'ಮನದ ಮರೆಯಲ್ಲಿ' ಅಣ್ಣಾವ್ರ ಆದರ್ಶ ಸಾಕಾರ

ನೇತ್ರದಾನದ ಬಗ್ಗೆ ಅಣ್ಣಾವ್ರ ಹೇಳಿಕೆ ಹಾಗೂ ಅವರ ಆದರ್ಶಗಳನ್ನು ಮುಖ್ಯವಾಗಿಸಿಕೊಂಡು ಚಿತ್ರವೊಂದು ಸೆಟ್ಟೇರಿದೆ. ಚಿತ್ರದ ಹೆಸರು 'ಮನದ ಮರೆಯಲ್ಲಿ'. ಚಿತ್ರದ ಅಡಿಬರಹ "ನೂರೊಂದು ನೆನಪು". ಯು.ಎಂ.ಡ್ರೀಮ್ಸ್ ಮೂವೀಸ್ ಸಂಸ್ಥೆ ಲಾಂಛನದಲ್ಲಿ ಮಹೇಶ್ ಆನೇಕಲ್ ಅವರು ನಿರ್ಮಿಸುತ್ತಿರುವ ಚಿತ್ರವಿದು.
ಈ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರಿಬ್ಬರೂ ಹೊಸಬರು. ವಿಂಧ್ಯಾ ಎಂಬ ಹೊಸ ಹುಡುಗಿ ಈ ಚಿತ್ರದ ಮೂಲಕ ಕನ್ನಡ ಪರಿಚಯವಾಗುತ್ತಿದ್ದಾರೆ. 'ಒಲವೇ ಮಂದಾರ'ದ ಶ್ರೀಕಾಂತ್ (ಶ್ರೀಕಿ) ಚಿತ್ರದ ನಾಯಕ ನಟ. ಇತ್ತೀಚೆಗೆ ಈ ಚಿತ್ರಕ್ಕೆ ನಾರಾಯಣ ನೇತ್ರಾಲಯದಲ್ಲಿ ಕೆಲವು ಸನ್ನಿವೇಶಗಳ ಚಿತ್ರೀಕರಣ ನಡೆಯಿತು.
ರಾಜ್ ಕಿಶೋರ್, ಎಚ್ ವಾಸು, ಬಿ ಮಲ್ಲೇಶ್ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಎ.ಹೆಚ್. ರಾಜೀವ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನೂ ನಿರ್ದೇಶಕರೇ ಹೊತ್ತಿದ್ದಾರೆ.
ಖ್ಯಾತ ನಟ ಅನಂತಾನಾಗ್ ವೈದ್ಯರ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ನವೀನ್ ಸುವರ್ಣ ಛಾಯಾಗ್ರಾಹಕರಾಗಿರುವ ಈ ಚಿತ್ರಕ್ಕೆ ಎಂ.ಎಸ್.ತ್ಯಾಗರಾಜ್ ಸಂಗೀತ ನೀಡುತ್ತಿದ್ದಾರೆ. ಎಂ.ಯೋಗೇಂದ್ರ ನೃತ್ಯ ನಿರ್ದೇಶನ ಹಾಗೂ ಎನ್.ಕೆ.ಕುಮಾರ್ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ಬೆಂಗಳೂರು, ಮಡಿಕೇರಿಯಲ್ಲಿ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











