For Quick Alerts
  ALLOW NOTIFICATIONS  
  For Daily Alerts

  'ಡಾ.ರಾಜ್ ಕುಮಾರ್ ರಸ್ತೆ' ಯಲ್ಲೊಂದು ಸಿನಿಮಾ

  By Naveen
  |

  ಮೆಜೆಸ್ಟಿಕ್, ಕಲಾಸಿಪಾಳ್ಯ, ಶಿವಾಜಿನಗರ ಹೀಗೆ ಬೆಂಗಳೂರಿನ ಸ್ಥಳಗಳ ಹೆಸರಿನಲ್ಲಿ ಈಗಾಗಲೇ ಸಿನಿಮಾಗಳು ಬಂದಿವೆ. ಆದರೆ ಈಗ ಬೆಂಗಳೂರಿನ 'ಡಾ.ರಾಜ್ ಕುಮಾರ್' ರಸ್ತೆಯ ಹೆಸರಿನಲ್ಲಿ ಒಂದು ಹೊಸ ಸಿನಿಮಾ ಶುರುವಾಗಿದೆ. ಸಿನಿಮಾದ ಟೈಟಲ್ ಕೇಳುತ್ತಿದ್ದಾ ಹಾಗೆ ಇದೊಂದು ಬೇರೆ ರೀತಿಯ ಸಿನಿಮಾ ಇರಬೇಕು ಎನ್ನುವ ಭಾವ ಮೂಡುತ್ತದೆ. ಡಾ.ರಾಜ್ ಕುಮಾರ್ ರಸ್ತೆಯಲ್ಲಿ ನೆಡೆದ ಒಂದು ಘಟನೆ ಸಿನಿಮಾದ ಕಥೆಯಾ ಎನ್ನುವ ಕುತೂಹಲ ಹೆಚ್ಚಾಗಿದೆ.

  ಕನ್ನಡದ ಸಿನಿಮಾ ಪತ್ರಕರ್ತರಾಗಿ ಸಾಕಷ್ಟು ಹೆಸರು ಮಾಡಿರುವ ವಿನಾಯಕ್ ರಾಮ್ ಕಲಗಾರು ಅವರ ಮೊದಲ ನಿರ್ದೇಶಕದ ಸಿನಿಮಾ ಇದಾಗಿದೆ. ಈ ಹಿಂದೆ ಜನಪ್ರಿಯ ರಿಯಾಲಿಟಿ ಶೋ ಗಳು, ಸುದ್ದಿ ವಾಹಿನಿ ಕಾರ್ಯಕ್ರಮಗಳು, ಸಿನಿಮಾ ಸಂಭಾಷಣೆ, ಧಾರಾವಾಹಿಗಳಿಗೆ ಸಂಭಾಷಣೆ, ಪ್ರತಿಕೆ, ಮ್ಯಾಕಜಿನ್ ಗಳಿಗೆ ಅಂಕಣ ಹೀಗೆ ಒಳ್ಳೆಯ ಬರಹಗಾರನಾಗಿ ಗುರುತಿಸಿಕೊಂಡಿದ್ದ ಕಲಗಾರು ಈಗ ತಮ್ಮ ಬರಹಕ್ಕೆ ದೃಶ್ಯ ರೂಪ ನೀಡಲು ಸಜ್ಜಾಗಿದ್ದಾರೆ. ಒಳ್ಳೆಯ ರೈಟರ್ ಆಗಿದ್ದ ವಿನಾಯರ್ ರಾಮ್ ಈಗ ಇಂದು ಹೆಜ್ಜೆ ಮುಂದೆ ಹೋಗಿ ಡೈರೆಕ್ಟರ್ ಆಗಿದ್ದಾರೆ.ನಿರ್ದೇಶಕ ಲೂಸಿಯಾ ಪವನ್ ಕುಮಾರ್ ವಿನಾಯಕ್ ರಾಮ್ ಅವರ ಸಿನಿಮಾ ಮೇಕಿಂಗ್ ಗೆ ಸ್ಫೂರ್ತಿ ಅಂತೆ.

