»   » ಅನುಪಮ, ನವರಂಗ್ ಮತ್ತು ಉಮಾ ಚಿತ್ರಮಂದಿರದಲ್ಲಿ 'ಬಬ್ರುವಾಹನ'

ಅನುಪಮ, ನವರಂಗ್ ಮತ್ತು ಉಮಾ ಚಿತ್ರಮಂದಿರದಲ್ಲಿ 'ಬಬ್ರುವಾಹನ'

Posted By:
Subscribe to Filmibeat Kannada

ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ ಕಟ್ಟಾ ಅಭಿಮಾನಿಗಳಿಗೆ ಒಂದು ಸಂತಸದ ಸುದ್ದಿ ಇದೆ. ಕನ್ನಡದ ಕ್ಲಾಸಿಕ್ ಚಿತ್ರ, ವರನಟ ಡಾ.ರಾಜ್ ಅವರು ಫೇಮಸ್ ಆಗುವಲ್ಲಿ ಯಶಸ್ವಿಯಾದ ಚಿತ್ರ 'ಬಬ್ರುವಾಹನ' ಮತ್ತೆ ರೀ ರಿಲೀಸ್ ಆಗುತ್ತಿದೆ.

ಹೌದು ಇದೇ ತಿಂಗಳು ಏಪ್ರಿಲ್ 22 ರಂದು ಡಾ.ರಾಜ್ ಅವರ ಐತಿಹಾಸಿಕ ಕಥೆಯಾಧರಿತ 'ಬಬ್ರುವಾಹನ' ಸಿನಿಮಾ ಟೆಕ್ನಿಕಲಿ ಅಪ್ ಗ್ರೇಡ್ ಆಗಿ ಮತ್ತೆ ಚಿತ್ರಮಂದಿರಗಳಲ್ಲಿ ಗ್ರ್ಯಾಂಡ್ ಆಗಿ ತೆರೆ ಕಾಣಲಿದೆ.

ಅಂದಹಾಗೆ ಏಪ್ರಿಲ್ 24 ರಂದು ಡಾ.ರಾಜ್ ಕುಮಾರ್ ಅವರ 87ನೇ ಹುಟ್ಟುಹಬ್ಬವಿದ್ದು, ಅದಕ್ಕಿಂತ ಎರಡು ದಿನ ಮುಂಚಿತವಾಗಿ 1977ನೇ ವರ್ಷದ 'ಬಬ್ರುವಾಹನ' ಚಿತ್ರ ರೀ-ರಿಲೀಸ್ ಆಗುತ್ತಿದೆ.[ಎಸ್.ಪಿ.ಬಾಲಸುಬ್ರಹ್ಮಣ್ಯಂಗೆ ಡಾ.ರಾಜ್ ಕ್ಷಮೆ ಕೇಳಿದ ಗುಟ್ಟು ರಟ್ಟಾಯ್ತು!]

Dr Rajkumar Starring 'Babruvahana' Re-releasing On April 22

ಇನ್ನು ರೀ-ರಿಲೀಸ್ ಆಗುತ್ತಿರುವ ಈ ಚಿತ್ರದ ಮತ್ತೊಂದು ವಿಶೇಷ ಏನಪ್ಪಾ ಅಂದ್ರೆ ಇತ್ತೀಚಿಗಿನ ತಂತ್ರಜ್ಞಾನವನ್ನು ಬಳಸಿಕೊಂಡು ಟೆಕ್ನಿಕಲಿ ಹೆಚ್ಚಿನ ಅಪ್ ಗ್ರೇಡ್ ಮಾಡಿ ಚಿತ್ರವನ್ನು ಮತ್ತಷ್ಟು ಕಲರ್ ಫುಲ್ ಮಾಡಿ ರೀ-ರಿಲೀಸ್ ಮಾಡಲಾಗುತ್ತಿದೆ. ಬೆಂಗಳೂರಿನ ಅನುಪಮ, ನವರಂಗ್ ಮತ್ತು ಉಮಾ ಚಿತ್ರಮಂದಿರಗಳಲ್ಲಿ ಹಾಗೂ ಕೋಲಾರದ ಭವಾನಿ ಚಿತ್ರಮಂದಿರದಲ್ಲಿ ಈ ಸಿನಿಮಾ ತೆರೆ ಕಾಣುತ್ತಿದೆ.

