For Quick Alerts
  ALLOW NOTIFICATIONS  
  For Daily Alerts

  ಅಣ್ಣಾವ್ರ ಮೊಮ್ಮಗ ವಿನಯ್ ರಾಜ್ ಚಿತ್ರ 'ವಿನು'

  By Rajendra
  |

  ಕಳೆದೆರಡು ವರ್ಷಗಳಿಂದ ನಟಸಾರ್ವಭೌಮ ಡಾ.ರಾಜ್ ಕುಮಾರ್ ಅವರ ಮೊಮ್ಮಗ ವಿನಯ್ ರಾಜ್ ಬೆಳ್ಳಿಪರದೆಗೆ ಅಡಿಯಿಡುತ್ತಿದ್ದಾರೆ ಎಂಬ ಸುದ್ದಿ ಚಾಲ್ತಿಯಲ್ಲಿದೆ. ಈಗದು ನಿಜವಾಗುತ್ತಿದೆ. 2014ರ ಜನವರಿಯಲ್ಲಿ ವಿನಯ್ ರಾಜ್ ಚಿತ್ರ ಸೆಟ್ಟೇರುತ್ತಿದೆ.

  ಇತ್ತೀಚೆಗೆ ರಾಘವೇಂದ್ರ ರಾಜ್ ಕುಮಾರ್ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದು ಗೊತ್ತೇ ಇದೆ. ಬಹುಶಃ ಅವರಿಗೆ ಆ ರೀತಿ ಆಗದಿದ್ದರೆ ಇಷ್ಟೊತ್ತಿಗೆ ತಮ್ಮ ಪುತ್ರ ವಿಜಯ್ ರಾಜ್ ಚಿತ್ರ ಸೆಟ್ಟೇರುತ್ತಿತ್ತೇನೋ. ಇರಲಿ ಈಗಲಾದರೂ ಮುಹೂರ್ತ ಕೂಡಿಬಂದಿದೆ ಎಂಬುದೇ ಸಂತಸದ ಸಂಗತಿ.

  'ಮಿಲನ'ದಂತಹ ಭರ್ಜರಿ ಹಿಟ್ ಚಿತ್ರ ಕೊಟ್ಟಂತಹ ಪ್ರಕಾಶ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಚಿತ್ರದ ಶೀರ್ಷಿಕೆ 'ವಿನು' ಎಂದು. ಚಿತ್ರದ ಅಡಿಬರಹ 'ಗೀವ್ ಮೀ ಎ ಬ್ರೇಕ್'. ಈ ಚಿತ್ರ ಖಂಡಿತ ಬ್ರೇಕ್ ಕೊಟ್ಟು ತಮ್ಮ ಭವಿಷ್ಯಕ್ಕೆ ಮುನ್ನಡಿಯಾಗಲಿದೆ ಎಂಬ ನಿರೀಕ್ಷೆಯಲ್ಲಿ ರಾಜ್ ಕುಟುಂಬವಿದೆ.

  ಚಿತ್ರಕ್ಕೆ ವಿ ಹರಿಕೃಷ್ಣ ಅವರ ಸಂಗೀತ ಇದೆ. ಚಿತ್ರಕಥೆ ಹಾಗೂ ನಿರ್ದೇಶನ ಪ್ರಕಾಶ್ ಅವರದು. ಕಥೆ ಮಾತ್ರ ತಮ್ಮದಲ್ಲಾ ಎನ್ನುತ್ತಿದ್ದಾರೆ ಪ್ರಕಾಶ್. ಒಟ್ಟಾರೆಯಾಗಿ ಒಬ್ಬ ಪ್ರತಿಭಾವಂತ ನಿರ್ದೇಶಕ, ಸಕ್ಸಸ್ ಫುಲ್ ಸಂಗೀತ ನಿರ್ದೇಶಕ ಹಾಗೂ ಸದಾ ಸದಭಿರುಚಿಯ ಚಿತ್ರಗಳಿಗೆ ಹೆಸರಾಗಿರುವ ರಾಜ್ ಬ್ಯಾನರ್ ಜೊತೆಗಿದೆ.

  ಪ್ರೇಕ್ಷಕರ ನಿರೀಕ್ಷೆಗಳು ಖಂಡಿತ ಹುಸಿಯಾಗಲ್ಲ ಎಂಬುದು ಎಲ್ಲರ ಅಭಿಪ್ರಾಯ. ಇನ್ನು ಪ್ರಕಾಶ್ ಅವರು ನಿರ್ದೇಶಿಸಿದ ಖುಷಿ, ರಿಷಿ, ವಂಶಿ ಚಿತ್ರಗಳು ಶತದಿನೋತ್ಸವ ಆಚರಿಸಿಕೊಂಡಿವೆ. ಮಿಲನ ಚಿತ್ರವಂತೂ 450 ದಿನಗಳ ಭರ್ಜರಿ ಪ್ರದರ್ಶವನ್ನು ಪಿವಿಆರ್ ನಲ್ಲಿ ಕಂಡಿರುವುದು ವಿಶೇಷ.

  ಇನ್ನು ವಿನಯ್ ರಾಜ್ ಬಗ್ಗೆ ಹೇಳಬೇಕಾದರೆ ನಾಯಕ ನಟನಿಗೆ ಬೇಕಾದ ಮೈಕಟ್ಟು, ಎತ್ತರ ಅವರಿಗಿದೆ. ಫೈಟಿಂಗ್, ಡ್ಯಾನ್ಸಿಂಗ್ ಎಲ್ಲವನ್ನೂ ಕರಗತ ಮಾಡಿಕೊಂಡಿದ್ದಾರೆ. ಡಾ.ರಾಜ್ ಅಭಿಮಾನಿಗಳಿಗಳಿಗೂ ವಿನಯ್ ಎಂಟ್ರಿ ಬಗ್ಗೆ ಕುತೂಹಲ ಇದ್ದೇ ಇದೆ. ಮೇಲಿಂದ ತಾತ ಮತ್ತುರಾಜ್‌ರ ಆಶೀರ್ವಾದ ಧಾರಾಳವಾಗಿದೆ. (ಏಜೆನ್ಸೀಸ್)

  English summary
  Kannada Matinee Idol late Dr. Rajkumar's Grandson Vinay Rajkumar (Vinay Raj) all set to give a grand entry into the Sandalwood. The movie titled as 'Vinu', the sub title 'Give me a break' directed by Milana fame Prakash and music by V Harikrishna. Vinay Raj is son of Raghavendra Rajkumar is entering Kannada films on January 2014.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X