twitter
    For Quick Alerts
    ALLOW NOTIFICATIONS  
    For Daily Alerts

    ಕಲಬುರಗಿಯಲ್ಲಿ 'ಡಾ.ರಾಜ್' ವಿಚಾರ ಮಂಟಪ

    By Rajendra
    |

    ಕಲಬುರಗಿಯಲ್ಲಿನ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ವರನಟ ಡಾ.ರಾಜ್ ಕುಮಾರ್ ಕುರಿತ ಎರಡು ದಿನಗಳ ವಿಚಾರ ಸಂಕಿರಣವನ್ನು ಇದೇ ಮೊದಲ ಬಾರಿಗೆ ಹಮ್ಮಿಕೊಳ್ಳಲಾಗಿದೆ.

    ಈ ವಿಚಾರ ಸಂಕಿರಣವನ್ನು ವಿವಿಯ ಇಂಗ್ಲಿಷ್ ವಿಭಾಗವು ರಂಗಾಯಣದ ಸಹಯೋಗದೊಂದಿಗೆ ಆಯೋಜಿಸಿದೆ. ಇದೇ ಏಪ್ರಿಲ್ 24 ಹಾಗೂ 25ರಂದು "ಡಾ.ರಾಜ್ ಕುಮಾರ್: ಭಾರತೀಯ ರಂಗಭೂಮಿ ಮತ್ತು ಚಲನಚಿತ್ರ" ಎಂಬ ವಿಚಾರವಾಗಿ ಸಂಕಿರಣ ನಡೆಯಲಿದೆ. [ಡಾ. ರಾಜ್ ನಟಿಸಿದಂತಹ ಕೌಟುಂಬಿಕ ಚಿತ್ರಗಳು ಮರಳಿ ಬರಬಹುದೇ?]

    ರಾಜ್ ಅವರು ನಾಡು ನುಡಿಗೆ ಸಲ್ಲಿಸಿದ ಕೊಡುಗೆ, ಕನ್ನಡದ ಪ್ರಜ್ಞೆಯನ್ನು ರೂಪಿಸಿದ ಬಗೆಗೆ ರಾಷ್ಟ್ರಮಟ್ಟದಲ್ಲಿ ಗಂಭೀರವಾಗಿ ಚರ್ಚಿಸುವುದು ಈ ವಿಚಾರ ಸಂಕಿರಣದ ಉದ್ದೇಶ.

    ಕೇಂದ್ರೀಯ ವಿವಿಯಲ್ಲಿ ಇದೇ ಮೊದಲ ಬಾರಿಗೆ ರಾಜ್ ಅವರ ಕಲಾ ಸಾಧನೆಯ ಬಗೆಗೆ ಎರಡು ದಿನಗಳ ವಿಚಾರ ಸಂಕಿರಣವನ್ನು ಆಯೋಜಿಸುತ್ತಿರುವುದು ಇದೇ ಮೊದಲು ಎನ್ನುತ್ತಾರೆ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಡಾ.ಬಸವರಾಜ್ ಡೋಣೂರ್.

    ಈ ವಿಚಾರ ಸಂಕಿರಣದಲಿ ಒಟ್ಟು 12 ಮಂದಿ ವಿದ್ವಾಂಸರು ರಾಜ್ ಕುಮಾರ್ ಅವರ ವ್ಯಕ್ತಿತ್ವ, ಅಭಿನಯ ಹಾಗೂ ಅವರ ಚಲನಚಿತ್ರಗಳ ಆಯಾಮಗಳ ಬಗ್ಗೆ ಮಾತನಾಡಲಿದ್ದಾರೆ. ಸರಿಸುಮಾರು 200 ಮಂದಿ ವಿಚಾರ ಸಂಕಿರಣದಲ್ಲಿ ಭಾಗವಹಿಸುತ್ತಿದ್ದಾರೆ.

    Two-day national seminar on Dr Raj in Kalaburagi

    ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅವರು ಜ್ಯೋತಿ ಬೆಳಗುವ ಮೂಲಕ ವಿಚಾರ ಸಂಕಿರಣಕ್ಕೆ ಚಾಲನೆ ನೀಡಲಿದ್ದಾರೆ. ಡಾ. ಮನು ಬಳಿಗಾರ ಹಾಗು ಪ್ರೊ.ಚಂದ್ರಶೇಖರ ಪಾಟೀಲ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

    ಕರ್ನಾಟಕ ಕೇಂದ್ರೀಯ ವಿವಿ ಕುಲಪತಿ ಪ್ರೊ. ಎಚ್.ಎಂ.ಮಹೇಶ್ವರಯ್ಯ ಅಧ್ಯಕ್ಷತೆ, ರಂಗಾಯಣ ನಿರ್ದೇಶಕ ಪ್ರೊ.ಆರ್.ಕೆ ಹುಡಗಿ, ಪ್ರೊ.ಶಿವಗಂಗಾ ರುಮ್ಮಾ, ಕುಲಸಚಿವ ಪ್ರೊ.ಎನ್.ನಾಗರಾಜು ಉಪಸ್ಥಿತಿಯಲ್ಲಿ ಸಂಕಿರಣ ನಡೆಯಲಿದೆ.

