twitter
    For Quick Alerts
    ALLOW NOTIFICATIONS  
    For Daily Alerts

    ಅಪ್ಪಾಜಿ ಕುರಿತ ಅಪ್ಪು ಅಪರೂಪ ಕೃತಿ ಲೋಕಾರ್ಪಣೆ

    By Rajendra
    |

    ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬರೆದಿರುವ ಅಣ್ಣಾವ್ರ ಅಪರೂಪದ 'ಡಾ.ರಾಜ್‌ಕುಮಾರ್, ವ್ಯಕ್ತಿತ್ವದ ಹಿಂದಿನ ವ್ಯಕ್ತಿ' ಶನಿವಾರ (ಜೂ. 2) ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಯಿತು. ಸುದೀರ್ಘ ಸಮದಿಂದ ಈ ಪುಸ್ತಕಕ್ಕಾಗಿ ಪುನೀತ್ ಶ್ರಮಿಸಿದ್ದಾರೆ. ಈ ಪುಸ್ತಕದಲ್ಲಿ ಅಣ್ಣಾವ್ರ ಅಪರೂಪದ ಛಾಯಾಚಿತ್ರಗಳನ್ನು ಕಣ್ತುಂಬಿಕೊಳ್ಳಬಹುದು.

    ಒಟ್ಟು 300 ಪುಟಗಳ ಈ ಪುಸ್ತಕ ಬಿಡುಗಡೆ ಸಮಾರಂಭ ಯಶವಂತಪುರದ ತಾಜ್ ಹೋಟೆಲ್‌ನಲ್ಲಿ ಲೋಕಾರ್ಪಣೆಯಾಯಿತು. ರಾಜ್ ಕುಟುಂಬದ ಪ್ರತಿಯೊಬ್ಬ ಸದಸ್ಯರು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದದ್ದು ವಿಶೇಷ.

    ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿರುವ ಈ ಪುಸ್ತಕವನ್ನು ಹೊರತರಲು ಪುನೀತ್ ರಾಜ್ ಕುಮಾರ್ ಜೊತೆ ಪ್ರಕೃತಿ ಎನ್ ಬನವಾಸಿ ಅವರೂ ಕೈಜೋಡಿಸಿದ್ದಾರೆ. ಅಣ್ಣಾವ್ರ ಈ ಅಪರೂಪದ ಪುಸ್ತಕದ ಬೆಲೆ ರು.2, 500. ಬೆಲೆ ದುಬಾರಿ ಅನ್ನಿಸಿದರೂ ಅಣ್ಣಾವ್ರ ಅಭಿಮಾನಿಗಳಿಗೆ ಸಂಗ್ರಹಯೋಗ್ಯ ಕೃತಿಯಾಗಲಿದೆ.

    ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪನವರು, ಈ ಪುಸ್ತಕದಿಂದ ಬಂದಂತಹ ಆದಾಯವನ್ನು ಕನ್ನಡ ಶಾಲೆಗಳ ಅಭಿವೃದ್ಧಿಗೆ ಬಳಸಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದರು. ವೇದಿಕೆಯಲ್ಲಿ ಪಾರ್ವತಮ್ಮ ರಾಜ್ ಕುಮಾರ್ ಉಪಸ್ಥಿತರಿದ್ದರು.

    ಪಾರ್ವತಮ್ಮ ಪಬ್ಲಿಕೇಷನ್ ಚೊಚ್ಚಲ ಕೃತಿ ಇದಾಗಿದ್ದು ಡಾ.ರಾಜ್‌ಕುಮಾರ್ ಅವರ ಸಂಪೂರ್ಣ ವ್ಯಕ್ತಿತ್ವವನ್ನು ಈ ಪುಸ್ತಕದಲ್ಲಿ ಬಿಂಬಿಸುವ ಪ್ರಯತ್ನವನ್ನು ಪುನೀತ್ ಮಾಡಿದ್ದಾರೆ. ಪುನೀತ್ ಹೊರತಂದಿರುವ ಈ ಪುಸ್ತಕದಲ್ಲಿ ರಾಜ್ ವ್ಯಕ್ತಿತ್ವದ ಹಲವು ಮಜಲುಗಳು ಅನಾವರಣಗೊಂಡಿವೆ.

    ತಮ್ಮ ಆಪ್ತ ಗೆಳೆಯರು, ಸಹಚರರು, ಒಡನಾಡಿಗಳು ಮತ್ತು ಬಂಧುಗಳೊಂದಿಗೆ ಡಾ.ರಾಜ್ ಹಂಚಿಕೊಂಡ ಅಪರೂಪದ ಕ್ಷಣಗಳು ಪುಸ್ತಕದಲ್ಲಿವೆ. ಕನ್ನಡಹಾಗೂ ಇಂಗ್ಲಿಷ್ ಭಾಷೆಯಲ್ಲಿ ಹೊರಬಂದಿರುವ ಈ ಪುಸ್ತಕ ರಾಜ್ ಅವರ ಕೆಲವು ಅಪರೂಪದ ಘಟನೆಗಳನ್ನು ದಾಖಲಿಸಿದೆ.

    ಡಾ.ರಾಜ್ ಬದುಕಿದ್ದಾಗಲೇ ಈ ಪುಸ್ತಕವನ್ನು ಹೊರತರುವ ಉದ್ದೇಶ ಪುನೀತ್ ಅವರಿಗಿತ್ತು. ಅವರು ತಮ್ಮ ಆತ್ಮೀಯರೊಂದಿಗೆ ಹಂಚಿಕೊಂಡ ಮಧುರ ಕ್ಷಣಗಳನ್ನು ತಮ್ಮ ಪುಸ್ತಕದಲ್ಲಿ ಓದಿ ಸಂತೋಷ ಪಡುತ್ತಾರೆ ಎನ್ನುವುದು ಅವರ ಬಯಕೆಯಾಗಿತ್ತು. ಆದರೆ ಆ ಕನಸು ಕನಸಾಗಿಯೇ ಉಳಿದಿತ್ತು.

    ಅಪ್ಪಾಜಿ ಅವರನ್ನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವುದೇ ಈ ಪುಸ್ತಕದ ಉದ್ದೇಶ. ಕನ್ನಡ ಚಿತ್ರರಂಗದಲ್ಲಿ ದಂತಕಥೆಯಾಗಿರುವ ಡಾ.ರಾಜ್‌ ಅವರನ್ನು ಶಾಶ್ವತವಾಗಿ ಜನಮಾನಸದಲ್ಲಿ ಉಳಿಸುವುದೇ ನನ್ನ ಪುಸ್ತಕ ಗುರಿ ಎಂದಿದ್ದಾರೆ ಪುನೀತ್.

    ಅತ್ಯಂತ ಅಪರೂಪದ ಸಾವಿರಾರು ಭಾವಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಡಾ.ರಾಜ್‌ರ ಮೇರು ಪ್ರತಿಭೆ, ವ್ಯಕ್ತಿತ್ವ, ಹಳೆ ನೆನಪು, ಅವರ ಸ್ವಭಾವ, ಆಪ್ತರು, ಜೀವನದಲ್ಲಿ ಎದುರಿಸಿದ ಕಷ್ಟ ನಷ್ಟಗಳು, ಸಂಗೀತ, ಯೋಗ...ಹೀಗೆ ಹತ್ತು ಹಲವು ಮುಖಗಳನ್ನು ಬಿಂಬಿಸಲಾಗಿದೆ.

    ಪುನೀತ್ , ರಾಘವೇಂದ್ರ ಹಾಗೂ ಶಿವರಾಜ್ ಕುಮಾರ್ ಕುಟುಂಬಿಕರು ಸಮಾರಂಭದಲ್ಲಿ ಭಾಗಿಯಾಗಿದ್ದರು. ಪುನೀತ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಅವರು ಅಣ್ಣಾವ್ರ ಭಾವಚಿತ್ರವಿರುವ ಟೀ-ಶರ್ಟ್‌ಗಳನ್ನು ತೊಟ್ಟು ಗಮನಸೆಳೆದರು. (ಒನ್‌ಇಂಡಿಯಾ ಕನ್ನಡ)

    English summary
    The most anticipated book about "Dr Rajkumar, The Person Behind The Personality” authored by his son Puneeth Rajkumar released on June 2 at the Taj Vivanta in Bangalore. The book captures some of the best moments in the life of Rajkumar, promises to be a visual treat for the fans.
    Sunday, June 3, 2012, 13:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X