ಜಗ್ಗೇಶ್ ಅವರ ಆಫೀಸ್‌ನಲ್ಲಿದೆ ದಿಗ್ಗಜ ನಟರೊಬ್ಬರ ಫೋಟೋ
ನವರಸ ನಾಯಕ ಜಗ್ಗೇಶ್ ಟ್ವಿಟ್ಟರ್‌ನಲ್ಲಿಂದು ತಮ್ಮ ಆಫೀಸ್ ವಿಡಿಯೋ ಹಂಚಿಕೊಂಡಿದ್ದರು. ಅಂದ್ರೆ ತಮ್ಮ ಮನೆಯಲ್ಲಿ ರೂಪಿಸಿಕೊಂಡಿರುವ ಕಚೇರಿಯ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
''ನನ್ನ ಗೃಹ ಕಛೇರಿ. ಇಲ್ಲೆ ನಾನು ನನ್ನ ಸಿನಿಮಕಥೆ, ವ್ಯವಹಾರ ನಿಶ್ಚಯ, ಮಾಡೋದು. ನಾನು ಇಲ್ಲಿ ಕೂತರೆ ಮನಸ್ಸು ತುಂಬ ಪ್ರಶಾಂತವಾಗುತ್ತದೆ'' ಎಂದು ಬರೆದುಕೊಂಡಿದ್ದಾರೆ.
ಅಂದ್ಹಾಗೆ, ಜಗ್ಗೇಶ್ ಅವರು ಸಿನಿಮಾಗೆ ಸಂಬಂಧಿಸಿದಂತೆ ಮಾತುಕತೆ, ಕಥೆ ಕೇಳುವುದು ಹಾಗೂ ಇನ್ನಿತರ ಚರ್ಚೆ, ವ್ಯವಹಾರಗಳನ್ನು ಮಾಡುವುದಕ್ಕಾಗಿಯೇ ತಮ್ಮ ಮನೆಯಲ್ಲಿ ಆಫೀಸ್ ರೀತಿ ವ್ಯವಸ್ಥೆ ರೂಪಿಸಿಕೊಂಡಿದ್ದಾರೆ.

ಜಗ್ಗೇಶ್ ಹಂಚಿಕೊಂಡಿರುವ ವಿಡಿಯೋದಲ್ಲಿ ಕನ್ನಡ ಚಿತ್ರರಂಗದ ದಿಗ್ಗಜ ನಟರೊಬ್ಬರ ಫೋಟೋ ಇರುವುದು ತಿಳಿದು ಬಂದಿದೆ. ಹೌದು, ಜಗ್ಗೇಶ್ ಅವರ ತಮ್ಮ ಜೀವನದಲ್ಲಿ ಆದರ್ಶವಾಗಿಟ್ಟುಕೊಂಡಿರುವ ನಟಸಾರ್ವಭೌಮ ಡಾ ರಾಜ್ ಕುಮಾರ್ ಅವರ ಫೋಟೋವನ್ನು ತಮ್ಮ ಆಫೀಸ್‌ನಲ್ಲಿ ಇಟ್ಟುಕೊಂಡಿದ್ದಾರೆ.
ತಮ್ಮ ಟೇಬಲ್‌ನಲ್ಲಿ ಅಣ್ಣಾವ್ರ ಫೋಟೋ ಇಟ್ಟಿರುವುದನ್ನು ಸಹ ಇನ್ನೊಂದು ವಿಡಿಯೋದಲ್ಲಿ ಸ್ವತಃ ಜಗ್ಗೇಶ್ ಅವರೇ ತೋರಿಸಿದ್ದಾರೆ.
ಜಗ್ಗೇಶ್ ಅವರ ಕಚೇರಿ ವಿಡಿಯೋ ಮತ್ತು ಅಣ್ಣಾವ್ರ ಫೋಟೋ ನೋಡಿದ ನೆಟ್ಟಿಗರು ಖುಷಿ ವ್ಯಕ್ತಪಡಿಸಿದ್ದಾರೆ. ಅಣ್ಣಾವ್ರ ಮೇಲಿನ ಅಭಿಮಾನ ಹಾಗೂ ದೇಶಭಕ್ತಿಯ ಬಗ್ಗೆ ಜಗ್ಗೇಶ್ ಅವರ ನಿಲುವಿನ ಬಗ್ಗೆ ಮೆಚ್ಚಿಕೊಂಡಿದ್ದಾರೆ.


Click it and Unblock the Notifications











