ರಾಜ್ ಹುಟ್ಟುಹಬ್ಬಕ್ಕೆ ಮೊಮ್ಮಗನ ಗ್ರ್ಯಾಂಡ್ ಎಂಟ್ರಿ
ಕನ್ನಡ ಬೆಳ್ಳಿಪರದೆಗೆ ಮತ್ತೊಬ್ಬ ನವ ನಾಯಕ ನಟನ ಎಂಟ್ರಿಯಾಗುತ್ತಿದೆ. ಅವರು ಬೇರಾರು ಅಲ್ಲ ವರನಟ ಡಾ.ರಾಜ್ ಕುಮಾರ್ ಅವರ ಮೊಮ್ಮಗ ವಿನಯ್ ರಾಜ್. ಇದೇ ಏಪ್ರಿಲ್ 24ರ ಅಣ್ಣಾವ್ರ ಹುಟ್ಟುಹಬ್ಬದಂದು ವಿನಯ್ ರಾಜ್ ಗ್ರ್ಯಾಂಡ್ ಎಂಟ್ರಿ.
ಡಾ.ರಾಜ್ ಕುಮಾರ್ ಅವರು ಅಭಿಮಾನಿ ದೇವರುಗಳನ್ನು ಅಗಲಿ ಇಂದಿಗೆ (ಏ.12) 7 ವರ್ಷಗಳು ಉರುಳಿ ಹೋಗಿವೆ. ಇಂದು ಕಂಠೀರವ ಸ್ಟುಡಿಯೋದಲ್ಲಿನ ಅವರ ಸಮಾಧಿಗೆ ಪಾರ್ವತಮ್ಮ ರಾಜ್ ಕುಮಾರ್, ಮಕ್ಕಳು, ಮೊಮ್ಮಕ್ಕಳು, ಬಂಧುಬಳಗ ಪೂಜೆ ಸಲ್ಲಿಸಿ ಪುಣ್ಯ ತಿಥಿ ಆಚರಿಸಿದರು.

ಇದೇ ಏಪ್ರಿಲ್ 24ರಂದು ವಿನಯ್ ರಾಜ್ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಕಳೆದ ವರ್ಷವೇ ವಿನಯ್ ರಾಜ್ ಚಿತ್ರ ಆರಂಭವಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ.
ಏಪ್ರಿಲ್ 24, 2013ರಂದೇ ವಿನಯ್ ಹೊಸ ಚಿತ್ರ ಘೋಷಣೆಯಾಗಲಿದೆ. ಅಭಿನಯಕ್ಕೆ ಅಡಿಯಿಡುತ್ತಿರುವ ವಿನಯ್ ರಾಜ್ ಫೈಟಿಂಗ್, ಡ್ಯಾನ್ಸಿಂಗ್ ಎಲ್ಲವನ್ನೂ ಕರಗತ ಮಾಡಿಕೊಂಡಿದ್ದಾರೆ.
ನಾಯಕ ನಟನಿಗೆ ಬೇಕಾದ ಮೈಕಟ್ಟು, ಎತ್ತರ ಅವರಿಗಿದೆ. ಡಾ.ರಾಜ್ ಅಭಿಮಾನಿಗಳಿಗಳಿಗೂ ವಿನಯ್ ಎಂಟ್ರಿ ಬಗ್ಗೆ ಕುತೂಹಲ ಇದ್ದೇ ಇದೆ. ಮೇಲಿಂದ ತಾತ ಮತ್ತುರಾಜ್‌ರ ಆಶೀರ್ವಾದ ಧಾರಾಳವಾಗಿದೆ. ಅಭಿಮಾನಿ ದೇವರುಗಳು ಕಾಯುತ್ತಿದ್ದಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











