For Quick Alerts
  ALLOW NOTIFICATIONS  
  For Daily Alerts

  'ನಿನ್ನ ಸನಿಹಕೆ' ಪ್ರೀಮಿಯರ್ ಶೋನಲ್ಲಿ ಅಣ್ಣಾವ್ರ ಇಡೀ ಕುಟುಂಬ ಭಾಗಿ

  |

  ಅಕ್ಟೋಬರ್ 1 ರಿಂದ ಕರ್ನಾಟಕದಲ್ಲಿ ಚಿತ್ರಮಂದಿರಗಳಿಗೆ 100% ಅನುಮತಿ ಸಿಕ್ಕಿದ ಬೆನ್ನಲ್ಲೆ ಸ್ಟಾರ್ ನಟರ ಚಿತ್ರಗಳು ರಿಲೀಸ್ ದಿನಾಂಕ ಘೋಷಿಸಿದೆ. ಕಿಚ್ಚ ಸುದೀಪ್ ನಟನೆಯ 'ಕೋಟಿಗೊಬ್ಬ-3' ಹಾಗೂ ದುನಿಯಾ ವಿಜಯ್ ನಿರ್ದೇಶಿಸಿ 'ಸಲಗ' ಚಿತ್ರಗಳಿಗೂ ಮುಂಚೆ ಧನ್ಯಾ ರಾಮ್ ಕುಮಾರ್ ನಟನೆಯ ಚೊಚ್ಚಲ ಸಿನಿಮಾ 'ನಿನ್ನ ಸನಿಹಕೆ' ಚಿತ್ರಮಂದಿರಕ್ಕೆ ಲಗ್ಗೆಯಿಡುತ್ತಿದೆ.

  ಧನ್ಯಾ ರಾಮ್ ಕುಮಾರ್ ಮತ್ತು ಸೂರಜ್ ಗೌಡ ನಟನೆಯ 'ನಿನ್ನ ಸನಿಹಕೆ' ಚಿತ್ರ ಅಕ್ಟೋಬರ್ 8 ರಂದು ಥಿಯೇಟರ್‌ಗೆ ಬರ್ತಿದೆ. ಶುಕ್ರವಾರ ಸಿನಿಮಾ ರಿಲೀಸ್ ಆಗುತ್ತಿರುವ ಹಿನ್ನೆಲೆ ಒಂದು ದಿನ ಮುಂಚೆ ಚಿತ್ರದ ಪ್ರೀಮಿಯರ್ ಪ್ರದರ್ಶನ ಆಯೋಜಿಸಲಾಗಿದೆ. ಈ ಶೋನಲ್ಲಿ ಅಣ್ಣಾವ್ರ ಇಡೀ ಕುಟುಂಬ ಪಾಲ್ಗೊಳ್ಳುತ್ತಿದೆ.

  ಥಿಯೇಟರ್‌ಗೆ ಸಿಕ್ತು 100%: 'ನಿನ್ನ ಸನಿಹಕೆ' ರಿಲೀಸ್ ದಿನಾಂಕ ಘೋಷಣೆಥಿಯೇಟರ್‌ಗೆ ಸಿಕ್ತು 100%: 'ನಿನ್ನ ಸನಿಹಕೆ' ರಿಲೀಸ್ ದಿನಾಂಕ ಘೋಷಣೆ

  ಅಕ್ಟೋಬರ್ 7 ರಂದು ಬೆಂಗಳೂರಿನ ಖ್ಯಾತ ಮಾಲ್‌ವೊಂದರಲ್ಲಿ 'ನಿನ್ನ ಸನಿಹಕೆ' ಚಿತ್ರದ ಪ್ರೀಮಿಯರ್ ಶೋ ನಡೆಯಲಿದೆ. ಈ ವಿಶೇಷ ಪ್ರದರ್ಶನದಲ್ಲಿ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ವಿನಯ್, ಯುವರಾಜ್ ಕುಮಾರ್, ಶ್ರೀಮುರಳಿ, ವಿಜಯ್ ರಾಘವೇಂದ್ರ ರಾಮ್ ಕುಮಾರ್, ಧಿರೇನ್ ರಾಮ್ ಕುಮಾರ್ ಸೇರಿದಂತೆ ಇಡೀ ಕುಟುಂಬ ಭಾಗಿಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

  ಕೊರೊನಾದಿಂದ ಸುಮಾರು ಎರಡು ವರ್ಷಗಳ ಕಾಲ ಇಡೀ ಚಿತ್ರಮಂದಿರ ಮುಚ್ಚಲ್ಪಟ್ಟಿದ್ದವು. ಈಗ ನಿಧಾನವಾಗಿ ಚಿತ್ರರಂಗ ಚೇತರಿಕೆ ಕಾಣುತ್ತಿದೆ. ಥಿಯೇಟರ್‌ಗಳು ಹೌಸ್‌ಫುಲ್ ಪ್ರದರ್ಶನ ಕಾಣಲಿದೆ. ಇದೀಗ, ವರ್ಷಗಳ‌ ನಂತರ ಒಂದೇ ಸ್ಕ್ರೀನ್ ನಲ್ಲಿ ಇಡೀ ರಾಜ್ ಕುಟುಂಬ ಚಿತ್ರ ವೀಕ್ಷಿಸುತ್ತಿದ್ದಾರೆ.

  ಡಾ ರಾಜ್ ಕುಮಾರ್ ಮೊಮ್ಮಗಳು ಧನ್ಯಾ ರಾಮ್ ಕುಮಾರ್ ಮೊದಲ ಸಿನಿಮಾ ಎನ್ನುವ ಕಾರಣಕ್ಕೆ ಅಣ್ಣಾವ್ರ ಕುಟುಂಬಕ್ಕೆ ಇದು ಬಹಳ ವಿಶೇಷವಾಗಿದ್ದು, ಧನ್ಯಾಗೆ ಶಿವಣ್ಣ ಸಹೋದರರು ಹಾಗೂ ಇತರೆ ಕುಟುಂಬದ ಸದಸ್ಯರು ಸಂಪೂರ್ಣವಾಗಿ ಬೆಂಬಲ ಕೊಡುತ್ತಿದ್ದಾರೆ.

  ರಿಲೀಸ್‌ಗೆ ಮುಂಚೆ 'ಕೋಟಿಗೊಬ್ಬ 3' ಹಣ ಗಳಿಸಿದೆ ಎಂಬುದು ಸುಳ್ಳು, ನಾನು ಸಾಲದಲ್ಲಿದ್ದೀನಿ: ನಿರ್ಮಾಪಕರಿಲೀಸ್‌ಗೆ ಮುಂಚೆ 'ಕೋಟಿಗೊಬ್ಬ 3' ಹಣ ಗಳಿಸಿದೆ ಎಂಬುದು ಸುಳ್ಳು, ನಾನು ಸಾಲದಲ್ಲಿದ್ದೀನಿ: ನಿರ್ಮಾಪಕ

  ಈ ಹಿಂದೆ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಆಗಸ್ಟ್ 20 ರಂದು ನಿನ್ನ ಸನಿಹಕೆ ಚಿತ್ರ ಚಿತ್ರಮಂದಿರಕ್ಕೆ ಬರಬೇಕಿತ್ತು. ಆದರೆ, ಆಗಿನ ಸಂದರ್ಭದಲ್ಲಿ 100% ಅವಕಾಶ ಸಿಕ್ಕಿರಲಿಲ್ಲ. ಹಾಗಾಗಿ, ಕೊನೆ ಘಳಿಗೆಯಲ್ಲಿ ರಿಲೀಸ್ ದಿನಾಂಕ ಪೋಸ್ಟ್ ಪೋನ್ ಮಾಡಿತ್ತು. ಈಗ 100 ಪರ್ಸೆಂಟ್ ಅವಕಾಶವಿದ್ದು, ಅಕ್ಟೋಬರ್ 8ಕ್ಕೆ ಸಿನಿಮಾ ಬರ್ತಿದೆ.

