twitter
    For Quick Alerts
    ALLOW NOTIFICATIONS  
    For Daily Alerts

    ಸಾಹಸಸಿಂಹ ವಿಷ್ಣುವರ್ಧನ್ ಹುಟ್ಟುಹಬ್ಬ ವಿಶೇಷಗಳು

    By Rajendra
    |

    ಈ ಬಾರಿ ಸಾಹಸಸಿಂಹ ವಿಷ್ಣುವರ್ಧನ್ ಅವರ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಅರ್ಥಪೂರ್ಣವಾಗಿ ಆಚರಿಸಲು ವಿಭಾ ಚಾರಿಟೆಬಲ್ ಟ್ರಸ್ಟ್ ಹಾಗೂ ಹಲವಾರು ಸಂಘ ಸಂಸ್ಥೆಗಳು ಕೈಜೋಡಿಸಿವೆ. ಪಟಾಕಿ ಸಿಡಿಸಿ, ವಾದ್ಯಗೋಷ್ಠಿಯಲ್ಲಿ ಜೋರಾಗಿ ಶಿಳ್ಳೆ, ಕೇಕೆ ಹಾಕುವುದು ಸ್ವತಃ ವಿಷ್ಣುವರ್ಧನ್ ಅವರಿಗೂ ಇಷ್ಟವಿರಲಿಲ್ಲ.

    ಜನಕ್ಕೆ ಉಪಯೋಗವಾಗುವಂತಹ ಕೆಲಸ ಮಾಡೋಣ ಎಂದು ಅವರು ಹೇಳುತ್ತಿದ್ದರು. ದೊಡ್ಡದೊಡ್ಡ ಹಾರ ತುರಾಯಿ ಹಾಕಿ ದುಂದುವೆಚ್ಚ ಮಾಡುವುದರಲ್ಲಿ ಅರ್ಥವಿಲ್ಲ ಎನ್ನುತ್ತಿದ್ದರು ಎಂದು ಫಿಲ್ಮಿಬೀಟ್ ಕನ್ನಡ ಜಾಲತಾಣಕ್ಕೆ ವಿವರ ನೀಡಿದರು ವಿಷ್ಣುವರ್ಧನ್ ಅವರ ಅಳಿಯ ಹಾಗೂ ನಟ, ನಿರ್ದೇಶಕ ಅನಿರುದ್ಧ.

    ಡಿಸೆಂಬರ್ ವೇಳೆಗೆ ವಿಷ್ಣುವರ್ಧನ್ ಅವರ ಸಾಹಸಸಿಂಹ ಕಾಮಿಕ್ಸ್ ಸರಣಿಯ ಮುಂದಿನ ಭಾಗಗಳನ್ನು ತರುವುದಾಗಿ ಅನಿರುದ್ಧ ತಿಳಿಸಿದರು. ಹಾಗೆಯೇ ವಿಷ್ಣುವರ್ಧನ್ ಕುರಿತ ಪುಸ್ತಕವನ್ನು ಹೊರತರುತ್ತಿರುವುದಾಗಿಯೂ ಅವರು ಹೇಳಿದರು. ರಜನಿಕಾಂತ್ ಜೊತೆಗಿನ 'ಸಹೊದರರ ಸವಾಲ್' (1977) ಚಿತ್ರವೂ ಬಿಡುಗಡೆಯಾಗುತ್ತಿದೆ.

    ವಿವಿಧ ಸಾಮಾಜಿಕ ಸೇವಾ ಕಾರ್ಯಕ್ರಗಳು

    ವಿವಿಧ ಸಾಮಾಜಿಕ ಸೇವಾ ಕಾರ್ಯಕ್ರಗಳು

    ಈ ಬಾರಿ ವಿಷ್ಣು ಹುಟ್ಟುಹಬ್ಬಕ್ಕೆ ಏನೆಲ್ಲಾ ತಯಾರಿ ಮಾಡಿಕೊಂಡಿದ್ದೇವೆ ಎಂಬ ವಿವರಗಳನ್ನು ಅವರು ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ್ದಾರೆ. ಸೆಪ್ಟೆಂಬರ್ 18ರಂದು ಬೆಳಗ್ಗೆ 8.30ರಿಂದ ಆರಂಭವಾಗುವ ವಿವಿಧ ಸಾಮಾಜಿಕ ಸೇವಾ ಕಾರ್ಯಕ್ರಗಳು ಸಂಜೆ 6 ಗಂಟೆಯವರೆಗೂ ಮುಂದುವರೆಯಲಿವೆ.

    ಉಚಿತ ಉದ್ಯೋಗಾಧಾರಿತ ವೃತ್ತಿ ತರಬೇತಿ

    ಉಚಿತ ಉದ್ಯೋಗಾಧಾರಿತ ವೃತ್ತಿ ತರಬೇತಿ

    ಈ ಬಾರಿಯ ವಿಶೇಷ ಎಂದರೆ ಹಲವಾರು ಉಚಿತ ಉದ್ಯೋಗಾಧಾರಿತ ವೃತ್ತಿ ತರಬೇತಿ ಕಾರ್ಯಕ್ರಮಗಳನ್ನು ಅಭಿಮಾನ ಸ್ಟುಡಿಯೋದಲ್ಲಿ ಆಯೋಜಿಸಲಾಗಿದೆ. ಲೇಟ್ ಸಿವಿಎಲ್ ಶಾಸ್ತ್ರಿ ಪ್ರತಿಷ್ಠಾನ ಈ ತರಬೇತಿ ಕಾರ್ಯಕ್ರಮ ನಡೆಸಿಕೊಡಲಿದೆ.

    ಕಂಪ್ಯೂಟರ್ ಹಾರ್ಡ್ ವೇರ್ ತರಬೇತಿ

    ಕಂಪ್ಯೂಟರ್ ಹಾರ್ಡ್ ವೇರ್ ತರಬೇತಿ

    ಮೊಬೈಲ್ ಫೋನ್ ಸರ್ವೀಸ್, ಫ್ಯಾಷನ್ ಡಿಸೈನ್, ಅಗರಬತ್ತಿ ತಯಾರಿಕೆ, ಕಂಪ್ಯೂಟರ್ ಹಾರ್ಡ್ ವೇರ್, ಸೌರಶಕ್ತಿ ತರಬೇತಿ, ಡಿಟಿಪಿ ತರಬೇತಿ ಮುಂತಾದ ವೃತ್ತಿ ಶಿಕ್ಷಣ ತರಬೇತಿಯನ್ನು ನೀಡಲಾಗುತ್ತದೆ ಎಂದು ಅನಿರುದ್ಧ ವಿವರ ನೀಡಿದರು.

    ಯಾವ ಆರೋಗ್ಯ ತಪಾಸಣೆ ಮಾಡಲಾಗುತ್ತದೆ

    ಯಾವ ಆರೋಗ್ಯ ತಪಾಸಣೆ ಮಾಡಲಾಗುತ್ತದೆ

    ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆ, ಸಾಮಾಜಿಕ ಸೇವಾ ಸಂಸ್ಥೆಗಳು, ಆಸ್ಪತ್ರೆಗಳು, ವೈದ್ಯರು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿದ್ದಾರೆ. ಸಾಮಾನ್ಯ ಆರೋಗ್ಯ ತಪಾಸಣೆಯಿಂದ ಹಿಡಿದು ರಕ್ತದಾನ, ನೇತ್ರ ತಪಾಸಣೆ, ದಂತ ಚಿಕಿತ್ಸೆ, ಹೋಮಿಯೋಪತಿ ಚಿಕಿತ್ಸೆ, ಕಿಡ್ನಿ ಸುರಕ್ಷತೆ, ಕ್ಯಾನ್ಸರ್ ಬಗ್ಗೆ ಜಾಗ್ರತೆ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

    ಆರೋಗ್ಯ ತಪಾಸಣಾ ಶಿಬಿರದಲ್ಲಿ ಕೈಜೋಡಿಸಿರುವವರು

    ಆರೋಗ್ಯ ತಪಾಸಣಾ ಶಿಬಿರದಲ್ಲಿ ಕೈಜೋಡಿಸಿರುವವರು

    ಪೀಣ್ಯ ರೋಟರಿ ಕ್ಲಬ್, ಶಾಸ್ತ್ರಿ ಪ್ರತಿಷ್ಠಾನ, ಬಿಜಿಎಸ್ ಆಸ್ಪತ್ರೆ, ರಾಷ್ಟ್ರೋತ್ಥಾನ ಪರಿಷತ್, ರೆಡ್ ಕ್ರಾಸ್, ನಾರಾಯಣ ಹೆಲ್ತ್, ಆರ್ ವಿ ಡೆಂಟಲ್ ಕಾಲೇಜು, ಪೂರ್ಣಸುಧ ಕ್ಯಾನ್ಸರ್ ಪ್ರತಿಷ್ಠಾನ, ಮಣಿಪಾಲ್ ಆಸ್ಪತ್ರೆ, ಮಾಯಾ ಪ್ರತಿಷ್ಠಾನ ಮುಂತಾದ ಸಂಸ್ಥೆಗಳು ಆರೋಗ್ಯ ತಪಾಸಣೆ ಶಿಬಿರದಲ್ಲಿ ಕೈಜೋಡಿಸಿವೆ.

    English summary
    Sahasa Simha Dr. Vishnuvardhan's 64th birth anniversary will be celebrated on 18th September. To mark the day, a health camp will be conducted at Abhiman Studio. In an interview with Filmibeat, Aniruddha, Son-in-Law of the late superstar, revealed about the plan for the day.
    Thursday, September 18, 2014, 12:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X