  'ಪಿ ಆರ್ ಕೆ' ಪ್ರೊಡಕ್ಷನ್ಸ್ ನಲ್ಲಿ ಹೊಸಬರ ಸಿನಿಮಾಗಳು

  ಸದ್ಯಕ್ಕೆ 'ಡಾ.ರಾಜ್ ಕುಮಾರ್ ರಸ್ತೆ' ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದೆ. ಮೊದಲ ನೊಟಕ್ಕೆ ಇಷ್ಟ ಆಗಿ ಬಿಡುವ ಪೋಸ್ಟರ್ ಸೋಗಸಾಗಿದೆ. ಪೋಸ್ಟರ್ ನಲ್ಲಿ ಒಂದು ಹೊಸತನ ಇದೆ. ಈ ಸಿನಿಮಾವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ನವರು ಇದೇ ತಿಂಗಳ 23ಕ್ಕೆ ಲಾಂಚ್ ಮಾಡಲಿದ್ದಾರೆ. ಇನ್ನು ಸಿನಿಮಾದ ನಟ, ನಟಿ ಕಲಾವಿದರ ವಿಚಾರ ಇನ್ನೂ ಬಹಿರಂಗವಾಗಿಲ್ಲ.

  ವಿಶೇಷ ಅಂದರೆ ಸಿನಿಮಾಗಾಗಿ ಈ ಏಪ್ರಿಲ್ ತಿಂಗಳಿನಿಂದ ಮುಂದಿನ ಏಪ್ರಿಲ್ ತಿಂಗಳಿನವರೆಗೆ ಇರುವ ಒಂದು ಕ್ಯಾರೆಂಡರ್ ಮಾಡಲಾಗಿದೆ. ಇದರಲ್ಲಿ ಅಣ್ಣಾವ್ರ ಅಪರೂಪದ ಪೋಟೊಗಳಿ ಇರಲಿದೆಯಂತೆ. ಇದೇ ಸಿನಿಮಾದ ಚಿತ್ರದ ಮುಹೂರ್ತದ ಆಮಂತ್ರಣ ಪತ್ರಿಕೆ ಆಗಿರುತ್ತದೆ. ನಟ ಡಾ.ಶಿವರಾಜ್ ಕುಮಾರ್ ಹಾಗೂ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಚಿತ್ರವನ್ನು ಅರ್ಪಿಸುತ್ತಿದ್ದಾರೆ. ಲಿಂಗ, ಕೋಟಿಗೊಬ್ಬ 2-3 ಚಿತ್ರಕ್ಕೆ ಲೈಮ್ ಪ್ರೊಡ್ಯೂಸರ್ ಆಗಿದ್ದ ಬಸು ನಾಡಗೌಡ ಚಿತ್ರದ ನಿರ್ಮಾಪಕರು. ಜೊತೆಗೆ ರವಿ ಆರ್.ಗರಣಿ ಸಹಕಾರದೊಂದಿಗೆ, ಮುರಳಿಧರ ಹಾಲಪ್ಪನವರು ತಮ್ನ ಹಾಲಪ್ಪ ಕ್ರಿಯೇಷನ್ಸ್ ನಲ್ಲಿ ಟೈಟಲ್ ರಿಜಿಸ್ಟರ್ ಮಾಡಿದ್ದಾರೆ.ಹೊಸಕೋಟೆ ಚಂದ್ರಶೇಖರ್ - ಲಕ್ಷ್ಮಿನಾರಾಯಣ ಹೆಗಡೆ ತಾಳಗುಪ್ಪ ಚಿತ್ರದ ನಿರ್ಮಾಣಕ್ಕೆ ಕೈಜೋಡಿಸಿದ್ದಾರೆ. ಲಹರಿ ಸಂಸ್ಥೆ ಚಿತ್ರದ ಆಡಿಯೊ ಪಾರ್ಟ್ನರ್ ಆಗಿದೆ.

  English summary
  Director Vinayak Ram Kalagaru's 'DR.Rajkumar Rasthe' kannada movie poster released.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X