  Dr Rajkumar Family Members attends Ninna Sanihake Movie Premiere Show

  ಧನ್ಯಾ ನಾಯಕಿಯಾಗಿ ನಟಿಸಿರುವ 'ನಿನ್ನ ಸನಿಹಕೆ' ಚಿತ್ರದಲ್ಲಿ ಸೂರಜ್ ಗೌಡ ನಾಯಕನಾಗಿ ನಟಿಸಿ ಸ್ವತಃ ಅವರೇ ನಿರ್ದೇಶಿಸಿದ್ದಾರೆ. ವೈಟ್ ಅಂಡ್ ಗ್ರೇ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಅಕ್ಷಯ್ ರಾಜಶೇಖರ್, ರಂಗನಾಥ್ ಕುಡ್ಲಿ ನಿರ್ಮಿಸಿದ್ದಾರೆ. ರಘು ದೀಕ್ಷಿತ್ ಸಂಗೀತ ಒದಗಿಸಿದ್ದಾರೆ.

  ಕೋಟಿಗೊಬ್ಬ 3 ಪ್ರಿ-ರಿಲೀಸ್ ಕಾರ್ಯಕ್ರಮ

  ಕಿಚ್ಚ ಸುದೀಪ್ ನಟನೆಯ 'ಕೋಟಿಗೊಬ್ಬ-3' ಸಿನಿಮಾ ಇದೇ ತಿಂಗಳು 14 ರಂದು ತೆರೆಗೆ ಬರ್ತಿದೆ. ಸೂರಪ್ಪ ಬಾಬು ನಿರ್ಮಾಣದ ಈ ಚಿತ್ರ ಬಹಳ ದೊಡ್ಡ ಮಟ್ಟದಲ್ಲಿ ಕುತೂಹಲ ಮೂಡಿಸಿದೆ. ಅಕ್ಟೋಬರ್ 14 ರಂದು ಸಿನಿಮಾ ರಿಲೀಸ್ ಹಿನ್ನೆಲೆ ಅಕ್ಟೋಬರ್ 10 ರಂದು ಪ್ರಿ-ರಿಲೀಸ್ ಕಾರ್ಯಕ್ರಮ ಆಯೋಜಿಸಲಾಗಿದೆ.

  ಕೋಟಿಗೊಬ್ಬ 3 ಚಿತ್ರದಲ್ಲಿ ಮಲಯಾಳಂ ನಟಿ ಮಡೋನ್ನಾ ಸಬಾಸ್ಟಿಯನ್ ಸುದೀಪ್‌ಗೆ ನಾಯಕಿಯಾಗಿ ನಟಿಸಿದ್ದಾರೆ. ರವಿಶಂಕರ್, ಅಫ್ತಾಬ್ ಶಿವ ದಾಸನಿ, ಶ್ರದ್ಧಾ ದಾಸ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅದೇ ದಿನ ದುನಿಯಾ ವಿಜಯ್ ನಟಿಸಿ, ಚೊಚ್ಚಲ ಬಾರಿಗೆ ನಿರ್ದೇಶಿಸಿರುವ ಸಲಗ ಚಿತ್ರ ಬಿಡುಗಡೆಯಾಗುತ್ತಿದೆ. ಕೆಪಿ ಶ್ರೀಕಾಂತ್ ಈ ಚಿತ್ರ ನಿರ್ಮಿಸಿದ್ದು, ಡಾಲಿ ಧನಂಜಯ್, ಸಂಜನಾ ಪ್ರಕಾಶ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

  English summary
  Dr Rajkumar Family Members attends Dhanya Ramkumar's Ninna Sanihake Movie Premiere Show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X