ನಾಗರೀಕರ ವೇದಿಕೆ ರಾಜ್ ಹುಟ್ಟುಹಬ್ಬವನ್ನು ಆಚರಿಸುತ್ತಿದೆ. ಶಾಸಕ ಆರ್ ವಿ ದೇವರಾಜ್, ಎನ್ ವಿ ನರಸಿಂಹಯ್ಯ, ಕೆ.ಎಸ್ ನಾಗರಾಜ್ ಮುಖ್ಯ ಅತಿಥಿಗಳು. ಸ್ಥಳ: ಕೆಂಪೇಗೌಡ ನಗರ, ಕೇಶವಶಿಲ್ಪ ವೃತ್ತ. [ಡಾ. ರಾಜ್ ನಟಿಸಿದಂತಹ ಕೌಟುಂಬಿಕ ಚಿತ್ರಗಳು ಮರಳಿ ಬರಬಹುದೇ?]

Dr Rajkumar birthday events in and around Bengaluru

ಡಾ.ರಾಜ್ ಕುರಿತ ವಿಚಾರ ಸಂಕಿರಣ: ಕಲಬುರಗಿಯಲ್ಲಿನ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ವರನಟ ಡಾ.ರಾಜ್ ಕುಮಾರ್ ಕುರಿತ ಎರಡು ದಿನಗಳ ವಿಚಾರ ಸಂಕಿರಣವನ್ನು ಇದೇ ಮೊದಲ ಬಾರಿಗೆ ಹಮ್ಮಿಕೊಳ್ಳಲಾಗಿದೆ. ಈ ವಿಚಾರ ಸಂಕಿರಣವನ್ನು ವಿವಿಯ ಇಂಗ್ಲಿಷ್ ವಿಭಾಗವು ರಂಗಾಯಣದ ಸಹಯೋಗದೊಂದಿಗೆ ಆಯೋಜಿಸಿದೆ. ಇದೇ ಏಪ್ರಿಲ್ 24 ಹಾಗೂ 25ರಂದು "ಡಾ.ರಾಜ್ ಕುಮಾರ್: ಭಾರತೀಯ ರಂಗಭೂಮಿ ಮತ್ತು ಚಲನಚಿತ್ರ" ಎಂಬ ವಿಚಾರವಾಗಿ ಸಂಕಿರಣ ನಡೆಯಲಿದೆ. ಸಂಪೂರ್ಣ ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ

English summary
The cultural icon of Kannada Dr Raj Kumar's 87th Birthday celebrating in a unique and big way all over Karnataka. Bengaluru is also witness many events in different localities. Here are the list of Dr Raj birthday events.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada