For Quick Alerts
  ALLOW NOTIFICATIONS  
  For Daily Alerts

  ಡಾ ರಾಜ್ ಯೋಗ ಕೇಂದ್ರ ಸ್ಥಾಪನೆಗೆ ಮುಂದಾದ ಸಿದ್ದರಾಮಯ್ಯ ಸರ್ಕಾರ

  By Pavithra
  |

  ಈ ಬಾರಿಯ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಡಾ ರಾಜ್ ಕುಮಾರ್ ಸ್ಮಾರಕದ ಬಳಿ ಯೋಗ ಕೇಂದ್ರ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಸರ್ಕಾರ ಸ್ಮಾರಕ್ಕಾಗಿ ನೀಡಿದ್ದ ಜಾಗದಲ್ಲಿ ಡಾ ರಾಜ್ ಕುಮಾರ್ ಅವರ ವಸ್ತು ಸಂಗ್ರಹಾಲಯ ಮಾಡಬೇಕಾಗಿ ಡಾ ರಾಜ್ ಕುಟುಂಬದವರು ಯೋಚನೆ ಮಾಡಿದ್ದರು.

  ಡಾ ರಾಜ್ ಕುಮಾರ್ ಪ್ರತಿನಿತ್ಯ ಯೋಗ ಮಾಡುತ್ತಿದ್ದರು ನಾಯ್ಕರ್ ಎನ್ನುವವರು ಅಣ್ಣಾವ್ರಿಗೆ ಯೋಗವನ್ನು ಕಲಿಸುತ್ತಿದ್ದರು. ತಮ್ಮ ಆತ್ಮೀಯರಿಗೂ ಯೋಗ ಕಲಿಯುವಂತೆ ತಿಳಿಸುತ್ತಿದ್ದರು. ಇದೇ ಉದ್ದೇಶವನ್ನು ಇಟ್ಟುಕೊಂಡು ಡಾ ರಾಜ್ ಸ್ಮಾರಕದ ಬಳಿ ಯೋಗ ಕೇಂದ್ರವನ್ನ ಸ್ಥಾಪಿಸಲು ನಿರ್ಧಾರ ಮಾಡಲಾಗಿದೆ.

  ಈ ಬಗ್ಗೆ ಫಿಲ್ಮಿ ಬೀಟ್ ಜೊತೆ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್ "ವಿಚಾರ ಕೇಳಿ ತುಂಬಾ ಖುಷಿ ಆಗಿದೆ. ಅಪ್ಪಾಜಿ ಅವರೇ ಇದನ್ನ ಮಾಡಿಸಿಕೊಳ್ಳುತ್ತಾರೆ ಅಂದರೆ ಅವರಿಗಿರುವ ಖ್ಯಾತಿ ಮತ್ತು ಅಭಿಮಾನಿಗಳಿಂದ ಅವರಿಗೆ ಸಲ್ಲಬೇಕಾದದ್ದು ಎಲ್ಲವೂ ಸಲ್ಲುತ್ತದೆ ಎನ್ನುವುದು ತಿಳಿದಿದ್ದು. ಇದಕ್ಕಾಗಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸುತ್ತೇನೆ" ಎಂದಿದ್ದಾರೆ.

  ಯೋಗ ಕೇಂದ್ರ ಸ್ಥಾಪನೆ ಆದರೆ ಅಣ್ಣಾವ್ರಂತೆ ಅವರ ಅಭಿಮಾನಿಗಳು ಕೂಡ ಯೋಗವನ್ನು ಅಭ್ಯಾಸ ಮಾಡಬಹುದಾಗಿದೆ. ಕಂಠೀರವ ಸ್ಟುಡಿಯೋ ಸುತ್ತಾ ಮುತ್ತ ಇರುವ ಸಾಮಾನ್ಯ ಜನರು ಇದರ ಲಾಭ ಪಡೆದುಕೊಳ್ಳಬಹುದು.

  English summary
  Chief Minister Siddaramaiah announced Dr Rajkumar Yoga Kendra at Rajakumar memorial on the Karnataka budget 2018-19.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X