»   » ರಾಜ್ ಕುಟುಂಬದ ಮೂರನೇ ತಲೆಮಾರಿನ ಚಿತ್ರ 'ವಿನು'

ರಾಜ್ ಕುಟುಂಬದ ಮೂರನೇ ತಲೆಮಾರಿನ ಚಿತ್ರ 'ವಿನು'

By: ಜೀವನರಸಿಕ
Subscribe to Filmibeat Kannada

ಪ್ರತೀ ವರ್ಷ ನಟ ಸಾರ್ವಭೌಮ ರಾಜ್ ಹುಟ್ಟಿದ ಹಬ್ಬ ಬಂದಾಗ ರಾಜ್ ಕುಟುಂಬದ ಮೂರನೇ ತಲೆಮಾರಿನ ಕುಡಿ ರಾಘವೇಂದ್ರರಾಜ್ ಪುತ್ರ ವಿನಯ್ ರಾಜ್ ಯಾವಾಗ ಹೀರೋ ಆಗೋದು ಅನ್ನೋ ಪ್ರಶ್ನೆ ಏಳ್ತಿತ್ತು. ಆದ್ರೆ ಈ ಬಾರಿ ಡಾ.ರಾಜ್ ಹುಟ್ಟುಹಬ್ಬಕ್ಕೆ ಈ ಕುತೂಹಲಕ್ಕೆ ತೆರೆಬೀಳಲಿದೆ.

ಇದೇ ಏಪ್ರಿಲ್ 24ಕ್ಕೆ ವರನಟ ಡಾ. ರಾಜ್ ಹುಟ್ಟುಹಬ್ಬಕ್ಕೆ ವಿನಯ್ ರಾಜ್ ಹೊಸ ಸಿನಿಮಾದ ಮುಹೂರ್ತ ನಡೆಯಲಿದೆಯಂತೆ. ಸಿನಿಮಾದ ಹೆಸರು 'ವಿನು' ಅನ್ನೋ ಸುದ್ದಿ ಕೂಡ ಗಾಂಧಿನಗರದಲ್ಲಿ ಸದ್ದು ಮಾಡ್ತಿದೆ. ಇನ್ನು ರಾಘವೇಂದ್ರ ರಾಜ್ ಕುಮಾರ್ ಪುತ್ರ ಕೂಡ ಇತ್ತೀಚೆಗೆ ಸಾಕಷ್ಟು ಬೆವರು ಹರಿಸಿದಂತೆ ಕಾಣ್ತಿದೆ. [ಅಣ್ಣಾವ್ರ ಮೊಮ್ಮಗ ವಿನಯ್ ರಾಜ್]

Vinay Raj with father Raghavendra Raj

ಆರು ತಿಂಗಳ ಹಿಂದೆ ಇದ್ದ ಹಾಗೆ ವಿನಯ್ರಾಯ್ ರಾ ಇಲ್ಲ. ವಿನಯ್ ರಾಜ್ ಈಗ ಬಾಡಿ ಬಿಲ್ಡ್ ಮಾಡಿದ್ದಾರೆ. ಪಾತ್ರಕ್ಕಾಗಿ ಕೂಡ ರಿಹರ್ಸಲ್ ನಡೆಸ್ತಿದ್ದಾರಂತೆ. ಇನ್ನು ಸ್ವತಃ ರಾಘವೇಂದ್ರ ರಾಜ್ ಕುಮಾರ್, ಪಾರ್ವತಮ್ಮ, ಪುನೀತ್, ಶಿವರಾಜ್ ಕುಮಾರ್ ಅವರು ವಿನಯ್ ರಾಜ್ ಗೆ ಬಲ ತುಂಬ್ತಿದ್ದಾರೆ.

ವಿನಯ್ ರಾಜ್ ಅನ್ನೋ ಹೆಸ್ರನ್ನೇ ಶಾರ್ಟ್ ಮಾಡಿ ವಿನು ಅಂತ ಇಟ್ಟಿದ್ದಾರೆ. ಪಕ್ಕಾ ಯೂತ್ ಫುಲ್ ಸಿನಿಮಾ ಆಗಿರೋ 'ವಿನು' ಚಿತ್ರ ಮಾಡ್ತಿರೋದು ಪವರ್ ಸ್ಟಾರ್ ಗೆ ದಾಖಲೆಯ 'ಮಿಲನ' ಚಿತ್ರ ಮಾಡಿದ್ದ ಪ್ರಕಾಶ್. ಒಟ್ಟಾರೆ ಈ ಬಾರಿಯ ರಾಜ್ ಹುಟ್ಟುಹಬ್ಬಕ್ಕೆ ರಾಜ್ ಕುಟುಂಬದ ಮೂರನೇ ತಲೆಮಾರು ಸಿನಿಮಾಗೆ ಎಂಟ್ರಿಕೊಡೋದು ಕನ್ಫರ್ಮ್ ಅಂತಿದೆ ಗಾಂಧಿನಗರ.

English summary
Kannada Matinee Idol late Dr. Rajkumar's Grandson Vinay Rajkumar (Vinay Raj) all set to give a grand entry into the Sandalwood on Dr Raj birthday. The movie titled as 'Vinu', the sub title 'Give me a break' directed by 'Milana' fame Prakash and music by V Harikrishna. Vinay Raj is son of Raghavendra Rajkumar is entering Kannada films on 24th April. 
Please Wait while comments are loading...