Just In
Don't Miss!
- Automobiles
ಇದೇ ತಿಂಗಳಾಂತ್ಯಕ್ಕೆ ಬಿಡುಗಡೆಯಾಗಲಿರುವ ಟಾಪ್ 5 ಕಾರುಗಳಿವು..
- Lifestyle
ಜ. 16ರಿಂದ ಭಾರತದಲ್ಲಿ ಕೋವಿಡ್ 19 ಲಸಿಕೆ: ಇದರ ಕುರಿತ ಪ್ರಮುಖ 10 ಮಾಹಿತಿ
- News
ಹಳೇ ಮೈಸೂರಿಗೆ ಸಿಗದ ಪ್ರಾತಿನಿಧ್ಯ: ಪಕ್ಷದ ಮೇಲೆ ಬೀರುತ್ತಾ?
- Sports
ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ ತಂದೆ ಹಿಮಾಂಶು ಪಾಂಡ್ಯ ನಿಧನ
- Education
ECIL Recruitment 2021: ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ವಾಕ್ ಇನ್ ಇಂಟರ್ವ್ಯೂ
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 15ರ ಚಿನ್ನ, ಬೆಳ್ಳಿ ದರ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಡಾ ರಾಜ್ ಕುಮಾರ್ ಕಿಡ್ನಾಪ್ ಘಟನೆ: 'ಇದು ನನ್ ಅಂದಿನ ಮೀಟರ್' ಎಂದ ಜಗ್ಗೇಶ್
ವರನಟ ಡಾ ರಾಜ್ ಕುಮಾರ್ ಕಿಡ್ನಾಪ್ ಪ್ರಕರಣ ಕನ್ನಡ ಚಿತ್ರರಂಗದಲ್ಲಿ ಕಪ್ಪುಚುಕ್ಕೆಯಾಗಿ ಉಳಿದುಕೊಂಡಿದೆ. ಅಣ್ಣಾವ್ರನ್ನು ವೀರಪ್ಪನ್ ಅಪಹರಿಸಿದ ಘಟನೆ ನಡೆದು 20 ವರ್ಷ ಕಳೆದಿದೆ.
ಡಾ ರಾಜ್ ಅಪಹರಣ ಆದ ನಂತರ ನಡೆದ ಘಟನೆಗಳು ಎಂದು ಮರೆಯಲು ಸಾಧ್ಯವಿಲ್ಲ. ರಾಜ್ ಅಭಿಮಾನಿಗಳಿಂದ ರಾಜ್ಯಾದಂತ್ಯ ಪ್ರತಿಭಟನೆ, ಬಂದ್, ಹೋರಾಟ ಎಲ್ಲವೂ ಆಯ್ತು.
ಡಾ. ರಾಜ್ ಕುಮಾರ್ ಅಪಹರಣ: ಆ ಕರಾಳ ಘಟನೆಗೆ 20 ವರ್ಷ
ಕನ್ನಡಿಗರ ಕಣ್ಮಣಿಯನ್ನು ಕಾಡುಗಳ್ಳನಿಂದ ಬಿಡಿಸಲು ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ಶತ ಪ್ರಯತ್ನ ನಡೆಸಿದ್ದರು. ಅಂದಿನ ತಮಿಳುನಾಡು ಸಿಎಂ ಕರುಣಾನಿಧಿ ಹಾಗೂ ಕರ್ನಾಟಕ ಸಿಎಂ ಎಸ್ ಎಂ ಕೃಷ್ಣ ಸರ್ಕಾರಗಳ ಸತತ ಚರ್ಚೆ, ಸಭೆಗಳು ನಡೆದರೂ ಯಾವುದೇ ಪ್ರಯೋಜನವೂ ಆಗಿರಲಿಲ್ಲ. 108 ದಿನಗಳ ಬಳಿಕ ಅಣ್ಣಾವ್ರನ್ನು ವೀರಪ್ಪನ್ ಬಿಡುಗಡೆ ಮಾಡಿದ್ದ.
ಈಗ ಈ ಘಟನೆ ಕುರಿತು ಚರ್ಚೆ ಏಕೆ ಎನ್ನುವುದಕ್ಕೆ ಉತ್ತರ ಜಗ್ಗೇಶ್ ಅವರ ಹಾಕಿರುವ ಪೋಸ್ಟ್. ಜಗ್ಗೇಶ್ ಅಭಿಮಾನಿಯೊಬ್ಬರು ಜಗ್ಗೇಶ್ ಮತ್ತು ಚಿಕ್ಕ ಮಗುವೊಂದು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕುರುಣಾನಿಧಿ ಅವರನ್ನು ಭೇಟಿ ಮಾಡಿರುವ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋವನ್ನು ಶೇರ್ ಮಾಡಿರುವ ಜಗ್ಗೇಶ್ ''ಇದು ನನ್ ಅಂದಿನ ಮೀಟರ್'' ಎಂದು ಟೀಕಿಸುವವರಿಗೆ ತಿರುಗೇಟು ನೀಡಿದ್ದಾರೆ.
''ರಾಜಣ್ಣನ ಕಾಡುಗಳ್ಳ ವೀರಪ್ಪ ಅಪಹರಣ ಮಾಡಿದಾಗ ರಾಜಣ್ಣನ ಬಿಡುಗಡೆಗೆ ಒತ್ತಾಯಿಸಲು ಅಂದಿನ ಚೆನ್ನೈ ಮುಖ್ಯಮಂತ್ರಿಗಳು ಪೂಜ್ಯ ಕರುಣಾನಿಧಿ ಸಾಹೇಬರ ಭೇಟಿ ಮಾಡಿದ ಮೊದಲಿಗ ಈ ಕಾಮಿಡಿ ಪೀಸು ಎಂದು ಭಾವಿಸುವ ಸಣ್ಣ ಮಕ್ಕಳಿಗೆ ಮಾಹಿತಿ! ಇದು ನನ್ ಅಂದಿನ ಮೀಟರ್'' ಎಂದು ಟ್ವೀಟ್ ಮಾಡಿದ್ದಾರೆ.
ಎಸ್ ಎಂ ಕೃಷ್ಣ ಆತ್ಮಕಥೆಯಲ್ಲಿ ಡಾ ರಾಜ್ ಕಿಡ್ನಾಪ್ ಪ್ರಕರಣದ ರೋಚಕ ಕಥೆ ಬಹಿರಂಗ
ಹಾಗಾಗಿ, ಅಣ್ಣಾವ್ರ ಕಿಡ್ನಾಪ್ ಆದ ದಿನಗಳು ನೆನಪಾಯಿತು. ಇತ್ತೀಚಿನ ದಿನಗಳಲ್ಲಿ ನಡೆದ ಬೆಳವಣಿಗೆಯಲ್ಲಿ ನಟ ಜಗ್ಗೇಶ್ ಅವರು ಕೆಲವು ವಿಚಾರಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಪ್ಯಾನ್ ಇಂಡಿಯಾ, ಡಬ್ಬಿಂಗ್ ವಿಚಾರ ಬೆಂಬಲಿಸಿದವರ ಬಗ್ಗೆ ಜಗ್ಗೇಶ್ ಪ್ರಶ್ನಿಸಿದ್ದರು. ನಂತರ, ಜಗ್ಗೇಶ್ ಅವರ ಹೇಳಿಕೆಗಳು ಭಾರಿ ವಿರೋಧಕ್ಕೆ ಕಾರಣವಾಗಿತ್ತು.