»   » ಚಿತ್ರರಂಗದಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ ಡಾ ರಾಜ್ ಕುಮಾರ್ ಅಳಿಯ

ಚಿತ್ರರಂಗದಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ ಡಾ ರಾಜ್ ಕುಮಾರ್ ಅಳಿಯ

Posted By:
Subscribe to Filmibeat Kannada
ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ ರಾಮ್ ಕುಮಾರ್ | Filmibeat Kannada

ಡಾ ರಾಜ್ ಕುಟುಂಬದಿಂದ ಅನೇಕ ಕಲಾವಿದರು ಸಿನಿಮಾರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಚಿತ್ರರಂಗದಲ್ಲೇ ಅವರದ್ದೇ ಆದ ಹೆಸರು ಮತ್ತು ಪ್ರಖ್ಯಾತಿಯನ್ನೂ ಪಡೆದುಕೊಂಡಿದ್ದಾರೆ.

ರಾಜ್ ಕುಮಾರ್ ಅವರ ಮೂರು ಜನ ಮಕ್ಕಳು ಚಿತ್ರರಂಗದಲ್ಲಿ ತಮ್ಮದೇ ಸ್ಟೈಲ್ ನಲ್ಲಿ ಗುರುತಿಸಿಕೊಂಡಿದ್ದಾರೆ. ಅದರ ಜೊತೆಯಲ್ಲಿ ಅವರ ಮೊಮ್ಮಕ್ಕಳು ಕೂಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ಇನ್ನು ಅನೇಕರು ಸಿನಿಮಾದಲ್ಲಿ ಅಭಿನಯಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಇವರು ಸ್ಯಾಂಡಲ್ ವುಡ್ ನ ರಣವೀರ್ ಸಿಂಗ್

ಸುಮಾರು ಹತ್ತು ವರ್ಷಗಳಿಂದ ಚಿತ್ರರಂಗದಿಂದ ದೂರ ಉಳಿದುಕೊಂಡ ಆಗಾಗ ಒಂದೆರೆಡು ಸಿನಿಮಾಗಳಲ್ಲಿ ಮಾತ್ರ ಅಭಿನಯಿಸುತ್ತಾ ಕಳೆದ ಐದು ವರ್ಷದಿಂದ ಚಿತ್ರರಂಗದಿಂದ ಸಂಪೂರ್ಣವಾಗಿ ದೂರವಾಗಿದ್ದ ನಟ ರಾಮ್ ಕುಮಾರ್ ಮತ್ತೆ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಮೂಲಕ ಮತ್ತೆ ರಾಮ್ ಕುಮಾರ್ ಸಿನಿಮಾರಂಗದಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಹಾಗಾದರೆ ಆ ಚಿತ್ರ ಯಾವುದು ? ಮುಂದೆ ಓದಿ

ರಾಜ್ ಕುಮಾರ್ ಅಳಿಯನ ಸೆಕೆಂಡ್ ಇನ್ನಿಂಗ್ಸ್

'ಪಾಂಡವರು' ಸಿನಿಮಾದ ನಂತರ ನಟ ರಾಮ್ ಕುಮಾರ್ ಹೆಚ್ಚಾಗಿ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ಬ್ಯುಸಿನೆಸ್ ಕಡೆ ಗಮನ ಹರಿಸಿದ್ದ ನಟ ರಾಮ್ ಕುಮಾರ್ ಆಗಾಗ ಭಕ್ತಿ ಪ್ರಧಾನ ಚಿತ್ರದಲ್ಲಿ ಅಭಿನಯಿಸಿದ್ದರು. ಈಗ ರಾಮ್ ಕುಮಾರ್ ಮತ್ತೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ. 'ವಿಶ್ವರಾಧ್ಯರು' ಎನ್ನುವ ಭಕ್ತಿ ಪ್ರಧಾನ ಚಿತ್ರದ ಮೂಲಕ ಸಿನಿಮಾ ಅಭಿಮಾನಿಗಳ ಮುಂದೆ ಬರಲಿದ್ದಾರೆ.

ಒಂದೇ ಸ್ಟೇಜ್ ಮೇಲೆ ಪುನೀತ್ -ರಾಮ್ ಕುಮಾರ್

ಇತ್ತೀಚಿನ ದಿನಗಳಲ್ಲಿ ನಟ ರಾಮ್ ಕುಮಾರ್ ಅವರನ್ನ ನೋಡಲು ಅಭಿಮಾನಿಗಳಿಗೂ ಸಾಧ್ಯವಾಗಿಲ್ಲ. ವಿಶ್ವರಾಧ್ಯರು ಚಿತ್ರದ ಆಡಿಯೋ ಕಾರ್ಯಕ್ರಮದಲ್ಲಿ ರಾಮ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಚಿತ್ರರಂಗಕ್ಕೆ ರಾಮ್ ಕುಮಾರ್ ಮಗ

ಚಿತ್ರಗಳಲ್ಲಿ ಅಭಿನಯಿಸುವುದನ್ನ ಕಡಿಮೆ ಮಾಡಿರುವ ರಾಮ್ ಕುಮಾರ್ ತಮ್ಮ ಮಗ ಧಿರೇನ್ ರಾಮ್ ಕುಮಾರ್ ಅವರನ್ನ ಚಿತ್ರರಂಗಕ್ಕೆ ಪರಿಚಯಿಸಲಿದ್ದಾರೆ. ಈಗಾಗ್ಲೆ ಲುಕ್ ಟೆಸ್ಟ್ ಮಾಡಿಸಿರುವ ಧಿರೇನ್ ಕೆಲವೇ ದಿನಗಳಲ್ಲಿ ಚಿತ್ರಗಳ ಮಾಹಿತಿ ನೀಡಲಿದ್ದಾರೆ.

ವಿಶ್ವರಾಧ್ಯರು ಚಿತ್ರದ ಬಗ್ಗೆ

ವಿಶ್ವರಾಧ್ಯರು ಸಿನಿಮಾದಲ್ಲಿ ರಾಮ್ ಕುಮಾರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಶೃತಿ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಚಿತ್ರೀಕರಣ ಮುಗಿಸಿರೋ ಚಿತ್ರತಂಡ ಇನ್ನ ಕೆಲವೇ ದಿನಗಳಲ್ಲಿ ಸಿನಿಮಾವನ್ನ ಬಿಡುಗಡೆ ಮಾಡಲಿದ್ದಾರೆ.

English summary
Kannada actor Dr. Rajkumar's son-in-law Ramkumar has started his second innings in the film industry. Ramkumar has acted in a movie called Vishvaradya.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X