    "ಡಾ. ರಾಜ್ ಕುಮಾರ್ ಮತ್ತು ರಂಗಭೂಮಿ" ಗೋಷ್ಠಿಯಲ್ಲಿ ಗುಡಿಹಳ್ಳಿ ನಾಗರಾಜ್, ಡಾ.ಪ್ರಕಾಶ್ ಗರೂಡ ಹಾಗೂ ಎಚ್ ಎಸ್ ಗೋವಿಂದ ಗೌಡ ಅವರು ಕ್ರಮವಾಗಿ ಡಾ.ರಾಜ್ ಕುಮಾರ್ ಮತ್ತು ಕನ್ನಡ ವೃತ್ತಿ ರಂಗಭೂಮಿ, ಡಾ.ರಾಜ್ ಕುಮಾರ್ ಮತ್ತು ಕನ್ನಡ ರಂಗಸಂಗೀತ ಹಾಗೂ ಡಾ.ರಾಜ್ ಕುಮಾರ್ ಮತ್ತು ಕನ್ನಡ ರಂಗಗೀತೆಗಳು ಎಂಬ ವಿಷಯಗಳ ಬಗ್ಗೆ ಮಾತನಾಡಲಿದ್ದಾರೆ.

    ಡಾ.ರಾಜ್ ಕುಮಾರ್ ಮತ್ತು ಭಾರತೀಯ ಚಲನಚಿತ್ರ ಎಂಬ ಗೋಷ್ಠಿಯಲ್ಲಿ ಡಾ.ವಿ.ಬಿ. ತಾರಕೇಶ್ವರ್ ಮತ್ತು ಡಾ.ನಿಖಿಲಾ ಎಚ್ ಅವರು ಕ್ರಮವಾಗಿ Bringing bond to Kannada: Rajkumar as CID ಹಾಗೂ Dr. Rajkumar and the making of a Bhakti Public ಎಂಬ ವಿಷಯಗಳ ಕುರಿತು ಮಾತನಾದಲಿದ್ದಾರೆ.

    Dr. Rajkuamr and Cultural Identity ಎಂಬ ಗೋಷ್ಠಿಯಲ್ಲಿ ಪ್ರೊ. ರಾಜೇಂದ್ರ ಚೆನ್ನಿ, ಡಾ.ಬಸು ಬೆವಿನಗಿಡದ ಮತ್ತು ಮಹೇಂದ್ರ. ಎಂ ಅವರು ಕ್ರಮವಾಗಿ Dr. Rajkumar and Kannada Identity ಹಾಗೂ Dr. Rajkumar and Liguistic Movements, Dr.Rajkumar and Social change ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ.

    ಡಾ.ರಾಜ್ ಕುಮಾರ್ ಕನ್ನಡ ಭಾಷೆ ಮತ್ತು ಸಾಹಿತ್ಯ ಎಂಬ ಗೋಷ್ಠಿಯಲ್ಲಿ ಡಾ.ಬಸವರಾಜ ಕಲ್ಗುಡಿ, ಡಾ.ರಹಮತ್ ತರೀಕೆರೆ, ಡಾ.ರಾಜಶೇಖರ ಮಠಪತಿ ಮತ್ತು ಡಾ.ರಾಜಣ್ಣ ತಗ್ಗಿ ಕ್ರಮವಾಗಿ ಡಾ.ರಾಜ್ ಕುಮಾರ್ ಚಲನಚಿತ್ರಗಳಲ್ಲಿ ಮಹಿಳಾ ಸಂವೇದನೆ, ಡಾ.ರಾಜ್ ಕುಮಾರ್ ಮತ್ತು ಕನ್ನಡ ಪ್ರಜ್ಞೆ, ಡಾ.ರಾಜ್ ಕುಮಾರ್ ಮತ್ತು ಸಾಮಾಜಿಕ ಪರಿವರ್ತನೆ ಹಾಗೂ ಡಾ. ರಾಜ್ ಕುಮಾರ್ ಮತ್ತು ಗೋಕಾಕ್ ಚಳವಳಿ ಎಂಬ ವಿಷಯಗಳ ಬಗ್ಗೆ ಮಾತನಾಡಲಿದ್ದಾರೆ. (ಫಿಲ್ಮಿಬೀಟ್ ಕನ್ನಡ)

    English summary
    Two day national seminar on "Dr.Rajkumar: Indian Theatre and Cinema" will held on 24-25 April 2015. Venue: S.M Pandith Rangamandira Kalaburgi. Organized by Department of English Central University of karnataka.
    Friday, April 24, 2015, 12:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X