ಸುಮಾರು 50 ರಿಂದ 60 ಲಕ್ಷ ರೂಪಾಯಿ ಖರ್ಚು ಮಾಡಿ ಈ ಚಿತ್ರಕ್ಕೆ ಡಿಟಿಎಸ್ ಟೆಕ್ನಾಲಜಿ ಅಳವಡಿಸಿ 1977ರಲ್ಲಿ ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ ಆಕ್ಷನ್-ಕಟ್ ಹೇಳಿದ್ದ 'ಬಬ್ರುವಾಹನ' ಚಿತ್ರಕ್ಕೆ ಹೊಸತನ ತುಂಬಲಾಗಿದೆ.[ಡಾ.ರಾಜ್ ಅವರ ಕಟ್ಟಾಭಿಮಾನಿ ಕುಣಿಗಲ್ ರಾಮನಾಥ್ ಇನ್ನಿಲ್ಲ]

ಚಿತ್ರದಲ್ಲಿ ಡಾ.ರಾಜ್ ಕುಮಾರ್ ಅವರು ದ್ವಿಪಾತ್ರದಲ್ಲಿ ಮಿಂಚಿದ್ದು, ಇವರ ಜೊತೆ ನಾಯಕಿಯರಾಗಿ ಸರೋಜಾ ದೇವಿ, ಕಾಂಚನಾ, ಜಯಮಾಲಾ, ಖಳನಟ ವಜ್ರಮುನಿ, ತೂಗುದೀಪ ಶ್ರೀನಿವಾಸ್, ಶಕ್ತಿ ಪ್ರಸಾದ್ ಮತ್ತು ರಾಮಕೃಷ್ಣ ಮುಂತಾದವರು ಪ್ರಮುಖವಾಗಿ ಕಾಣಿಸಿಕೊಂಡಿದ್ದರು.

ಕಸ್ತೂರಿ ನಿವಾಸವನ್ನು ರೀ-ರಿಲೀಸ್ ಮಾಡಿದ ಕೆಸಿಎನ್ ಗೌಡ ಅವರ ಮಗ ಕೆಸಿಎನ್ ಮೋಹನ್ ಅವರು ಮುಂದಾಳತ್ವ ವಹಿಸಿ ಈ ಚಿತ್ರವನ್ನು ಕಲರ್ ಫುಲ್ ಆಗಿ ರೀ-ರಿಲೀಸ್ ಮಾಡುತ್ತಿದ್ದಾರೆ.[ಡಾ.ರಾಜ್ ಅವರನ್ನು ದೇವರು ಅಂದ ಆ ನಟ ಯಾರು?]

ಅಂತೂ ಇಂತೂ ಮತ್ತೆ ಡಾ.ರಾಜ್ ಅವರ 'ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮವಾ' ಅನ್ನೋ ಡೈಲಾಗ್ ಮತ್ತೇ ಚಿತ್ರಮಂದಿರಗಳಲ್ಲಿ ಮೊಳಗಲಿದ್ದು, ಅಭಿಮಾನಿಗಳು ಹುಚ್ಚೆದ್ದು ಕುಣಿಯೋದು ಗ್ಯಾರಂಟಿ. 'ಬಬ್ರುವಾಹನ'ನ ಕಲರ್ ಫುಲ್ ಫೊಟೋ ನೋಡಲು ಸ್ಲೈಡ್ಸ್ ಕ್ಲಿಕ್ಕಿಸಿ...

-
-
-
-
-
-
-
-
-
-
-
-
-
-
-
-
-
-
-
English summary
Kannada Movie 'Babruvahana', the big blockbuster of the 80's starring 'Varanata' Dr Rajkumar will re-release on April 22. The movie was directed by Hunsur Krishnamurthy in 1977.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada